ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ ಪಡೆ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ಗಳಿಕೆ ಮಾಡಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಷ್ ಪಾಂಡೆ ಶತಕದಾಟವಾಡಿ ಎದುರಾಳಿ ತಂಡಕ್ಕೆ 172ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ್ದಾರೆ.
-
After keeping it tight for a large part of the game, #CSK concede 44 runs in the last 18 balls as #SRH get 171-3 from their 20 overs.
— IndianPremierLeague (@IPL) April 28, 2021 " class="align-text-top noRightClick twitterSection" data="
Stay tuned for the chase. https://t.co/dvbR7X1Kzc #VIVOIPL #CSKvSRH pic.twitter.com/I9xYLdYZQw
">After keeping it tight for a large part of the game, #CSK concede 44 runs in the last 18 balls as #SRH get 171-3 from their 20 overs.
— IndianPremierLeague (@IPL) April 28, 2021
Stay tuned for the chase. https://t.co/dvbR7X1Kzc #VIVOIPL #CSKvSRH pic.twitter.com/I9xYLdYZQwAfter keeping it tight for a large part of the game, #CSK concede 44 runs in the last 18 balls as #SRH get 171-3 from their 20 overs.
— IndianPremierLeague (@IPL) April 28, 2021
Stay tuned for the chase. https://t.co/dvbR7X1Kzc #VIVOIPL #CSKvSRH pic.twitter.com/I9xYLdYZQw
ವಾರ್ನರ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ ಮತ್ತೊಮ್ಮೆ ನಿರಾಸೆ ಮೂಡಿಸಿದರು. ತಾವು ಎದುರಿಸಿದ 5 ಎಸೆತಗಳಲ್ಲಿ 7ರನ್ಗಳಿಕೆ ಮಾಡಿ ಸ್ಯಾಮ್ ಕರ್ರನ್ ಓವರ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಕ್ಯಾಪ್ಟನ್ ವಾರ್ನರ್ ಸೇರಿಕೊಂಡ ಮನೀಷ್ ಪಾಂಡೆ ಎದುರಾಳಿ ಬೌಲರ್ಗಳನ್ನ ಉತ್ತಮವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 100 ರನ್ಗಳ ಜೊತೆಯಾಟವಾಡಿತು.
57 ರನ್ಗಳಿಸಿದ್ದ ವೇಳೆ ವಾರ್ನರ್ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ 61ರನ್ಗಳಿ ಆಡುತ್ತಿದ್ದ ಮನೀಷ್ ಪಾಂಡೆ, ನಿಗ್ಡಿ ಓವರ್ನಲ್ಲಿ ಡುಪ್ಲೆಸಿಗೆ ಕ್ಯಾಚ್ ನೀಡಿದರು. ಈ ವೇಳೆ, ತಂಡದ ಸ್ಕೋರ್ 17 ಓವರ್ಗಳಲ್ಲಿ 134ರನ್. ಈ ವೇಳೆ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಒಂದೇ ಓವರ್ನಲ್ಲಿ 20ರನ್ ಗಳಿಸಿ ತಂಡದ ಮೊತ್ತ ಮತ್ತಷ್ಟು ಹೆಚ್ಚಿಸಿದರು. ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್ ಹಾಗೂ ಜಾಧವ್ 4 ಎಸೆತಗಳಲ್ಲಿ 12ರನ್ಗಳಿಕೆ ಮಾಡಿದ್ದರಿಂದ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿದೆ. ಚೆನ್ನೈ ತಂಡದ ಪರ ನಿಗ್ಡಿ 2ವಿಕೆಟ್ ಪಡೆದುಕೊಂಡರೆ, ಚಹರ್, ಕರ್ರನ್, ಠಾಕೂರ್ ಹಾಗೂ ಜಡೇಜಾ ತಲಾ 1ವಿಕೆಟ್ ಪಡೆದುಕೊಂಡರು.