ಮುಂಬೈ: ಜೀವನದಲ್ಲಿ ಶಾರ್ಟ್ಕಟ್ ಇರಬಾರದು ಎಂದು ಭಾರತ ತಂಡದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಸಲಹೆ ನೀಡಿದ್ದಾರೆ.
ಮುಂಬೈ ಟಿ-20 ಲೀಗ್ನಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ವೆಸ್ಟ್ರನ್ ಸೂಪರ್ಬ್ ತಂಡದ ಪರ ಆಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಸಚಿನ್ ತೆಂಡೂಲ್ಕರ್ ಕೂಡ ಹಾಜರಿದ್ರು. ಈ ವೇಳೆ ಒತ್ತಡ ಸಮಯವನ್ನ ನಿಭಾಯಿಸುವುದು ಹೇಗೆ ಎಂದು ನಿಮ್ಮ ಪುತ್ರನಿಗೆ ಯಾವ ರೀತಿ ಸಲಹೆ ನೀಡುತ್ತೀರಿ ಎಂದು ಪ್ರಶ್ನೆ ಕೇಳಲಾಯ್ತು.
ಈ ವೇಳೆ ಮಾತನಾಡಿದ ಸಚಿನ್, ನಾನು ಯಾವ ವಿಷಯದಲ್ಲೂ ಅರ್ಜುನ್ಗೆ ಒತ್ತಾಯ ಮಾಡಲ್ಲ. ಕ್ರಿಕೆಟ್ ಆಡು ಎಂದೂ ನಾನು ಎಂದೂ ಒತ್ತಾಯ ಮಾಡಿಲ್ಲ. ಮೊದಲು ಅರ್ಜುನ್ ಫುಟ್ಬಾಲ್ ಇಷ್ಟಪಡುತ್ತಿದ್ದ. ನಂತರ ಕ್ರಿಕೆಟ್ ಆಡಲು ಶುರು ಮಾಡಿದ. ನಿನಗೆ ಯಾವುದು ಇಷ್ಟವೋ ಅದನ್ನೇ ಮಾಡು ಆದ್ರೆ ಯಾವುದಕ್ಕೂ ಶಾರ್ಟ್ ಕಟ್ ಬಳಸಬೇಡ ಎಂದು ಸಲಹೆ ಎಂದು ಹೇಳುತ್ತೇನೆ. ನನ್ನ ತಂದೆ ಕೂಡ ಇದನ್ನೇ ಹೇಳಿದ್ದರು ಎಂದಿದ್ದಾರೆ.
ಮುಂಬೈ ಟಿ-20 ಲೀಗ್ ಒಂದು ಉತ್ತಮ ವೇದಿಕೆಯಾಗಿದೆ. ಯುವ ಆಟಗಾರರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.