ETV Bharat / sports

ರೋಹಿತ್​ ಶರ್ಮಾ ಫಿಟ್​ ಆಗಿ ಕಾಣುತ್ತಿರುವುದು ಟೀಮ್​ ಇಂಡಿಯಾಗೆ ಗ್ರೇಟ್ ನ್ಯೂಸ್​: ಸುನೀಲ್ ಗವಾಸ್ಕರ್​ - ಟೀಮ್ ಇಂಡಿಯಾ

ಕಳೆದ ವಾರ ಆಸೀಸ್ ಪ್ರವಾಸಕ್ಕಾಗಿ ಬಿಸಿಸಿಐ 3 ಮಾದರಿಯ ಭಾರತ ತಂಡವನ್ನು ಪ್ರಕಟಿಸಿತ್ತು. ಈ ಮೂರು ತಂಡಗಳಲ್ಲಿ ರೋಹಿತ್ ಶರ್ಮಾ ಹೆಸರನ್ನು ಕೈಬಿಡಲಾಗಿತ್ತು. ಜೊತೆಗೆ ಕನ್ನಡಿಗ ರಾಹುಲ್​ರನ್ನು ಉಪನಾಯಕನನ್ನಾಗಿ ಆಯ್ಕೆ ಸಮಿತಿ ನೇಮಕ ಮಾಡಿತ್ತು.

ರೋಹಿತ್​ ಶರ್ಮಾ ಫಿಟ್ನೆಸ್​
ರೋಹಿತ್​ ಶರ್ಮಾ ಫಿಟ್ನೆಸ್​
author img

By

Published : Nov 5, 2020, 6:21 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರೋಹಿತ್​ ಶರ್ಮಾ ಆಯ್ಕೆಯಾಗದ ವಿಚಾರ ದೊಡ್ಡ ವಿವಾದವಾಗಿದ್ದು, ಕಳೆದ ಒಂದು ವಾರದಿಂದ ಭಾರತ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದೆ. ಆದರೆ ಹಿಟ್​ಮ್ಯಾನ್ ಕೊನೆಯ ಲೀಗ್ ಪಂದ್ಯದ ವೇಳೆ ಕಣಕ್ಕಿಳಿಯುವ ಮೂಲಕ ತಾವೂ ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ.

ಕಳೆದ ವಾರ ಆಸೀಸ್ ಪ್ರವಾಸಕ್ಕಾಗಿ ಬಿಸಿಸಿಐ 3 ಮಾದರಿಯ ಭಾರತ ತಂಡವನ್ನು ಪ್ರಕಟಿಸಿತ್ತು. ಈ ಮೂರು ತಂಡದಲ್ಲಿ ರೋಹಿತ್ ಶರ್ಮಾ ಹೆಸರನ್ನು ಸೇರಿಸದೆ, ಕನ್ನಡಿಗ ರಾಹುಲ್​ರನ್ನು ವೈಟ್​ ಬಾಲ್​ ಕ್ರಿಕೆಟ್​ನ ಉಪನಾಯಕನನ್ನಾಗಿ ಆಯ್ಕೆ ಸಮಿತಿ ನೇಮಕ ಮಾಡಿತ್ತು.

ಈ ನಿರ್ಧಾರವನ್ನು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್​ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದರು. ರೋಹಿತ್ ಗಾಯದ ವಿಚಾರವಾಗಿ ಕೆಲವು ವಿವಾದಿತ ಹೇಳಿಕೆಗಳು ಕೂಡ ಕೇಳಿಬಂದಿದ್ದವು. ಆದರೆ ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರೋಹಿತ್ ಸನ್​ರೈಸರ್ಸ್​ ವಿರುದ್ಧ ಕಣಕ್ಕಿಳಿದು ತಾವೂ ಫಿಟ್ ಎಂದು ನಿರೂಪಿಸಿದ್ದರು.

