ಮುಂಬೈ: ಗುಜರಾತ್ನಲ್ಲಿ ತಲೆ ಎತ್ತುತ್ತಿರುವ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ಮೊಟೇರಾ(ಸರ್ದಾರ್ ವಲ್ಲಭಭಾಯ್ ಪಟೇಲ್) ಸ್ಟೇಡಿಯಂನ ವಿಹಂಗಮ ನೋಟದ ಅದ್ಭುತ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಇದೇ ಮೊದಲ ಬಾರಿಗೆ ಶೇರ್ ಮಾಡಿಕೊಂಡಿದೆ.
2014ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದ್ದ ಈ ಕ್ರೀಡಾಂಗಣವನ್ನು ನವೀಕರಿಸಿರುವ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಉದ್ಘಾಟನೆ ಮಾಡಿಸಲಿದೆ.
ಮೋದಿಯವರ ಕನಸಿನ ಕ್ರಿಕೆಟ್ ಸ್ಟೇಡಿಯಂ ಆಗಿರುವ ಇದಕ್ಕೆ ಬರೋಬ್ಬರಿ 6 ವರ್ಷಗಳ ಕಾಲ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಈ ಸ್ಟೇಡಿಯಂನಲ್ಲಿ 1 ಲಕ್ಷದ 10 ಸಾವಿರ ಮಂದಿ ಕುಳಿತು ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ದೊಡ್ಡದಾಡ ಕ್ರಿಕೆಟ್ ಸ್ಟೇಡಿಯಂ ಎಂಬ ಕೀರ್ತಿಗೆ ಮೊಟೇರಾ ಸ್ಟೇಡಿಯಂ ಪಾತ್ರವಾಗಲಿದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿರುವ 1 ಲಕ್ಷ ಮಂದಿ ಕೂರಬಹುದಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿತ್ತು.
-
#MoteraStadium
— BCCI (@BCCI) February 18, 2020 " class="align-text-top noRightClick twitterSection" data="
Ahmedabad, India 🇮🇳
Seating capacity of more than 1,10,000
World's largest #Cricket stadium pic.twitter.com/FKUhhS0HK5
">#MoteraStadium
— BCCI (@BCCI) February 18, 2020
Ahmedabad, India 🇮🇳
Seating capacity of more than 1,10,000
World's largest #Cricket stadium pic.twitter.com/FKUhhS0HK5#MoteraStadium
— BCCI (@BCCI) February 18, 2020
Ahmedabad, India 🇮🇳
Seating capacity of more than 1,10,000
World's largest #Cricket stadium pic.twitter.com/FKUhhS0HK5
"ಮೊಟೇರಾ ಸ್ಟೇಡಿಯಂ, ಅಹ್ಮದಾಬಾದ್, ಭಾರತ, ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ, 1,10,000 ಮಂದಿ ಕುಳಿತುಕೊಳ್ಳಬಹುದಾದ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ" ಎಂದು ಬರೆದು ಸ್ಟೇಡಿಯಂನ ವಿಹಂಗಮ ನೋಟದ ಫೋಟೋವನ್ನು ಬಿಸಿಸಿಐ ಶೇರ್ ಮಾಡಿಕೊಂಡಿದೆ.
ಅಮೆರಿಕದ ಅಧ್ಯಕ್ಷ ಟೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮಲೇನಿಯಾ ಟ್ರಂಪ್ ಭಾಗವಹಿಸುವ 'ನಮಸ್ತೆ ಟ್ರಂಪ್' ಕಾರ್ಯಕ್ರಮ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವೆ ಮೊದಲ ಪಂದ್ಯ ನಡೆಯಬೇಕಿತ್ತು. ಆದರೆ ನಿರ್ಮಾಣ ಹಂತದ ಕಾರ್ಯ ನಿಗದಿತ ಸಮಯಕ್ಕೆ ಮುಗಿಯದ ಕಾರಣ ಪಂದ್ಯ ರದ್ದು ಮಾಡಲಾಯಿತು. ಇನ್ನು ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಸರಣಿಯಲ್ಲಿ ಯಾವುದಾದರೊಂದು ಪಂದ್ಯವನ್ನು ಹಗಲು-ರಾತ್ರಿ ಪಂದ್ಯವಾಗಿ ಇದೇ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.