ನವದೆಹಲಿ : ಯುಎಇಯಲ್ಲಿ ಐಪಿಎಲ್ ಪುನಾರಂಭಕ್ಕಾಗಿ ಆಟಗಾರರ ತಡೆರಹಿತ ಬಬಲ್-ಟು-ಬಬಲ್ ವರ್ಗಾವಣೆಗೆ ಅನಕೂಲವಾಗಲು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆರಂಭವನ್ನು ಒಂದು ವಾರ ಅಥವಾ 10 ದಿನ ಮುಂಚಿತವಾಗಿ ಆರಂಭಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಬಿಸಿಸಿಐ ಮನವೊಲಿಸಲು ಪ್ರಯತ್ನಿಸುತ್ತಿದೆ.
ಕೋವಿಡ್ 10 ಸಾಂಕ್ರಾಮಿಕ ಬಿಕ್ಕಟ್ಟಿನಿಂದ ರದ್ದಾಗಿದ್ದ 14ನೇ ಆವೃತ್ತಿಯನ್ನು ಸೆಪ್ಟೆಂಬರ್ 3ನೇ ವಾರದಲ್ಲಿ ಮುಂದುವರಿಸಲು ಶನಿವಾರ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದೆ.
ಸಿಪಿಎಲ್ ಆಗಸ್ಟ್ 28ಕ್ಕೆ ಆರಂಭವಾಗಿ ಸೆಪ್ಟೆಂಬರ್ 19ಕ್ಕೆ ಮುಗಿಯಲಿದೆ. ಆದರೆ, ಐಪಿಎಲ್ ಕೂಡ ಸೆಪ್ಟೆಂಬರ್ 18 ಅಥವಾ 19ರಂದೇ ಆರಂಭವಾಗಲಿದೆ.
ಈ ಕಾರಣದಿಂದ ಒಂದು ತಿಂಗಳು ಮುಂಚಿತವಾಗಿ ಸಿಪಿಎಲ್ ಆರಂಭವಾದರೆ ಆಟಗಾರರ ವರ್ಗಾವಣೆ ಸುಲಭವಾಗಲಿದೆ ಎನ್ನುವ ಆಲೋಚನೆಯಲ್ಲಿ ಬಿಸಿಸಿಐ ಇದೆ.
ನಾವು ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆ ಮಾತನಾಡುತ್ತಿದ್ದೇವೆ. ನಾವು ಸಿಪಿಎಲ್ ಬೇಗ ಮುಗಿಯಲಿದೆ ಎಂಬ ಭರವಸೆಯಲ್ಲಿದ್ದೇವೆ. ಇದರಿಂದ ದುಬೈಗೆ ಎಲ್ಲಾ ಆಟಗಾರರು ಬಬಲ್ ಟು ಬಬಲ್ಗೆ ವರ್ಗಾವಣೆಯಾಗಲು ನೆರವಾಗಲಿದೆ. ಅಲ್ಲದೆ 3 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಬಹುದು ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.
ಒಂದು ವೇಳೆ ಬಿಸಿಸಿಐ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ನಡುವಿನ ಈ ಒಪ್ಪಂದ ಮುರಿದು ಬಿದ್ದರೆ, ಐಪಿಎಲ್ನ ಮೊದಲ ಕೆಲವು ಪಂದ್ಯಗಳನ್ನ ಸ್ಟಾರ್ ಆಟಗಾರರಿಲ್ಲದೆ ನಡೆಸುವ ಸಾಧ್ಯತೆಯಿರುತ್ತದೆ.
ಕೀರನ್ ಪೊಲಾರ್ಡ್, ಕ್ರಿಸ್ ಗೇಲ್, ಡ್ವೇನ್ ಬ್ರಾವೋ, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಫ್ಯಾಬಿಯನ್ ಅಲೆನ್, ಕೀಮೋ ಪಾಲ್, ಸುನಿಲ್ ನರೈನ್ ಎರಡೂ ಲೀಗ್ಗಳಲ್ಲಿರುವ ಸ್ಟಾರ್ ಆಟಗಾರರಾಗಿದ್ದಾರೆ. ಇವರಷ್ಟೇ ಅಲ್ಲದೆ ಫಾಫ್ ಡು ಪ್ಲೆಸಿಸ್, ರಶೀದ್ ಖಾನ್‌ರಂತಹ ವಿದೇಶಿ ಆಟಗಾರರು ಸಹಾ ಈ ಟೂರ್ನಿಯಲ್ಲಿ ಆಡಲಿದ್ದಾರೆ.
ಇದನ್ನು ಓದಿ:ಧೋನಿಯೊಂದಿಗಿನ ನಿಮ್ಮ ಬಾಂಧವ್ಯದ ಬಗ್ಗೆ ಥಟ್ ಅಂತ ಹೇಳಿ? ಎರಡೇ ಪದಗಳಲ್ಲಿ ವಿರಾಟ್ ಉತ್ತರ ಹೀಗಿತ್ತು..