ETV Bharat / sports

ಐಪಿಎಲ್ ಆತಿಥ್ಯ : ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಸ್ವೀಕಾರ ಪತ್ರ ಕಳುಹಿಸಿದ ಬಿಸಿಸಿಐ - ಬಿಸಿಸಿಐ

ಐಪಿಎಲ್‌ನ 13ನೇ ಆವೃತ್ತಿಯನ್ನು ಆಯೋಜಿಸಲು ಇಸಿಬಿ ಏಪ್ರಿಲ್‌ನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಕೊರೊನಾ ಹಿನ್ನೆಲೆ ಮಾರ್ಚ್​​ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನ ಬಿಸಿಸಿಐ ಮುಂದೂಡಿಕೆ ಮಾಡಿತ್ತು.

uae
uae
author img

By

Published : Jul 27, 2020, 10:01 AM IST

ದುಬೈ: ಈ ವರ್ಷದ ಐಪಿಎಲ್​​ ಯುಎಇಯಲ್ಲಿ ನಡೆಯಲಿದೆ. ಈ ಸಂಬಂಧ ಬಿಸಿಸಿಐ ಸ್ವೀಕಾರ ಪತ್ರವನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಕಳುಹಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.

"ಹೌದು, ನಾವು ಸ್ವೀಕಾರ ಪತ್ರವನ್ನು ಇಸಿಬಿಗೆ ಕಳುಹಿಸಿದ್ದೇವೆ. ಎರಡೂ ಮಂಡಳಿಗಳು ಐಪಿಎಲ್​​​​ ಟೂರ್ನಿ ನಡೆಸಲು ಇಂದಿನಿಂದ ಒಟ್ಟಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಖಲೀಜ್ ಟೈಮ್ಸ್ ಗೆ ಐಪಿಎಲ್​​​​​​​​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಹೇಳಿದ್ದಾರೆ ಎಂದು ವರದಿ ಮಾಡಿದೆ.

ಐಪಿಎಲ್‌ನ 13ನೇ ಆವೃತ್ತಿಯನ್ನು ಆಯೋಜಿಸಲು ಇಸಿಬಿ ಏಪ್ರಿಲ್‌ನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಕೊರೊನಾ ಹಿನ್ನೆಲೆ ಮಾರ್ಚ್​​ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನ ಬಿಸಿಸಿಐ ಮುಂದೂಡಿಕೆ ಮಾಡಿತ್ತು. ಆ ಬಳಿಕ ಐಸಿಸಿ ಟಿ-20 ವಿಶ್ವಕಪ್​ ಮುಂದೂಡಿದ್ದರಿಂದ ಶ್ರೀಮಂತ ಐಪಿಎಲ್​ ಟೂರ್ನಿ ನಡೆಯಲು ಹಾದಿ ಸುಗಮವಾಗಿದೆ.

ಈ ಬಾರಿಯ ಐಪಿಎಲ್​​​ ಯುಎಇಯಲ್ಲಿ ನಡೆಯುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಯುನೈಟೆಡ್​ ಅರಬ್​ ಎಮಿರೇಟ್ಸ್​​ನಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಿವೆ ಎಂದು ಬ್ರಿಜೇಶ್​ ಪಟೇಲ್​ ಇದೇ ವೇಳೆ ತಿಳಿಸಿದ್ದಾರೆ.

ಯುಎಇಯಲ್ಲಿ ಜೈವಿಕ ಸುರಕ್ಷಿತ ವಾತಾವರಣದಲ್ಲಿ ತರಬೇತಿ ಶಿಬಿರಗಳು ನಡೆಯಲಿವೆ ಎಂದಿರುವ ಐಪಿಎಲ್​ ಮಂಡಳಿ ಅಧ್ಯಕ್ಷರು, ತರಬೇತಿಗೆ ಕನಿಷ್ಠ ಮೂರರಿಂದ ನಾಲ್ಕು ವಾರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 2020ರ ಐಪಿಎಲ್​ ಆವೃತ್ತಿಯು ಸೆಪ್ಟೆಂಬರ್ 19ರಿಂದ ನವೆಂಬರ್ 8 ರವರೆಗೆ ನಡೆಯಲಿದೆ ಎಂದು ಬ್ರಿಜೇಶ್​ ಪಟೇಲ್​ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.