ETV Bharat / sports

ಐಪಿಎಲ್​ ವೇಳೆ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡುವೆ: ಆರ್​ಸಿಬಿ ಸೇರಲು ಆ್ಯರೋನ್ ಫಿಂಚ್​ ಉತ್ಸುಕ - ಕೊಹ್ಲಿ ಫಿಂಚ್​

ಡಿಸೆಂಬರ್ 2019ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಆರ್​ಸಿಬಿ ಆ್ಯರೋನ್​ ಫಿಂಚ್​, ಕ್ರಿಸ್​ ಮೋರಿಸ್​, ಡೇಲ್​ ಸ್ಟೈನ್​, ಜೋಶ್​ ಫಿಲಿಫ್​ ಹಾಗೂ ಇಸುರು ಉದಾನರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ- ಎಬಿಡಿ ಜೊತೆಗೆ ಫಿಂಚ್​ ಸೇರ್ಪಡೆಗೊಳಿಸಿಗೊಳ್ಳುವ ಮೂಲಕ ಆರ್​ಸಿಬಿ ತನ್ನ ಬ್ಯಾಟಿಂಗ್​ ವಿಭಾಗವನ್ನು ಬಲಿಷ್ಠಪಡಿಸಿಕೊಂಡಿದೆ.

ಆ್ಯರೋನ್​ ಫಿಂಚ್​
ಆ್ಯರೋನ್​ ಫಿಂಚ್​
author img

By

Published : Aug 6, 2020, 4:15 PM IST

Updated : Aug 6, 2020, 10:55 PM IST

ನನದೆಹಲಿ: 13ನೇ ಆವೃತ್ತಿಯಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಆಡಲಿರುವ ಆಸ್ಟ್ರೇಲಿಯಾದ ಸೀಮಿತ ಓವರ್​ಗಳ ನಾಯಕ ಆ್ಯರೋನ್​ ಫಿಂಚ್​, ಕೊಹ್ಲಿ ನಾಯತಕತ್ವದಲ್ಲಿ ಆಡುವುದಕ್ಕೆ ಉತ್ಸುಕನಾಗಿ ಕಾಯುತ್ತಿದ್ದೇನೆ ಎಂದು ಗುರುವಾರ ಹೇಳಿಕೊಂಡಿದ್ದಾರೆ.

2020 ರ ಐಪಿಎಲ್ ಆವೃತ್ತಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10 ರವರೆಗೆ 53 ದಿನಗಳ ಕಾಲ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆಯಲಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಡಿಸೆಂಬರ್ 2019ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಆರ್​ಸಿಬಿ ಆ್ಯರೋನ್​ ಫಿಂಚ್​, ಕ್ರಿಸ್​ ಮೋರಿಸ್​, ಡೇಲ್​ ಸ್ಟೈನ್​, ಜೋಶ್​ ಫಿಲಿಫ್​ ಹಾಗೂ ಇಸುರು ಉದಾನರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ- ಎಬಿಡಿ ಜೊತೆಗೆ ಫಿಂಚ್​ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಆರ್​ಸಿಬಿ ತನ್ನ ಬ್ಯಾಟಿಂಗ್​ ವಿಭಾಗವನ್ನು ಬಲಿಷ್ಠಪಡಿಸಿಕೊಂಡಿದೆ.

ಆರ್​ಸಿಬಿ ಬಳಗ ಸೇರಿಕೊಳ್ಳುವುದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ವಿಶ್ವದ ಅತ್ಯುತ್ತಮ ಆಟಗಾರರನ್ನು ಹೊಂದಿರುವ ಫ್ರಾಂಚೈಸಿಯಲ್ಲಿ ಆಡಲು ಅವಕಾಶ ಸಿಕ್ಕಿರುವುದು ಖುಷಿ ವಿಚಾರವಾಗಿದೆ. ತವರು ನೆಲೆಯಾದ ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಮುಂದೆ ಆಡುವುದು ಅದ್ಭುತವಾಗಿರುತ್ತಿತ್ತು. ಆದರೂ ಯುಎಇನಲ್ಲಿ ಫ್ರಾಂಚೈಸಿ ಪರ ಆಡುವುದು ಕೂಡ ದೊಡ್ಡ ವಿಚಾರವಾಗಲಿದೆ ಎಂದು ಫಿಂಚ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆರ್​ಸಿಬಿ
ಆರ್​ಸಿಬಿ

ಇದೇ ಮೊದಲ ಬಾರಿಗೆ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿರುವುದರಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವಾರು ವರ್ಷಗಳಿಂದ ಆತನ ವಿರುದ್ಧ ಆಡಿರುವುದರಿಂದ ಕೊಹ್ಲಿ ಎಷ್ಟು ಸ್ಪರ್ಧಾತ್ಮಕ ಕ್ರಿಕೆಟಿಗ ಎಂದು ನನಗೆ ತಿಳಿದಿದೆ. ಆದರೆ ಅದನ್ನು ತೀರ ಹತ್ತಿರದಿಂದ ನೋಡಲು ಬಯಸುತ್ತೇನೆ ಎಂದು ಆಸ್ಟ್ರೇಲಿಯಾ ಸೀಮಿತ ಓವರ್​ಗಳ ತಂಡದ ನಾಯಕ ಹೇಳಿದ್ದಾರೆ.

ನಿಮ್ಮ ನಾಯಕತ್ವದ ಕೌಶಲ್ಯಗಳು ಪ್ರಾಂಚೈಸಿಗೆ ನೆರವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅನುಭವ ಕೂಡ ಸಹಾಯವಾಗಬಹುದು ಎಂದು ಭಾವಿಸಿದ್ದೇನೆ. ಐಪಿಎಲ್​ ವೇಳೆ ಯಾರಿಗಾದರೂ ನೇರವಾಗಲು ನಾನು ಸಿದ್ದನಿದ್ದೇನೆ. ಇದರ ಅರ್ಥ ನಾನು ವಿರಾಟ್​ ಕೊಹ್ಲಿ ಮೇಲಿನ ಒತ್ತಡವನ್ನು ಯಾವ ಸಂದರ್ಭದಲ್ಲಾದಲೂ ತೆಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಫಿಂಚ್​ ಉಲ್ಲೇಖಿಸಿದ್ದಾರೆ.

ದೊಡ್ಡ ಹೊಡೆತಗಳನ್ನು ಪ್ರಯೋಗಿಸುವ ಸಾಮರ್ಥ್ಯ ಹೊಂದಿರುವ ಫಿಂಚ್​ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ವೈಯಕ್ತಿಕ ಗರಿಷ್ಠ ರನ್​ ಬಾರಿಸಿರುವ ದಾಖಲೆ ಹೊಂದಿದ್ದಾರೆ. ಅವರು 2018ರಲ್ಲಿ ಜಿಂಬಾಬ್ವೆ ವಿರುದ್ಧ 172 ರನ್​ ಸಿಡಿಸಿದ್ದರು. ಫಿಂಚ್​ ಆಸ್ಟ್ರೇಲಿಯಾ ಪರ 5 ಟೆಸ್ಟ್​, 126 ಏಕದಿನ ಹಾಗೂ 61 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 16 ಶತಕ ಸಹಿತ 4,882 ರನ್​, 61 ಟಿ-20 ಪಂದ್ಯಗಳಿಂದ 1,989 ರನ್​ ಸಿಡಿಸಿದ್ದಾರೆ.

Last Updated : Aug 6, 2020, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.