ETV Bharat / sports

ಇನ್ಮುಂದೆ 10 ಟಿ-20 ಪಂದ್ಯ ಆಡಿದ ಆಟಗಾರರಿಗೂ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ನೀಡಿದ ಬಿಸಿಸಿಐ!

author img

By

Published : Nov 21, 2020, 9:14 PM IST

ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ 4 ಶ್ರೇಣಿಗಳಿವೆ. A+ ಶ್ರೇಣಿಯ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಎ ಶ್ರೇಣಿ ಆಟಗಾರರಿಗೆ 5 ಕೋಟಿ ರೂ., ಬಿ ಮತ್ತು ಸಿ ಶ್ರೇಣಿಯ ಕ್ರಿಕೆಟಿಗರು ಕ್ರಮವಾಗಿ 3 ಮತ್ತು 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಬಿಸಿಸಿಐ ಕೇಂದ್ರ ಗುತ್ತಿಗೆ
ಬಿಸಿಸಿಐ ಕೇಂದ್ರ ಗುತ್ತಿಗೆ

ಮುಂಬೈ: ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಬದಲಾವಣೆ ತಂದಿದ್ದು, ಇನ್ಮುಂದೆ 10 ಟಿ-20 ಪಂದ್ಯಗಳಲ್ಲಿ ಆಡಿರುವ ಆಟಗಾರರಿಗೆ ಕೇಂದ್ರ ಗುತ್ತಿಗೆಯಲ್ಲಿ ನೇರವಾಗಿ ಸಿ ವಿಭಾಗದಲ್ಲಿ ಅವಕಾಶ ನೀಡುವುದಾಗಿ ಬಿಸಿಸಿಐ ತಿಳಿಸಿದೆ.

ಹಿಂದಿನ ಕೇಂದ್ರಿಯ ವಾರ್ಷಿಕ ಗುತ್ತಿಗೆ ಪಟ್ಟಿಯ ಮಾನದಂಡದ ಪ್ರಕಾರ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಪಡೆಯಬೇಕಾದರೆ ಕನಿಷ್ಠ 3 ಟೆಸ್ಟ್ ಮತ್ತು 7 ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೆ ಇನ್ಮುಂದೆ ಕನಿಷ್ಠ ಕೇವಲ 10 ಟಿ-20 ಪಂದ್ಯಗಳನ್ನು ಆಡಿದ ಆಟಗಾರರಿಗೂ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಅಂತಹ ಆಟಗಾರರಿಗೆ ಸಿ ವಿಭಾಗದಲ್ಲಿ ಅವಕಾಶ ನೀಡಲಾಗಿದೆ.

ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ 4 ಶ್ರೇಣಿಗಳಿವೆ. A+ ಶ್ರೇಣಿಯ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಎ ಶ್ರೇಣಿ ಆಟಗಾರರಿಗೆ 5 ಕೋಟಿ ರೂ., ಬಿ ಮತ್ತು ಸಿ ಶ್ರೇಣಿಯ ಕ್ರಿಕೆಟಿಗರು ಕ್ರಮವಾಗಿ 3 ಮತ್ತು 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಟಿ-20 ಕ್ರಿಕೆಟ್ ಪಂದ್ಯಗಳನ್ನು ಮಾತ್ರ ಆಡುವ ಆಟಗಾರರಿಗೆ ಕೇಂದ್ರಿಯ ಗುತ್ತಿಗೆಯಲ್ಲಿ ಅವಕಾಶ ನೀಡುವುದನ್ನು ನಿರಾಕರಿಸಿತ್ತು. ಆದರೆ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಆಡಳಿತ ಮಂಡಳಿ, ಟಿ-20 ಕ್ರಿಕೆಟ್​ನಲ್ಲಿ ಮಾತ್ರ ಆಡುವ ಆಟಗಾರರಿಗೂ ಕೇಂದ್ರಿಯ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಇದರಿಂದ ವಾಷಿಂಗ್ಟನ್​ ಸುಂದರ್​, ಶಿವಂ ದುಬೆ, ಕೃನಾಲ್ ಪಾಂಡ್ಯ ಅವರಂತಹ ಟಿ-20 ಕ್ರಿಕೆಟ್ ಮಾತ್ರ ಆಡುವ ಆಟಗಾರರಿಗೆ ಸಂಭಾವನೆ ಭಾಗ್ಯ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.