ETV Bharat / sports

ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದ ಮನೀಶ್ - ಜಾಧವ್​: A ಗೆ ಬಡ್ತಿ ಪಡೆದ ಪಾಂಡ್ಯ, Bಗೆ ಜಾರಿದ ಭುವಿ - ಯಜ್ವೇಂದ್ರ ಚಹಾಲ್

ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಕಳೆದ ವಾರ್ಷಿಕ ಗುತ್ತಿಗೆಯಲ್ಲಿ ಬಿ ಗ್ರೇಡ್​ನಲ್ಲಿದ್ದರು. ಇದೀಗ ಎ ಗ್ರೇಡ್​ಗೆ ಬಡ್ತಿ ಪಡೆದಿದ್ದಾರೆ. ಆದರೆ, ಭುವನೇಶ್ವರ್​ ಕುಮಾರ್ ಎ ನಿಂದ ಬಿ ಗ್ರೇಡ್​ಗೆ, ಯುಜ್ವೇಂದ್ರ ಚಹಲ್ ಬಿ ನಿಂದ ಸಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ
ಬಿಸಿಸಿಐ ವಾರ್ಷಿಕ ಗುತ್ತಿಗೆ
author img

By

Published : Apr 15, 2021, 10:07 PM IST

ಮುಂಬೈ: ಬಿಸಿಸಿಐ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ಬಿಡುಗಡೆ ಮಾಡಿದ್ದು, ಹಾರ್ದಿಕ್ ಪಾಂಡ್ಯ ಬಿ ನಿಂದ ಎ ಬಡ್ತಿ ಪಡೆದಿದ್ದಾರೆ. ಆದರೆ ಕರ್ನಾಟಕದ ಮನೀಶ್ ಪಾಂಡೆ ಮತ್ತು ಮಹರಾಷ್ಟ್ರದ ಕೇದಾರ್ ಜಾಧವ್​ ವಾರ್ಷಿಕ ಗುತ್ತಿಗೆಯಪಟ್ಟಿಯಿಂದ ಹೊರಬಿದ್ದಾರೆ.

ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಕಳೆದ ವಾರ್ಷಿಕ ಗುತ್ತಿಗೆಯಲ್ಲಿ ಬಿ ಗ್ರೇಡ್​ನಲ್ಲಿದ್ದರು. ಇದೀಗ ಎ ಗ್ರೇಡ್​ಗೆ ಬಡ್ತಿ ಪಡೆದಿದ್ದಾರೆ. ಆದರೆ, ಭುವನೇಶ್ವರ್​ ಕುಮಾರ್ ಎ ನಿಂದ ಬಿ ಗ್ರೇಡ್​ಗೆ, ಯುಜ್ವೇಂದ್ರ ಚಹಲ್ ಬಿ ನಿಂದ ಸಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ.

ಯುವ ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇದೇ ಮೊದಲ ಬಾರಿಗೆ ಬಿಸಿಸಿಐನ ವಾರ್ಷಿಕ ಗುತ್ತಿಗೆಗೆ ಸೇರ್ಪಡೆಗೊಂಡಿದ್ದು, ಅವರಿಬ್ಬರು ಸಿ ಗ್ರೇಡ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

2020ರ ಅಕ್ಟೋಬರ್​ನಿಂದ 2021ರ ಸೆಪ್ಟೆಂಬರ್​ಗೆ ಈ ಒಪ್ಪಂದ ಚಾಲ್ತಿಯಲ್ಲಿರಲಿದೆ. ಒಟ್ಟು ಬಿಸಿಸಿಐನಲ್ಲಿ ನಾಲ್ಕು ಗ್ರೇಡ್​ಗಳಿವೆ. ಎ+ ಗ್ರೇಡ್​ನಲ್ಲಿರುವವರ ವಾರ್ಷಿಕವಾಗಿ 7 ಕೋಟಿ ರೂ ಪಡೆಯಲಿದ್ದಾರೆ. ನಂತರ 'ಎ'ನಲ್ಲಿರುವವರಿಗೆ 5, ಬಿ ಗ್ರೇಡ್​ ಆಟಗಾರರಿಗೆ 3 ಮತ್ತು ಸಿ ಗ್ರೇಡ್​ನಲ್ಲಿರುವವರಿಗೆ 1 ಕೋಟಿ ರೂ ಸಿಗಲಿದೆ.

ಪ್ರಸ್ತುತ ಮೂರು ಮಾದರಿಯಲ್ಲಿರುವ ಭಾರತದ ಸ್ಟಾರ್​ ಆಟಗಾರರಾದ ನಾಯಕ ವಿರಾಟ್​ ಕೊಹ್ಲಿ , ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಎ+ ಗ್ರೇಡ್​ನಲ್ಲಿ ಅವಕಾಶ ಪಡೆದಿದ್ದಾರೆ.

ಎ ಗ್ರೇಡ್​- ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್

ಬಿ ಗ್ರೇಡ್​- ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಶಾರ್ದುಲ್ ಠಾಕೂರ್, ಮಯಾಂಕ್ ಅಗರ್​ವಾಲ್

ಸಿ ಗ್ರೇಡ್​- ಕುಲ್ದೀಪ್ ಯಾದವ್​, ನವ್ದೀಪ್ ಸೈನಿ, ದೀಪಕ್ ಚಹರ್, ಶುಬ್ಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್​, ಯುಜ್ವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್

ಇದನ್ನು ಓದಿ:ವಿಸ್ಡನ್ ದಶಕದ ಕ್ರಿಕೆಟಿಗ: ಸಚಿನ್, ರಿಚರ್ಡ್ಸ್​, ಕಪಿಲ್ ದೇವ್ ಸಾಲಿಗೆ ಕಿಂಗ್ ಕೊಹ್ಲಿ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.