ರೋಹಿತ್ ಗಾಯದ ಮೇಲಿನ ವಿವಾದದ ಬಗ್ಗೆ ಮಾತನಾಡಿರುವ ಮಾಜಿ ಟೀಮ್ ಇಂಡಿಯಾ ನಾಯಕ ಗವಾಸ್ಕರ್​ ರೋಹಿತ್ ಫಿಟ್ ಆಗಿರುವುದು ಭಾರತ ತಂಡಕ್ಕೆ ಗ್ರೇಟ್ ನ್ಯೂಸ್​ ಎಂದು ಹೇಳಿದ್ದಾರೆ.

" ರೋಹಿತ್ ಅವರ ಗಾಯಕ್ಕೆ ಸಂಬಂಧಿಸಿದ ವಿಚಾರ, ವಿವಾದಗಳನ್ನು ಬದಿಗೊತ್ತಿ ನೋಡಿದರೆ, ಅವರು ಫಿಟ್ ಆಗಿದ್ದಾರೆ ಎಂಬುವುದೇ ಭಾರತೀಯ ಕ್ರಿಕೆಟ್​ಗೆ ಒಂದು ಉತ್ತಮ ಸುದ್ದಿ ಎಂದು ನಾನು ಹೇಳುತ್ತೇನೆ" ಎಂದು ಗವಾಸ್ಕರ್​ ಹೇಳಿದ್ದಾರೆ.

ನೋಡಿ, ಕ್ರಿಕೆಟ್​ಗೆ ಮರಳಲು ಆತುರಪಡಿಸಿದರೆ ಮುಂದೆ ಸಮಸ್ಯೆಯಾಗಬಹುದು ಎಂದು ಎಲ್ಲರೂ ಹೇಳುತ್ತಿರುವುದು ರೋಹಿತ್ ಮೇಲಿನ ಕಾಳಜಿಯಾಗಿದೆ. ಏಕೆಂದರೆ ಕೆಲವೊಮ್ಮೆ ಸ್ನಾಯು ಸಂಬಂಧಿ ಗಾಯಗಳು ಮರುಕಳಿಸಬಹುದು. ಆದ್ದರಿಂದ ಅಂತಹ ವಿಷಯಗಳಲ್ಲಿ ಸಮಯ ತೆಗೆದುಕೊಳ್ಳುವುದು ಅರ್ಥಪೂರ್ಣವಾದದ್ದಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ರೋಹಿತ್ ಫಿಟ್​ ಆಗಿದ್ದು, ಆತ್ಮವಿಶ್ವಾಸದಿಂದ ಕಾಣಿಸುತ್ತಿರುವುದು ಇಲ್ಲಿ ಪ್ರಮುಖ ವಿಚಾರವಾಗಿದೆ. ಅವರು ಕೊನೆಯ ಲೀಗ್ ಪಂದ್ಯದಲ್ಲಿ ಬೌಂಡರಿ ಲೈನ್ ಹಾಗೂ 30 ಅಡಿ ಸರ್ಕಲ್​ನಲ್ಲೂ ಫೀಲ್ಡಿಂಗ್ ಮಾಡಿದ್ದಾರೆ. ಈ ಮೂಲಕ ಬಿಸಿಸಿಐಗೆ ತಾವೂ ಫಿಟ್​ ಆಗಿರುವುದನ್ನ ತೋರಿಸಿಕೊಟ್ಟಿದ್ದಾರೆ. ಆದರೆ ಬಿಸಿಸಿಐ ಏನಾದರೂ ಅವರ ಫಿಟ್​ನೆಸ್​ ಬಗ್ಗೆ ಮತ್ತೆ ಪರೀಕ್ಷೆ ಮಾಡಲು ಬಯಸಿದರೇ ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅವರು ಸಂಪೂರ್ಣ ಪಿಟ್​ ಇದ್ದಾರಾ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಗವಾಸ್ಕರ್​ ತಿಳಿಸಿದ್ದಾರೆ.

ಒಟ್ಟಿನಲ್ಲಿ ರೋಹಿತ್ ಫಿಟ್​ ಆಗಿದ್ದು, ಐಪಿಎಲ್​ನಲ್ಲಿ ಅದನ್ನು ನಿರೂಪಿಸಿರುವುದು ಭಾರತ ತಂಡಕ್ಕೆ ಒಂದು ಬಲ ತಂದುಕೊಟ್ಟಿದೆ ಎಂದು ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.