ನವದೆಹಲಿ : ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ತಮ್ಮ ಕುಟುಂಬದ ಸದಸ್ಯರಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದ ಹಿನ್ನೆಲೆ ತಾವೂ ಕೂಡ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದರು. ಆದರೆ, ತನ್ನ ವರದಿ ಈಗ ನೆಗೆಟಿವ್ ಎಂದು ಬಂದಿದೆ ಅಂತಾ ಗಂಭೀರ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿರುವುದರಿಂದ ಸುರಕ್ಷಿತವಾಗಿರಲು ಪ್ರತಿಯೊಬ್ಬರು ಸರ್ಕಾರ ಘೋಷಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಆಗ್ರಹಿಸಿದ್ದಾರೆ.
-
Glad to share that my COVID test result is negative. Thank you for all the wishes. I again urge everyone to strictly follow guidelines. Stay safe.
— Gautam Gambhir (@GautamGambhir) November 8, 2020 " class="align-text-top noRightClick twitterSection" data="
">Glad to share that my COVID test result is negative. Thank you for all the wishes. I again urge everyone to strictly follow guidelines. Stay safe.
— Gautam Gambhir (@GautamGambhir) November 8, 2020Glad to share that my COVID test result is negative. Thank you for all the wishes. I again urge everyone to strictly follow guidelines. Stay safe.
— Gautam Gambhir (@GautamGambhir) November 8, 2020
"ನನ್ನ ಕೋವಿಡ್ ಪರೀಕ್ಷಾ ವರದಿಯ ಫಲಿತಾಂಶ ನೆಗೆಟಿವ್ ಬಂದಿದೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನನಗೆ ಶುಭ ಕೋರಿದ್ದ ಎಲ್ಲರಿಗೂ ಧನ್ಯವಾದಗಳು. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ನಾನು ಮತ್ತೊಮ್ಮೆ ಎಲ್ಲರನ್ನೂ ಒತ್ತಾಯಿಸುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ " ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ತಮ್ಮ ಮನೆಯಲ್ಲಿ ಸದಸ್ಯರೊಬ್ಬರು ಕೋವಿಡ್-19 ಪಾಸಿಟಿವ್ ವರದಿ ಪಡೆದಿದ್ದರಿಂದ ತಾವೂ ಕೂಡ ಕ್ವಾರಂಟೈನ್ನಲ್ಲಿರುವೆ. ಕೋವಿಡ್ ಪರೀಕ್ಷೆಗೊಳಗಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿರುವೆ ಅಂತಾ ಮಾಜಿ ಕ್ರಿಕೆಟಿಗ ಗಂಭೀರ್ ಹೇಳಿದ್ದರು.