ನವದೆಹಲಿ: ಒಂದೇ ಸಮಯದಲ್ಲಿ ಎರಡಕ್ಕಿಂತ ಹೆಚ್ಚು ಹುದ್ದೆ ನಿರ್ವಹಿಸುತ್ತಿರುವ ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಿಗೆ ಕ್ರಿಕೆಟ್ ಕಮೆಂಟರಿ ಅಥವಾ ಐಪಿಲ್ ಟೀಂ ಮೆಂಟರ್ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳುವಂತೆ ಬಿಸಿಸಿಐ ಆದೇಶಿಸಿದೆ.
ಬಿಸಿಸಿಐ ನಿಯಮ 38(4)ರ ಪ್ರಕಾರ, ಏಕಕಾಲದಲ್ಲಿ ಓರ್ವ ವ್ಯಕ್ತಿ ಕೇವಲ ಒಂದು ಹುದ್ದೆಯನ್ನ ಹೊಂದಬೇಕು. ಆಟಗಾರ, ಆಯ್ಕೆ ಸಮಿತಿ ಸದಸ್ಯ, ಕಮೆಂಟೇಟರ್, ಆಡಳಿತ ಅಧಿಕಾರಿ, ಕ್ರಿಕೆಟ್ ಅಕಾಡೆಮಿ ಮಾಲೀಕ ಹೀಗೆ ಯಾವುದಾದರು ಒಂದು ಹುದ್ದೆಯನ್ನ ಹೊಂದಿರಬೇಕು ಎಂಬ ನಿಯಮವಿದೆ.
ಆದರೆ, ಸಚಿನ್ ತೆಂಡುಲ್ಕರ್-ಮುಂಬೈ ಮತ್ತು ವಿವಿಎಸ್ ಲಕ್ಷ್ಮಣ್ - ಸನ್ರೈಸರ್ಸ್ ಹೈದರಾಬಾದ್, ಗಂಗೂಲಿ - ದೆಹಲಿ ಕ್ಯಾಪಿಟಲ್ ತಂಡದ ಮೆಂಟರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಕ್ರಿಕೆಟ್ ಅಡ್ವೈಸರಿ ಕಮಿಟಿ ಸದಸ್ಯರಾಗಿ, ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ನೀಡಿದ್ದ ದೂರಿನನ್ವಯ ಬಿಸಿಸಿಐ ನೀತಿ ನಿಯಮ ಮಂಡಳಿ ತನಿಖಾಧಿಕಾರಿ ನ್ಯಾಯಮೂರ್ತಿ ಡಿ.ಕೆ.ಜೈನ್, ಕಮೆಂಟರಿ ಮತ್ತು ಐಪಿಎಲ್ ಟೀಂ ಮೆಂಟರ್, ಈ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳುವಂತೆ ಆದೇಶ ಹೊರಡಿದ್ದಾರೆ.