ಹೈದರಾಬಾದ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲಖನೌ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕೊರೊನಾ ವೈರಸ್ ಭೀತಿದಿಂದ ಪ್ರೇಕ್ಷಕರಿಲ್ಲದೆ ನಡೆಯಲಿವೆ.
-
NEWS: The remaining two ODIs of the ongoing series between India and South Africa to be played behind closed doors #INDvsSA
— BCCI (@BCCI) March 12, 2020 " class="align-text-top noRightClick twitterSection" data="
Read More here 👉https://t.co/OU1BLRfg0v pic.twitter.com/r0QQNTJUlX
">NEWS: The remaining two ODIs of the ongoing series between India and South Africa to be played behind closed doors #INDvsSA
— BCCI (@BCCI) March 12, 2020
Read More here 👉https://t.co/OU1BLRfg0v pic.twitter.com/r0QQNTJUlXNEWS: The remaining two ODIs of the ongoing series between India and South Africa to be played behind closed doors #INDvsSA
— BCCI (@BCCI) March 12, 2020
Read More here 👉https://t.co/OU1BLRfg0v pic.twitter.com/r0QQNTJUlX
'ಕ್ರೀಡಾ ಸಚಿವಾಲಯ ಹೊರಡಿಸಿದ ಸಲಹೆಯ ನಂತರ, ನಾವು ಮತ್ತು ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಪ್ರೇಕ್ಷಕರಿಲ್ಲದೆ ಎರಡನೇ ಏಕದಿನ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ' ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ 18 ರಂದು ನಡೆಯಲಿರುವ ಮೂರನೇ ಏಕದಿನ ಪಂದ್ಯ ಕೂಡ ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಬಿಸಿಸಿಐ ಕೂಡ ಸ್ಪಷ್ಟನೆ ನೀಡಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಮುಂದಿನ ಎರಡೂ ಏಕದಿನ ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯಲಿವೆ ಎಂದು ತಿಳಿಸಿದೆ.