ETV Bharat / sports

ಬಾಂಗ್ಲಾ ವಿರುದ್ಧ ಅಬ್ಬರಿಸಿ ಗೆದ್ದ ಕಾಂಗರೂ: ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್​ಗೆ ಅಗ್ರಸ್ಥಾನ - ನ್ಯಾಟಿಂಗ್​​ಹ್ಯಾಮ್​

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಫೈನಲ್​ಗೆ ಮತ್ತಷ್ಟು ಹತ್ತಿರವಾಗಿದೆ.

ಆಸ್ಟ್ರೇಲಿಯಾ ಸಂಭ್ರಮ
author img

By

Published : Jun 21, 2019, 4:49 AM IST

Updated : Jun 21, 2019, 7:04 AM IST

ನ್ಯಾಟಿಂಗ್​ಹ್ಯಾಮ್​: ಐಸಿಸಿ ವಿಶ್ವಕಪ್​​ನಲ್ಲಿ ಬಲಿಷ್ಠ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳನ್ನ ಮಣಿಸಿ ಅನಿರೀಕ್ಷಿತ ಫಲಿತಾಂಶ ನೀಡಿದ್ದ ಮುಶ್ರಫೆ ಪಡೆ ಕಾಂಗರೂ ವಿರುದ್ಧ ಸೋಲು ಕಂಡಿದೆ.

AUS beat BAN
ಡೇವಿಡ್​ ವಾರ್ನರ್​​​

ಕಾಂಗರೂ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನದ ಹೊರತಾಗಿ ಬಾಂಗ್ಲಾದೇಶ 48ರನ್​ಗಳ ಸೋಲು ಕಂಡಿದ್ದು, ಸೆಮಿಫೈನಲ್​ ಹಾದಿಯನ್ನ ಮತ್ತಷ್ಟು ಕಠಿಣ ಮಾಡಿಕೊಂಡಿದೆ.

AUS beat BAN
ಐಸಿಸಿ ಅಂಕಪಟ್ಟಿ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್​(166), ಆ್ಯರೋನ್​ ಫಿಂಚ್​(53) ಹಾಗೂ ಉಸ್ಮಾನ್​ ಖವಾಜಾ(89)ರನ್​ಗಳ ನೇರವಿನಿಂದ ನಿಗದಿತ 50 ಓವರ್​ಗಳಲ್ಲಿ 5ವಿಕೆಟ್​​ನಷ್ಟಕ್ಕೆ ಬೃಹತ್​ 381ರನ್​ ಪೇರಿಸಿತು. ಇನ್ನು ಮ್ಯಾಕ್ಸವೆಲ್​ ಕೇವಲ 10 ಎಸೆತಗಳಲ್ಲಿ 32ರನ್​ಗಳಿಸಿ ತಂಡದ ಮೊತ್ತವನ್ನ ಮತ್ತಷ್ಟು ಹೆಚ್ಚಿಸಿದರು.

AUS beat BAN
ಬಾಂಗ್ಲಾ ಬ್ಯಾಟ್ಸ್​ಮನ್​ ಬ್ಯಾಟಿಂಗ್​​

ಇದರ ಬೆನ್ನತ್ತಿದ್ದ ಬಾಂಗ್ಲಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಮುಶ್ಫಿಕರ್​ ರಹೀಂ ಅಜೇಯ(102)ರನ್​ ಹಾಗೂ ಮಹಮದುಲ್ಲಾ(62) ಹಾಗೂ ಆರಂಭಿಕ ತಮೀಮ್​ ಇಕ್ಬಾಲ್​​(62)ರನ್​ಗಳ ಹೊರತಾಗಿ ಕೂಡ 333ರನ್​ಗಳಿಸಿ ಸೋಲು ಕಾಣುವಂತಾಯಿತು. ವೆಸ್ಟ್​ ಇಂಡೀಸ್ ವಿರುದ್ಧ ಅಬ್ಬರಿಸಿದ್ದ ಲಿಟಾನ್ ದಾಸ್ ಹಾಗೂ ಶಕೀಬ್​ ಅಲ್​ ಹಸನ್​ ನಿರಾಸೆ ಮೂಡಿಸಿದರು.

ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಮಿಚೆಲ್​ ಸ್ಟ್ರಾಕ್​,ನಾಥನ್​ ಕೌಲ್ಟರ್​ ನೇಲ್​ ಹಾಗೂ ಮಾರ್ಕಸ್​ ಸ್ಟೋನಿಸ್​ ತಲಾ 2ವಿಕೆಟ್​ ಪಡೆದುಕೊಂಡರೆ, ಜಂಪಾ 1ವಿಕೆಟ್​ ಪಡೆದುಕೊಂಡರು.

Intro:Body:

ಬಾಂಗ್ಲಾ ವಿರುದ್ಧ ಅಬ್ಬರಿಸಿ ಗೆದ್ದ ಕಾಂಗರೂ: ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್​ಗೆ ಅಗ್ರಸ್ಥಾನ

ನ್ಯಾಟಿಂಗ್​ಹ್ಯಾಮ್​: ಐಸಿಸಿ ವಿಶ್ವಕಪ್​​ನಲ್ಲಿ ಬಲಿಷ್ಠ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳನ್ನ ಮಣಿಸಿ ಅನಿರೀಕ್ಷಿತ ಫಲಿತಾಂಶ ನೀಡುತ್ತಾ ಬಂದಿದ್ದ ಮುಶ್ರಫೆ ಪಂಡೆ ಕಾಂಗರೂ ವಿರುದ್ಧ ಸೋಲು ಕಂಡಿದೆ. 

ಕಾಂಗರೂ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಹೊರತಾಗಿ ಕೂಡ ಬಾಂಗ್ಲಾದೇಶ 48ರನ್​ಗಳ ಸೋಲು ಕಂಡು ಸೆಮಿಫೈನಲ್​ ಹಾದಿಯನ್ನ ಮತ್ತಷ್ಟು ಕಠಿಣ ಮಾಡಿಕೊಂಡಿದೆ. 

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್​(166), ಆ್ಯರೋನ್​ ಫಿಂಚ್​(53) ಹಾಗೂ ಉಸ್ಮಾನ್​ ಖವಾಜಾ(89)ರನ್​ಗಳ ನೇರವಿನಿಂದ ನಿಗದಿತ 50 ಓವರ್​ಗಳಲ್ಲಿ 5ವಿಕೆಟ್​​ನಷ್ಟಕ್ಕೆ ಬೃಹತ್​ 381ರನ್​ ಪೇರಿಸಿತು. ಇನ್ನು ಮ್ಯಾಕ್ಸವೆಲ್​ ಕೇವಲ 10 ಎಸೆತಗಳಲ್ಲಿ 32ರನ್​ಗಳಿಸಿ ತಂಡದ ಮೊತ್ತವನ್ನ ಮತ್ತಷ್ಟು ಹೆಚ್ಚಿಸಿದರು.

ಇದರ ಬೆನ್ನತ್ತಿದ್ದ ಬಾಂಗ್ಲಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಮುಶ್ಫಿಕರ್​ ರಹೀಂ ಅಜೇಯ(102)ರನ್​ ಹಾಗೂ ಮಹಮದುಲ್ಲಾ(62) ಹಾಗೂ ತಮೀಮ್​ ಇಕ್ಬಾಲ್​​(62)ರನ್​ಗಳ ಹೊರತಾಗಿ ಕೂಡ 333ರನ್​ಗಳಿಸಿ ಸೋಲು ಕಾಣುವಂತಾಯಿತು. ವೆಸ್ಟ್​ ಇಂಡೀಸ್ ವಿರುದ್ಧ ಅಬ್ಬರಿಸಿದ್ದ ಲಿಟಾನ್ ದಾಸ್ ಹಾಗೂ ಶಕೀಬ್​ ಅಲ್​ ಹಸನ್​ ನಿರಾಸೆ ಮೂಡಿಸಿದರು. 

ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಮಿಚೆಲ್​ ಸ್ಟ್ರಾಕ್​,ನಾಥನ್​ ಕೌಲ್ಟರ್​ ನೇಲ್​ ಹಾಗೂ ಮಾರ್ಕಸ್​ ಸ್ಟೋನಿಸ್​ ತಲಾ 2ವಿಕೆಟ್​ ಪಡೆದುಕೊಂಡರೆ, ಜಂಪಾ 1ವಿಕೆಟ್​ ಕಿತ್ತರು. 

Conclusion:
Last Updated : Jun 21, 2019, 7:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.