ETV Bharat / sports

ಮಹಿಳಾ ಟಿ-20 ವಿಶ್ವಕಪ್​ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ: ಟಾಸ್​ ಗೆದ್ದ ಆಸೀಸ್​ ಫೀಲ್ಡಿಂಗ್​ ಆಯ್ಕೆ

2020ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಟೂರ್ನಮೆಂಟ್​ನ ಉದ್ಘಾಟನಾ ಪಂದ್ಯದಲ್ಲಿ ಟಾಸ್​ಗೆದ್ದ ಆಸ್ಟ್ರೇಲಿಯಾ ವನಿತೆಯರ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟೀಂ ಇಂಡಿಯಾ ವನಿತೆಯರನ್ನ ಬ್ಯಾಟಿಂಗ್​ಗೆ ಆಹ್ವಾನಿಸಿದ್ದಾರೆ.

author img

By

Published : Feb 21, 2020, 1:32 PM IST

ICC Women's T20 World Cupಮಹಿಳಾ ಟಿ-20 ವಿಶ್ವಕಪ್​
ಮಹಿಳಾ ಟಿ-20 ವಿಶ್ವಕಪ್​

ಸಿಡ್ನಿ(ಆಸ್ಟ್ರೇಲಿಯಾ): 2020ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಟೂರ್ನ ಮೆಂಟ್​ನ ಉದ್ಘಾಟನಾ ಪಂದ್ಯದಲ್ಲಿ ಟಾಸ್​ಗೆದ್ದ ಆಸ್ಟ್ರೇಲಿಯಾ ವನಿತೆಯರ ತಂಡ ಬೌಲಿಂಗ್ ಆಯ್ದುಕೊಂಡಿದೆ.

2017 ರ ಮಹಿಳಾ ವಿಶ್ವಕಪ್‌ನಲ್ಲಿ ರನ್ನರ್ಸ್ ಅಪ್ ಸ್ಥಾನ ಗಳಿಸಿ, 2018ರ ಮಹಿಳಾ ವಿಶ್ವಕಪ್​ ಟಿ-20 ಟೂರ್ನಿಯಲ್ಲಿ ಸೆಮಿಫೈನಲ್ ಹಂತದ ವರೆಗೂ ತಲುಪಿದ್ದ ವನಿತೆಯರ ತಂಡ ಕಳೆದ ಕೆಲ ದಿನಗಳಿಂದ ತನ್ನ ಶಕ್ತಿ ಹೆಚ್ಚಿಸಿಕೊಂಡಿದ್ದು, ಆಸಿಸ್​ ತಂಡಕ್ಕೆ ಟಕ್ಕರ್​ ಕೊಡಲು ಸಿದ್ಧರಾಗಿದ್ದಾರೆ.

ಹಾಲಿ ಟಿ-20 ಚಾಂಪಿಯನ್​ ಆಸ್ಟ್ರೇಲಿಯಾ ವನಿತೆಯರ ತಂಡಕ್ಕೆ ತವರಿನ ಲಾಭ ಸಿಗಲಿದ್ದು, 5ನೇ ಬಾರಿ ಕಪ್​ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಟೂರ್ನಿಗು ಮೊದಲು ನಡೆದ ತ್ರಿಕೋನ ಟಿ-20 ಸರಣಿಯಲ್ಲಿ ಭಾರತ ತಂಡದ ವಿರುದ್ಧ ಜಯ ಸಾಧಿಸಿದ್ದು ಆಸೀಸ್​ ಆಟಗಾರ್ತಿಯರ ಆತ್ಮವಿಶ್ವಾಸ ಹೆಚ್ಚಿಸಿದೆ.

ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ಶಿಖಾ ಪಾಂಡೆ, ತಾನಿಯಾ ಭಾಟಿಯಾ (ಕೀಪರ್), ಅರುಂಧತಿ ರೆಡ್ಡಿ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್

ಆಸ್ಟ್ರೇಲಿಯಾ ತಂಡ: ಅಲಿಸಾ ಹೀಲಿ (ಕೀಪರ್), ಬೆತ್ ಮೂನಿ, ಆಶ್ಲೀ ಗಾರ್ಡ್ನರ್, ಮೆಗ್ ಲ್ಯಾನಿಂಗ್ (ನಾಯಕಿ), ಎಲಿಸ್ ಪೆರ್ರಿ, ರಾಚೆಲ್ ಹೇನ್ಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸ್ಸೆನ್, ಡೆಲಿಸ್ಸಾ ಕಿಮ್ಮಿನ್ಸ್, ಮೊಲ್ಲಿ ಸ್ಟ್ರಾನೊ, ಮೆಗಾನ್ ಶುಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.