ETV Bharat / sports

ಟಿ20 ವಿಶ್ವಕಪ್ ಆಯೋಜನೆಯಿಂದ ಬಿಸಿಸಿಐ ಪಡೆಯುವ ಲಾಭ ಎಷ್ಟು ಕೋಟಿ ಗೊತ್ತಾ?

ಟಿ2 ವಿಶ್ವಕಪ್​ನ ಮೊದಲ 7 ಅರ್ಹತಾ ಪಂದ್ಯಗಳು ಓಮನ್​ನಲ್ಲಿ ನಡೆಯಲಿವೆ. ಉಳಿದ 39 ಪಂದ್ಯಗಳು ಯುಎಇಯ ಶಾರ್ಜಾ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಜರುಗಲಿವೆ. ಇದಕ್ಕಾಗಿ ಬಿಸಿಸಿಐ ಇಸಿಬಿಗೆ( Emirates Cricket Board) 7 ಮಿಲಿಯನ್​ ಅಮೆರಿಕನ್ ಡಾಲರ್​ ಮತ್ತು ಓಮನ್​ ಕ್ರಿಕೆಟ್​ ಬೋರ್ಡ್​ಗೆ 1.5 ಮಿಲಿಯನ್ ಡಾಲರ್​ ಮೊತ್ತವನ್ನು ಆಯೋಜನಾ ಶುಲ್ಕವಾಗಿ ಬಿಸಿಸಿಐ ನೀಡಲಿದೆ.

Board estimated to earn USD 12 million profit from  T20 World Cup
ಟಿ20 ವಿಶ್ವಕಪ್​ನಿಂದ ಬಿಸಿಸಿಐಗೆ 89 ಕೋಟಿ ರೂ ಲಾಭ
author img

By

Published : Oct 5, 2021, 6:03 PM IST

ದುಬೈ: ಕೋವಿಡ್​ 19 ಕಾರಣದಿಂದ ಬಿಸಿಸಿಐ ಟಿ20 ವಿಶ್ವಕಪ್​ಅನ್ನು ಭಾರತದಿಂದ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಆಯೋಜಿಸಿತ್ತಿದೆ. ಆದರೂ ಆಯೋಜನೆ ಹಕ್ಕನ್ನು ಹೊಂದಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬರೋಬ್ಬರಿ 89.3 ಕೋಟಿ(12 ಮಿಲಿಯನ್ ಡಾಲರ್​) ಲಾಭದ ನಿರೀಕ್ಷೆಯಲ್ಲಿದೆ ಎಂದು ಇತ್ತೀಚೆಗೆ ನಡೆದ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ತನ್ನ ಸದಸ್ಯರಿಗೆ ತಿಳಿಸಿದೆ.

ಟಿ2 ವಿಶ್ವಕಪ್​ನ ಮೊದಲ 7 ಅರ್ಹತಾ ಪಂದ್ಯಗಳು ಓಮನ್​ನಲ್ಲಿ ನಡೆಯಲಿದೆ. ಉಳಿದ 39 ಪಂದ್ಯಗಳು ಯುಎಇಯ ಶಾರ್ಜಾ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯಲಿವೆ. ಇದಕ್ಕಾಗಿ ಬಿಸಿಸಿಐ ಇಸಿಬಿಗೆ( Emirates Cricket Board) 7 ಮಿಲಿಯನ್​ ಅಮೆರಿಕನ್ ಡಾಲರ್​ ಮತ್ತು ಓಮನ್​ ಕ್ರಿಕೆಟ್​ ಬೋರ್ಡ್​ಗೆ 1.5 ಮಿಲಿಯನ್ ಡಾಲರ್​ ಮೊತ್ತವನ್ನು ಆಯೋಜನಾ ಶುಲ್ಕವಾಗಿ ಬಿಸಿಸಿಐ ನೀಡಲಿದೆ.

ಇನ್ನು 5.5 ಮಿಲಿಯನ್​ ಡಾಲರ್​ ಮೊತ್ತವನ್ನು ಕಾರ್ಯಾಚರಣೆಯ ವೆಚ್ಚವಾಗಿ ಇಸಿಬಿಗೆ ಮತ್ತು ಮಸ್ಕಾಟ್​ನಲ್ಲಿ ನಡೆಯಲಿರುವ 6 ಪಂದ್ಯಗಳ ವೆಚ್ಚವಾಗಿ ಓಮನ್​ಗೆ 4 ಲಕ್ಷ ಯುಎಸ್​ ಡಾಲರ್​ ನೀಡಲಾಗುವುದು. ಇದರ ಜೊತೆಗೆ 33 ದಿನಗಳ ಕಾಲ ನಡೆಯುವ ಮೆಗಾ ಇವೆಂಟ್​ನಲ್ಲಿ ಟಿಕೆಟ್​ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಆಯಾ ಬೋರ್ಡ್​ಗಳಿಗೆ ನೀಡಲು ನಿರ್ಧರಿಸಿದೆ ಎಂದು ಬಿಸಿಸಿಐ ಅಪೆಕ್ಸ್​ ಕೌನ್ಸಿಲ್​ನಲ್ಲಿ ತಿಳಿಸಿದೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಆಯೋಜನಾ ವೆಚ್ಚಕ್ಕಿಂತ 25 ಮಿಲಿಯನ್ ಡಾಲರ್​ಗಳಷ್ಟು ಕಡಿಮೆಯಿದ್ದರೂ ಬಿಸಿಸಿಐಗೆ 12 ಮಿಲಿಯನ್ ಡಾಲರ್(89.3 ಕೋಟಿ) ಲಾಭವಾಗಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.