ETV Bharat / sports

ಎರಡು ಕಾಲಿಲ್ಲದಿದ್ದರೂ ತೆವಳಿಕೊಂಡೇ ಕ್ರಿಕೆಟ್​ ಆಡಿದ ಬಾಲಕ:  ಸಲಾಂ ಎಂದ  ತೆಂಡೂಲ್ಕರ್​... ವಿಡಿಯೋ - ಅಂಗವಿಕಲ ಬಾಲಕನ ಕ್ರಿಕೆಟ್​

ಎರಡು ಕಾಲು ಸರಿಯಿಲ್ಲದಿದ್ದರೂ ಕ್ರಿಕೆಟ್​ ಮೇಲಿನ ಪ್ರೇಮದಿಂದ ತನ್ನ ಸ್ನೇಹಿತರೊಂದಿಗೆ ಮೈದಾನದಲ್ಲಿ ತವಳಿಕೊಂಡೇ ಕ್ರಿಕೆಟ್​ ಆಡುತ್ತಿರುವ ಬಾಲಕನ ವಿಡಿಯೋವನ್ನು ಸಚಿನ್​ ತೆಂಡೂಲ್ಕರ್​ ಟ್ವೀಟ್​ ಮಾಡಿದ್ದು, " 2020ಕ್ಕೆ ಕಾಲಿಡಲು ನಿಮಗೆ ಈ ವಿಡಿಯೋ ಸ್ಫೂರ್ತಿಯಾಗಲಿದೆ" ಎಂದು ಬರೆದುಕೊಂಡಿದ್ದಾರೆ

Sachin tendulkar shared motivational video

author img

By

Published : Jan 1, 2020, 5:42 PM IST

ಮುಂಬೈ: ಕ್ರಿಕೆಟ್​ ಕ್ರೀಡಾ ಜಗತ್ತಿನಲ್ಲಿ ಜಂಟಲ್​ಮ್ಯಾನ್​ ಗೇಮ್​ ಎಂದು ಕರೆಸಿಕೊಂಡಿದೆ. ವಯಸ್ಸಿನ ಮಿತಿಯಿಲ್ಲದೇ ಕೋಟ್ಯಂತರ ಮಂದಿ ಅಭಿಮಾನಿಗಳಲ್ಲಿ ತನ್ನತ್ತಾ ಆಕರ್ಷಿಸಿಕೊಂಡಿರುವ ಕ್ರಿಕೆಟ್ ವಿಕಲಚೇತನರನ್ನೂ ಬಿಟ್ಟಿಲ್ಲ ಎಂಬುವುದಕ್ಕೆ ಕ್ರಿಕೆಟ್​ ದೇವರು ಶೇರ್​ ಮಾಡಿಕೊಂಡಿರುವ ವಿಡಿಯೋ ಸಾಕ್ಷಿಯಾಗಿದೆ.

ಎರಡು ಕಾಲು ಸರಿಯಿಲ್ಲದಿದ್ದರೂ ಕ್ರಿಕೆಟ್​ ಮೇಲಿನ ಪ್ರೇಮದಿಂದ ತನ್ನ ಸ್ನೇಹಿತರೊಂದಿಗೆ ಮೈದಾನದಲ್ಲಿ ತವಳಿಕೊಂಡೇ ಕ್ರಿಕೆಟ್​ ಆಡುತ್ತಿರುವ ಬಾಲಕನ ವಿಡಿಯೋವನ್ನು ಸಚಿನ್​ ತೆಂಡೂಲ್ಕರ್​ ಟ್ವೀಟ್​ ಮಾಡಿದ್ದು, " 2020ಕ್ಕೆ ಕಾಲಿಡಲು ನಿಮಗೆ ಈ ವಿಡಿಯೋ ಸ್ಫೂರ್ತಿಯಾಗಲಿ" ಎಂದು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.

  • Start your 2020 with the inspirational video of this kid Madda Ram playing cricket 🏏 with his friends.
    It warmed my heart and I am sure it will warm yours too. pic.twitter.com/Wgwh1kLegS

    — Sachin Tendulkar (@sachin_rt) January 1, 2020 " class="align-text-top noRightClick twitterSection" data=" ">

ಈ ವಿಡಿಯೋ ನನ್ನ ಹೃದಯವನ್ನು ತುಂಬಿಬರುವಂತೆ ಮಾಡಿದೆ, ನಿಮಗೂ ಹಾಗೆ ಆಗುತ್ತದೆ ಎಂದು ಭಾವಿಸಿದ್ದೇನೆ ಎಂದು ಸಚಿನ್​ ಭಾವಾನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಕೇವಲ 55 ಸೆಕೆಂಡ್​ ಇರುವ ಈ ವಿಡಿಯೋವನ್ನು 51 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, 55 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 8 ಸಾವಿರಕ್ಕೂ ಹೆಚ್ಚು ಜನರೂ ರೀಟ್ವೀಟ್​ ಮಾಡಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.