ETV Bharat / sports

IPL 2022: ಐಪಿಎಲ್​ಗೆ ಒಮಿಕ್ರಾನ್​ ಕರಿನೆರಳು.. ಮುಂದಿನ ಟೂರ್ನಿಯೂ ಬೇರೆಡೆಗೆ ಶಿಫ್ಟ್​? - Board of Control for Cricket in India

ಮುಂದಿನ ಐಪಿಎಲ್​ನ ಮೊದಲ ಪಂದ್ಯವು ಏಪ್ರಿಲ್ 2, 2022ರಂದು ಚೆನ್ನೈನಲ್ಲಿ ನಡೆಯಲಿದೆ. ಆದರೆ ಕೊರೊನಾ ಹೆಚ್ಚಾದರೆ ಬಿಸಿಸಿಐ ಪರ್ಯಾಯ ಸ್ಥಳವನ್ನು ಪರಿಗಣಿಸಬೇಕಿದೆ. ಹೀಗಾಗಿ ಈ ಹಿಂದಿನಂತೆ ಮತ್ತೆ ಯುಎಇಯಲ್ಲಿ ಟೂರ್ನಿ ನಡೆಯುವ ಸಾಧ್ಯತೆ ದಟ್ಟವಾಗಿದೆ.

IPL 202
2022ರ 15ನೇ ಐಪಿಎಲ್​ ಕ್ರಿಕೆಟ್​ ಟೂರ್ನಿ
author img

By

Published : Dec 23, 2021, 10:51 AM IST

ಪ್ರಸ್ತುತ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ 2022ರ 15ನೇ ಐಪಿಎಲ್​ ಕ್ರಿಕೆಟ್​ ಟೂರ್ನಿಗೆ ಓಮಿಕ್ರಾನ್ ಭೀತಿ ಎದುರಾಗಿದ್ದು, ಬಿಸಿಸಿಐ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ಹೊಸ ಸೀಸನ್ ಆರಂಭವಾಗುವ ವೇಳೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಏನು ಮಾಡಬೇಕೆಂಬುದರ ಬಗ್ಗೆ ಪ್ಲಾನ್-ಬಿ ಕೂಡ ಸಿದ್ಧವಾಗುತ್ತಿದೆಯಂತೆ.

2022ರ ಐಪಿಎಲ್​ಗೆ ಒಮಿಕ್ರಾನ್​​​ ಅಡ್ಡಿಯಾದರೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಈಗಾಗಲೇ ಬಿಸಿಸಿಐ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ. ಈ ಬಗ್ಗೆ ಮುಂದಿನ ತಿಂಗಳು ತಂಡದ ಮಾಲೀಕರ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆಯಲಿದ ಎಂಬ ಮಾಹಿತಿ ಇದೆ.

ಪ್ಲಾನ್-ಬಿ ಏನು?

ಕಳೆದ ಎರಡು ಐಪಿಎಲ್ ಸೀಸನ್‌ಗಳು ಯುಎಇಯಲ್ಲಿ ನಡೆದಿವೆ (2021ರ ಮೊದಲಾರ್ಧ ಹೊರತುಪಡಿಸಿ). 2021ರ ಆವೃತ್ತಿಯನ್ನು ಕೆಲ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸಲಾಗಿತ್ತು. ಮುಂದಿನ 2022ರ ಆವೃತ್ತಿಯನ್ನು ತವರಿನಲ್ಲಿಯೇ ನಡೆಸಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಶಿಸುತ್ತಿದೆ.

ಮುಂದಿನ ಐಪಿಎಲ್​ನ ಮೊದಲ ಪಂದ್ಯವು ಏಪ್ರಿಲ್ 2, 2022ರಂದು ಚೆನ್ನೈನಲ್ಲಿ ನಡೆಯಲಿದೆ. ಆದರೆ ಕೊರೊನಾ ಹೆಚ್ಚಾದರೆ ಬಿಸಿಸಿಐ ಪರ್ಯಾಯ ಸ್ಥಳವನ್ನು ಪರಿಗಣಿಸಬೇಕಿದೆ. ಹೀಗಾಗಿ ಈ ಹಿಂದಿನಂತೆ ಯುಎಇಯಲ್ಲಿ ಟೂರ್ನಿ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಅಲ್ಲದೆ, ಮುಂಬೈ, ಪುಣೆ, ಅಹಮದಾಬಾದ್, ಬರೋಡಾ ಮತ್ತು ರಾಜ್‌ಕೋಟ್‌ನ ಮೈದಾನದಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಿ ಟೂರ್ನಿ ನಡೆಸುವ ಪ್ರಸ್ತಾವವೂ ಇದೆ ಎನ್ನಲಾಗುತ್ತಿದೆ.

ಸದ್ಯ ಐಪಿಎಲ್-2022 ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಫೆ.7, 8ರಂದು ನಡೆಸಲು ಸಿದ್ಧತೆ ನಡೆಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Icc Test Rankings: ಸ್ಮಿತ್​ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಲಾಬುಶೇನ್.. ರೋಹಿತ್​, ಕೊಹ್ಲಿ ಎಷ್ಟರಲ್ಲಿದ್ದಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.