ETV Bharat / sports

ಕೋಚ್​, ಪಂದ್ಯದ ಅಧಿಕಾರಿಗಳ ವಯೋಮಿತಿ 65ಕ್ಕೆ ಏರಿಸಿದ ಬಿಸಿಸಿಐ - ವಯೋಮಿತಿ ಏರಿಸಿದ ಬಿಸಿಸಿಐ

ಬೆಂಬಲ ಸಿಬ್ಬಂದಿ ಮತ್ತು ಪಂದ್ಯದ ವಿವಿಧ ಅಧಿಕಾರಿಗಳ ವಯೋಮಿತಿಯನ್ನು ಅವರ ಫಿಟ್​ನೆಸ್​ ಆಧಾರದ ಮೇಲೇ 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಬಿಸಿಸಿಐ 90ನೇ ವಾರ್ಷಿಕ ಸಭೆಯ ನಂತರ ಹೇಳಿಕೆ ಬಿಡುಗಡೆ ಮಾಡಿದೆ.

BCCI increases age limit for match officials,
ಬಿಸಿಸಿಐ ವಾರ್ಷಿಕ ಸಾಮನ್ಯ ಸಭೆ
author img

By

Published : Dec 4, 2021, 6:20 PM IST

ಕೋಲ್ಕತ್ತಾ: ಬಿಸಿಸಿಐ ಶನಿವಾರ ನಡೆದ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪಂದ್ಯದ ಅಧಿಕಾರಿಗಳು ಮತ್ತು ಕೋಚಿಂಗ್ ಸಿಬ್ಬಂದಿಯ ವಯೋಮಿತಿಯನ್ನು 5 ವರ್ಷಗಳ ಕಾಲ ಏರಿಕೆ ಮಾಡಿ ನಿರ್ಣಯ ತೆಗೆದುಕೊಂಡಿದೆ.

ಬೆಂಬಲ ಸಿಬ್ಬಂದಿ ಮತ್ತು ಪಂದ್ಯದ ವಿವಿಧ ಅಧಿಕಾರಿಗಳ ವಯೋಮಿತಿಯನ್ನು ಅವರ ಫಿಟ್​ನೆಸ್​ ಆಧಾರದ ಮೇಲೇ 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಬಿಸಿಸಿಐ 90ನೇ ವಾರ್ಷಿಕ ಸಭೆಯ ನಂತರ ಹೇಳಿಕೆ ಬಿಡುಗಡೆ ಮಾಡಿದೆ.

ಬಿಸಿಸಿಐ ಈ ನಿರ್ಧಾರ ಕೆಲವು ಅಂಪೈರ್​ಗಳು, ಸ್ಕೋರರ್ಸ್​ ಮತ್ತು ರೆಫ್ರಿಗಳಿಗೆ ಅನುಕೂಲಕರವಾಗಿದೆ. ನಾವೂ ಕೆಲವು ಮಾರ್ಗಸೂಚಿಗಳನ್ನು ಪಡೆದಿದ್ದು, ಇದರಿಂದ ಅವರೆಲ್ಲರೂ ನಿವೃತ್ತಿಗೆ ಹೆಚ್ಚುವರಿಯಾಗಿ 5 ವರ್ಷಗಳನ್ನು ಪಡೆಯಲಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳು, ಪುದುಚೇರಿ, ಬಿಹಾರ್​ ಮತ್ತು ಉತ್ತರಾಖಂಡ ರಾಜ್ಯ ಕ್ರಿಕೆಟ್​ ಮಂಡಳಿಗಳ ಅಭಿವೃದ್ದಿಗಾಗಿ ಕೆಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಯಿತು. ಇದಕ್ಕಾಗಿ ಪ್ರತಿ ರಾಜ್ಯ ಅಸೋಸಿಯೇಷನ್​​ಗೆ 10 ಕೋಟಿ ರೂಗಳನ್ನು ಜಾರಿಗೊಳಿಸಿಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಟೆಸ್ಟ್‌, ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ತಂಡದಿಂದ ದ.ಆಫ್ರಿಕಾ ಪ್ರವಾಸ ; ಇನ್ನೂ ನಿರ್ಧಾರವಾಗದ ಟಿ-20 ವೇಳಾಪಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.