ETV Bharat / sports

ನೋಡಿ: ಐರ್ಲೆಂಡ್‌-ನೇಪಾಳ ಕ್ರಿಕೆಟ್‌ ಪಂದ್ಯದ ವೇಳೆ ಕ್ರೀಡಾಸ್ಫೂರ್ತಿ ಮೆರೆದ ವಿಕೆಟ್‌ ಕೀಪರ್‌

author img

By

Published : Feb 17, 2022, 8:05 AM IST

ಐರ್ಲೆಂಡ್ ಮತ್ತು ನೇಪಾಳ ತಂಡಗಳ ನಡುವೆ ಸೋಮವಾರ ಟಿ20 ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಐರ್ಲೆಂಡ್ ಆಟಗಾರನನ್ನು ರನೌಟ್ ಮಾಡಲು ಅವಕಾಶವಿದ್ದರೂ ನೇಪಾಳದ ವಿಕೆಟ್ ಕೀಪರ್ ಹಾಗೆ ಮಾಡದೆ ಕ್ರೀಡಾಸ್ಫೂರ್ತಿ ಮೆರೆದರು. ಇದಕ್ಕೆ ಕಾರಣವೇನು ಅನ್ನೋದನ್ನು ನೋಡಿ.

Cricket Spirit  in   Nepal vs Ireland t20 match
ನೇಪಾಳ ವಿಕೆಟ್ ಕೀಪರ್ ಕ್ರೀಡಾ ಸ್ಫೂರ್ತಿ..ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ

ಜಂಟಲ್​ಮನ್ ಕ್ರೀಡೆ ಎಂದೇ ಹೆಸರಾದ ಕ್ರಿಕೆಟ್​ನಲ್ಲಿ ಕ್ರೀಡಾಸ್ಫೂರ್ತಿ ಮೆರೆಯುವ ಸನ್ನಿವೇಶಗಳು ನಡೆಯುತ್ತಿರುತ್ತವೆ. ಈಗ ಅಂಥದ್ದೇ ಘಟನೆಗೆ ನೇಪಾಳ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಸಾಕ್ಷಿಯಾಯಿತು.

ಓಮನ್ ಕ್ವಾಡ್ರಾಂಗುಲರ್ ಸರಣಿಯ ಪಂದ್ಯಗಳ ಭಾಗವಾಗಿ ಮಸ್ಕತ್​ನ ಅಲ್-ಅಲ್ಮೇರತ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ಮತ್ತು ನೇಪಾಳ ನಡುವೆ ಟಿ20 ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ಆಟಗಾರನನ್ನು ರನ್​ ಔಟ್ ಮಾಡಲು ನೇಪಾಳದ ವಿಕೆಟ್ ಕೀಪರ್‌ಗೆ ಅವಕಾಶವಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಈ ಕೆಳಗಿನ ವಿಡಿಯೋ ನೋಡಿ..

  • 1/9) 🎙️It's been so inspiring to see this moment go that viral around the world. There's a few things I might not have got across in the moment on commentary that I wanted to explain as to what made it so special & why Nepali cricket should be so proud

    A #SpiritofCricket thread pic.twitter.com/CoqSt8uw3x

    — Andrew Leonard (@CricketBadge) February 15, 2022 " class="align-text-top noRightClick twitterSection" data=" ">

ನೇಪಾಳದ ಬೌಲರ್ ಕಮಲ್ ಸಿಂಗ್ ಐರಿ ಬೌಲಿಂಗ್ ಮಾಡಿದ್ದು, ಅದನ್ನು ಎದುರಿಸಿದ ಮಾರ್ಕ್​ ಅಡೈರ್ ಒಂದು ರನ್ ಗಳಿಸಲು ಮುಂದಾಗುತ್ತಾರೆ. ಕ್ರೀಸ್​ನ ಮತ್ತೊಂದು ತುದಿಯಲ್ಲಿದ್ದ ಮೆಕ್​ಬ್ರಿನ್ ಅವರು ರನ್‌ಗಾಗಿ ಓಡುತ್ತಿರಬೇಕಾದರೆ, ಬೌಲರ್​ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಾರೆ. ಚೆಂಡನ್ನು ತೆಗೆದುಕೊಂಡ ಕಮಲ್ ಸಿಂಗ್ ಐರಿ ತಕ್ಷಣ ವಿಕೆಟ್ ಕೀಪರ್ ಆಸೀಫ್ ಶೇಖ್​ ಕೈಗೆ ಎಸೆಯುತ್ತಾರೆ. ಆದರೆ ಕೆಳಗೆ ಬಿದ್ದಿದ್ದ ಮೆಕ್​​ಬ್ರಿನ್ ಅವರನ್ನು ರನ್​ ಔಟ್ ಮಾಡಲು ಆಸೀಫ್ ಶೇಖ್ ಮುಂದಾಗುವುದಿಲ್ಲ. ಈ ವೇಳೆ, ನಿರಾಯಾಸವಾಗಿ ನಡೆದುಕೊಂಡು ಬಂದು ಮೆಕ್​​ಬ್ರಿನ್ ಕ್ರೀಸ್ ತಲುಪುತ್ತಾರೆ.

ಇದನ್ನೂ ಓದಿ: 'ಕನಸು ನನಸಾಗಿದೆ..': ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟವಾಡಿದ ರವಿ ಬಿಷ್ಣೋಯಿ

ಈ ದೃಶ್ಯವನ್ನು ಕಾಮೆಂಟೇಟರ್ ಆ್ಯಂಡ್ರೂ ಲಿಯೋನಾರ್ಡ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಕೆಟ್ ಕೀಪರ್​ ಆಸೀಫ್ ಶೇಖ್ ನಡೆಗೆ ನೇಪಾಳ ಕ್ರಿಕೆಟ್ ಮಾತ್ರವಲ್ಲ, ಸಾಕಷ್ಟು ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.​

ಓಮನ್ ಕ್ವಾಡ್ರಾಂಗುಲರ್ ಸರಣಿಯ ಟಿ-20 ಪಂದ್ಯಗಳಲ್ಲಿ ಓಮನ್, ನೇಪಾಳ, ಐರ್ಲೆಂಡ್ ಹಾಗು ಯುಎಇ ರಾಷ್ಟ್ರಗಳು ಭಾಗವಹಿಸಿವೆ. ಐರ್ಲೆಂಡ್ ಮತ್ತು ನೇಪಾಳ ನಡುವೆ ಸೋಮವಾರ ನಡೆದ ಟಿ20 ಪಂದ್ಯದಲ್ಲಿ ಐರ್ಲೆಂಡ್​ 16 ರನ್​ಗಳ ಅಂತರದಿಂದ ಜಯಗಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.