ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಂಗ್ಲೆಂಡ್‌ನ ಲೇಡಿ ಧೋನಿ ಸಾರಾ!

ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ನ ಧೋನಿ ಎಂದೇ ಪ್ರಸಿದ್ಧಿಯಾಗಿದ್ದ ಸಾರಾ ಟೇಲರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ.

ಸಾರಾ ಟೇಲರ್​
author img

By

Published : Sep 27, 2019, 11:31 PM IST

ಲಂಡನ್​​: ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ಅನುಭವಿ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಾರಾ ಟೇಲರ್​ ದಿಢೀರ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Sarah Taylor
ಸಾರಾ ಟೇಲರ್​ ಸಂಭ್ರಮ

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ನ ಲೇಡಿ ಧೋನಿ ಎಂದು ಹೆಸರು ಮಾಡಿದ್ದ ಸಾರಾ, ಬರೋಬ್ಬರಿ 13 ವರ್ಷಗಳ ಕಾಲ ಕ್ರಿಕೆಟ್​ ಆಡಿದ್ದು,126 ಏಕದಿನ ಕ್ರಿಕೆಟ್​​ ಪಂದ್ಯದಿಂದ 7 ಶತಕ ಹಾಗೂ 20 ಅರ್ಧಶತಕ ಸಿಡಿಸಿದ್ದು, 90 ಟಿ-20 ಪಂದ್ಯಗಳಿಂದ 2,177ರನ್​ ಸಿಡಿಸಿದ್ದಾರೆ. ಅದ್ಭುತ ವಿಕೆಟ್​ ಕೀಪರ್​ ಎಂಬ ಹೆಸರು ಗಳಿಸಿದ್ದ ಸಾರಾ ಎಲ್ಲ ಮಾದರಿ ಕ್ರಿಕೆಟ್​​ನಿಂದ 232 ಪ್ಲೇಯರ್ಸ್​ ಔಟ್​ ಮಾಡಿದ್ದಾರೆ. ಎಲ್ಲ ಮಾದರಿಗಳಿಂದ 226 ಪಂದ್ಯಗಳನ್ನಾಡಿ 6,533ರನ್​ಗಳಿಕೆ ಮಾಡಿದ್ದು, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ದಾಖಲಿಸಿದ ಇಂಗ್ಲೆಂಡ್‌ನ ಎರಡನೇ ಆಟಗಾರ್ತಿಯಾಗಿದ್ದಾರೆ.

Sarah Taylor
ಸಾರಾ ಟೇಲರ್​ ಬ್ಯಾಟಿಂಗ್​ ಅಬ್ಬರ

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮೂರು ಸಲ ವಿಶ್ವ ಚಾಂಪಿಯನ್​​ ಪಟ್ಟ, ಮೂರು ಸಲ ಐಸಿಸಿ ಮಹಿಳಾ ಟಿ-20 ಕ್ರಿಕೆಟರ್​ ಆಫ್​ ದಿ ಇಯರ್​ ಹಾಗೂ ಒಂದು ಸಲ ಐಸಿಸಿ ಮಹಿಳಾ ಏಕದಿನ ಕ್ರಿಕೆಟರ್​ ಆಫ್​ ದಿ ಇಯರ್​ ಪ್ರಶಸ್ತಿ ಪಡೆದುಕೊಂಡಿರುವ ಸಾಧನೆ ಸಾರಾ ಮಾಡಿದ್ದಾರೆ.

Sarah Taylor
ಸಾರಾ ಟೇಲರ್​ ಸಂಭ್ರಮ

ಖಿನ್ನತೆ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ದಿಢೀರ್​ ಆಗಿ ಕ್ರಿಕೆಟ್​ ವೃತ್ತಿ ಬದುಕಿಗೆ ಈ ಚೆಲುವೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಾರಾ, ಕಠಿಣ ನಿರ್ಧಾರ ತೆಗೆದುಕೊಂಡಿರುವೆ. ಆದರೆ, ಸರಿಯಾದ ಸಮಯದಲ್ಲಿ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದೇನೆ. ನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

Intro:Body:

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಂಗ್ಲೆಂಡ್‌ನ ಲೇಡಿ ಧೋನಿ! 

ಲಂಡನ್​​: ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ಅನುಭವಿ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಾರಾ ಟೇಲರ್​ ದಿಢೀರ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ನ ಲೇಡಿ ಧೋನಿ ಎಂದು ಹೆಸರು ಮಾಡಿದ್ದ ಸಾರಾ, ಬರೋಬ್ಬರಿ 13 ವರ್ಷಗಳ ಕಾಲ ಕ್ರಿಕೆಟ್​ ಆಡಿದ್ದು,126 ಏಕದಿನ ಕ್ರಿಕೆಟ್​​ ಪಂದ್ಯದಿಂದ 7 ಶತಕ ಹಾಗೂ 20 ಅರ್ಧಶತಕ ಸಿಡಿಸಿದ್ದು, 90 ಟಿ-20 ಪಂದ್ಯಗಳಿಂದ 2,177ರನ್​ ಸಿಡಿಸಿದ್ದಾರೆ. ಅದ್ಭುತ ವಿಕೆಟ್​ ಕೀಪರ್​ ಎಂಬ ಹೆಸರು ಗಳಿಸಿದ್ದ ಸಾರಾ ಎಲ್ಲ ಮಾದರಿ ಕ್ರಿಕೆಟ್​​ನಿಂದ 232 ಪ್ಲೇಯರ್ಸ್​ ಔಟ್​ ಮಾಡಿದ್ದಾರೆ. ಎಲ್ಲ ಮಾದರಿಗಳಿಂದ 226 ಪಂದ್ಯಗಳನ್ನಾಡಿ 6,533ರನ್​ಗಳಿಕೆ ಮಾಡಿದ್ದು,ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ದಾಖಲಿಸಿದ ಇಂಗ್ಲೆಂಡ್‌ನ ಎರಡನೇ ಆಟಗಾರ್ತಿಯಾಗಿದ್ದಾರೆ. 

ಖಿನ್ನತೆ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ದಿಢೀರ್​ ಆಗಿ ಕ್ರಿಕೆಟ್​ ವೃತ್ತಿ ಬದುಕಿಗೆ ಈ ಚೆಲುವೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಾರಾ, ಕಠಿಣ ನಿರ್ಧಾರ ತೆಗೆದುಕೊಂಡಿರುವೆ. ಆದರೆ ಸರಿಯಾದ ಸಮಯದಲ್ಲಿ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದಾನೆ. ನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.