ETV Bharat / sports

ಪಠಾಣ್​, ಪಾಂಡ್ಯ ಬ್ರದರ್ಸ್​ರಂತೆ ಇಂಡಿಯಾ ಪರ ಆಡಲಿರುವ ಚಹಾರ್​ ಬ್ರದರ್ಸ್​ - national

ಅಮರನಾಥ್​, ಪಠಾಣ್ ಹಾಗೂ ಪಾಂಡ್ಯ ಬ್ರದರ್ಸ್ ನಂತರ ಚಹಾರ್ ಬ್ರದರ್ಸ್​​ ಟೀಮ್ ಇಂಡಿಯಾ ಪರ ಒಂದೇ ಪಂದ್ಯದಲ್ಲಿ ಆಡಲಿದ್ದಾರೆ.

ಚಹಾರ್​ಬ್ರದರ್ಸ್​
author img

By

Published : Jul 22, 2019, 10:51 PM IST

Updated : Jul 22, 2019, 10:56 PM IST

ಹೈದರಾಬಾದ್​: ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಈಗಾಗಲೇ ಮೂರು ಮಾದರಿ ಕ್ರಿಕೆಟ್​ಗೂ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಎಂಎಸ್​ಕೆ ಪ್ರಸಾದ್​ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರುವ 15 ಸದಸ್ಯರ ಟಿ20 ತಂಡದಲ್ಲಿ ರಾಜಸ್ಥಾನದ ಮೂವರು ಯುವ ಕ್ರಿಕೆಟಿಗರಿಗೆ ಮಣೆ ಹಾಕಿದೆ. ವೇಗಿ ಖಲೀಲ್​ ಅಹ್ಮದ್​ ಮತ್ತು ಚಹಾರ್​ ಬ್ರದರ್ಸ್​ ಚಾನ್ಸ್​ ಪಡೆದುಕೊಂಡಿದ್ದಾರೆ.

ಸಹೋದರರಾದ ದೀಪಕ್ (ವೇಗಿ)​ ಮತ್ತು ರಾಹುಲ್​ ಚಾಹರ್ (ಸ್ಪಿನ್ನರ್​) ಒಟ್ಟಿಗೆ ಆಯ್ಕೆಗೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ, ಅಮರನಾಥ, ಪಠಾಣ್ ಹಾಗೂ ಪಾಂಡ್ಯ ಬ್ರದರ್ಸ್ ನಂತರ ಚಹಾರ್​ ಬ್ರದರ್ಸ್​​ ಟೀಮ್ ಇಂಡಿಯಾ ಪರ ಒಂದೆ ಪಂದ್ಯದಲ್ಲಿ ಆಡಲಿದ್ದಾರೆ. ಈ ಕುರಿತು ಬಹುದಿನಗಳ ಆಸೆ ಈಡೇರಿದೆ ಎಂದು ದೀಪಕ್ ಮತ್ತು ರಾಹುಲ್​ ಚಹಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮೂವರು ವೆಸ್ಟ್​​ ಇಂಡೀಸ್ 'ಎ' ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಬಿಸಿಸಿಐ ಯುವ ಕ್ರಿಕೆಟಿಗರನ್ನು ಆಯ್ಕೆ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಉತ್ತಮ ಮಾರ್ಗ ತೋರಿಸಿದೆ ಎಂದು ರಾಜಸ್ಥಾನ ಕ್ರಿಕೆಟ್ ಮಂಡಳಿ (ಆರ್‌ಸಿಬಿ) ತಿಳಿಸಿದೆ.

ಐಪಿಎಲ್​ನಲ್ಲಿ ಖಲೀಲ್​ ಅಹ್ಮದ್ ಸನ್​ರೈಸರ್ಸ್ ಹೈದರಾಬಾದ್​ ಪರ​, ದೀಪಕ್​ ಚಹಾರ್ ಚನ್ಮೈ ಸೂಪರ್ ಕಿಂಗ್ಸ್​ ಪರ​ ಮತ್ತು ರಾಹುಲ್ ಚಹಾರ್ ಮುಂಬೈ ಇಂಡಿಯನ್ಸ್​ ಪರ ​​ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ರಾಹುಲ್​ ಬೌಲಿಂಗ್​ ನಿರ್ವಹಣೆ ಕುರಿತು ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಖಲೀಲ್​ ಏಕದಿನ ಮತ್ತು ಟಿ20ಗೆ, ಚಹಾರ್​ ಬ್ರದರ್ಸ್​ ಟಿ20ಗೆ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.

ಆಗಸ್ಟ್​ 3ರಿಂದ ಟಿ20 ಸರಣಿ ಆರಂಭವಾಗಲಿದ್ದು, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಯಾರಿಗೆ 11ರ ಬಳಗದಲ್ಲಿ ಅವಕಾಶ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Intro:Body:Conclusion:
Last Updated : Jul 22, 2019, 10:56 PM IST

For All Latest Updates

TAGGED:

national
ETV Bharat Logo

Copyright © 2025 Ushodaya Enterprises Pvt. Ltd., All Rights Reserved.