ನವದೆಹಲಿ: ಬರೋಬ್ಬರಿ 4 ಕೋಟಿರೂ ಮೊತ್ತಕ್ಕೆ ಆರ್ಸಿಬಿ ಸೇರಿದ್ದ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಈ ಬಾರಿ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿರುವುದಕ್ಕೆ ಕಾರಣ ಬಹಿರಂಗ ಪಡಿಸಿದ್ದಾರೆ.
2019ರ ಹರಾಜಿನಲ್ಲಿ ಕೇನ್ ರಿಚರ್ಡ್ಸರನ್ರನ್ನು ಆರ್ಸಿಬಿ 4 ಕೋಟಿ ರೂ ನೀಡಿ ಖರೀದಿಸಿತ್ತು. ಬೌಲರ್ಗಳ ಕೊರೆತೆಯನ್ನು ಎದುರಿಸುತ್ತಿದ್ದ ಆರ್ಸಿಬಿ ಆ ವಿಭಾಗವನ್ನು ಬಲಿಷ್ಟಗೊಳಿಸಲು ರಿಚರ್ಡ್ಸನ್ರನ್ನು ಖರೀದಿಸಿತ್ತು. ಆದರೆ ಅವರು ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಅವರ ನಿರ್ಧಾರದ ಬಳಿಕ ಆರ್ಸಿಬಿ ಆಸ್ಟ್ರೆಲಿಯಾದ ಸ್ಪಿನ್ನರ್ ಆ್ಯಡಂ ಜಂಪಾರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆದರೆ ಐಪಿಎಲ್‌ನಿಂದ ಹಿಂದೆ ಸರಿಯುವುದು ಕಠಿಣ ನಿರ್ಧಾರ ಎಂದು ತಿಳಿದಿದ್ದರೂ, ಪ್ರಸ್ತುತ ನಿರ್ಧಾರದಲ್ಲಿ ಅದು ಉತ್ತಮವಾದ್ದು ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಕೇನ್ ರಿಚರ್ಡ್ಸನ್ ಅವರ ಪತ್ನಿ ಗರ್ಭಿಣಿಯಾಗಿದ್ದು ಐಪಿಎಲ್ ಸಂದರ್ಭದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೇ ಕಾರಣಕ್ಕೆ ತಾವು ಐಪಿಎಲ್‌ನಿಂದ ಹಿಂದೆ ಸರಿದಿರುವುದಾಗಿ ಕೇನ್ ತಿಳಿಸಿದ್ದಾರೆ. "ಮೊದಲ ಮಗುವಿನ ಜನನದ ಸಂದರ್ಭದಲ್ಲಿ ಪತ್ನಿ ಜೊತೆಯಾಗಿರುವುದನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ" ಎಂದು ಅವರು ತಮ್ಮ ದೃಢ ನಿರ್ಧಾರದ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ,
ಐಪಿಎಲ್‌ನ ಭಾಗವಾಗದಿರುವುದಕ್ಕೆ ನಾನು ಖಂಡಿತಾ ನಿರಾಸೆಗೊಂಡಿದ್ದೇನೆ. ಆದರೆ ಭವಿಷ್ಯದಲ್ಲಿ ಈ ಅವಕಾಶ ಮತ್ತೆ ದೊರೆಯಬಹುದೆಂಬ ಆಶಾವಾದದಲ್ಲಿದ್ದೇನೆ ಎಂದು ರಿಚರ್ಡ್ಸನ್ ಹೇಳಿದ್ದಾರೆ.
2013ರಿಂದ 2016ವರೆಗೆ ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟಾರೆ 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ18 ವಿಕೆಟ್ ಪಡೆದಿದ್ದಾರೆ.