ಬ್ರಿಸ್ಬೇನ್: ಪಾಕಿಸ್ತಾನದ 16 ವರ್ಷದ ನಸೀಮ್ ಶಾ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.
ನಸೀಮ್ ಶಾ ಟೆಸ್ಟ್ ಕ್ರಿಕೆಟ್‌ಗೆ ಅಡಿಯಿಟ್ಟ ವಿಶ್ವದ 3ನೇ ಕಿರಿಯ ಬೌಲರ್ ಹಾಗೂ 9ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಡೆಬ್ಯೂ ಮಾಡುತ್ತಿರುವ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ಕೂಡಾ ಇವರ ಪಾಲಿಗೆ ಒದಗಿ ಬರಲಿದೆ.
ನಸೀಮ್ ಶಾ 16 ವರ್ಷ 279 ದಿನಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರೆ, ಭಾರತದ ಹರ್ಭಜನ್ ಸಿಂಗ್ 17 ವರ್ಷ 265 ದಿನಗಳಿಗೆ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನ ಶುರು ಮಾಡಿದ್ದರು.
ಶಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ಅಂತ್ಯ ಸಂಸ್ಕಾರಕ್ಕೂ ಗೈರಾಗಿದ್ದರು. ವಿಶೇಷವೆಂದರೆ, ನಸೀಮ್ ಕೇವಲ 7 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಬೆನ್ನಲ್ಲೇ ಆಸ್ಟ್ರೇಲಿಯಾದಂಥ ಬಲಾಢ್ಯ ತಂಡದೆದರು ಕಣಕ್ಕಿಳಿಯುತ್ತಿದ್ದು ನಸೀಮ್ ಶಾ ಇಡೀ ವಿಶ್ವಕ್ರಿಕೆಟ್ ಗಮನ ಸಳೆಯುತ್ತಿದ್ದಾರೆ.