ETV Bharat / sports

ಭಾರತಕ್ಕೆ ಬೇರೆ ದೇಶದ ಅಣತಿ ಬೇಕಿಲ್ಲ: ರಮೀಜ್​ ರಾಜಾಗೆ ಕೇಂದ್ರ ಸಚಿವ ಟಕ್ಕರ್​

ಪಾಕಿಸ್ತಾನ ಇಲ್ಲದೇ ವಿಶ್ವಕಪ್​ ಹೇಗೆ ಆಡುತ್ತಾರೆ ನೋಡೋಣ ಎಂದಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ ರಮೀಜ್​ ರಾಜಾಗೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ತಿರುಗೇಟು ನೀಡಿದ್ದಾರೆ.

anurag-thakur-on-ramiz-rajas
ರಮೀಜ್​ ರಾಜಾಗೆ ಕೇಂದ್ರ ಸಚಿವ ಟಕ್ಕರ್​
author img

By

Published : Nov 27, 2022, 9:04 PM IST

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿಯಾಗಿ ಬೆಳೆದಿದೆ. ಬೇರಾವುದೇ ದೇಶದ ಅಣತಿಯಂತೆ ನಾವು ನಡೆಯುವ ಅಗತ್ಯವಿಲ್ಲ. ನಮ್ಮನ್ನು ಯಾರೂ ಆಳಲು ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಹೇಳಿದರು.

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಆಡದಿದ್ದರೆ, ಆ ದೇಶದಲ್ಲಿ ನಡೆಯುವ ಏಕದಿನ ವಿಶ್ವಕಪ್​ನಲ್ಲಿ ಭಾಗವಹಿಸಲ್ಲ. ಹೇಗೆ ವಿಶ್ವಕಪ್​ ಆಡಿಸ್ತೀರಾ ನೋಡೋಣ ಎಂದು ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ ರಮೀಜ್​ ರಾಜಾ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಮಂಡಳಿಗಳ ನಡುವಿನ ವಾಗ್ಯುದ್ಧಕ್ಕೆ ಪ್ರತಿಕ್ರಿಯಿಸಲೇಬೇಕಿದೆ. ಆದರೆ, ನಾವು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇವೆ. ವಿಶ್ವ ಕ್ರೀಡೆಯಲ್ಲಿ ಭಾರತ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದೆ. ಬೇರೆ ಯಾವುದೇ ದೇಶ ನಮ್ಮ ಮೇಲೆ ಅಧಿಕಾರ ಚಲಾಯಿಸಲು ಅಸಾಧ್ಯ ಎಂದು ಸಚಿವ ಅನುರಾಗ್ ಟಕ್ಕರ್​ ಕೊಟ್ಟಿದ್ದಾರೆ.

ಇದಕ್ಕೂ ಮೊದಲು ಕೇಂದ್ರ ಸಚಿವ ಅನುರಾಗ್ ಠಾಕೂರ್​ ಅವರು, ಮುಂದಿನ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಎಲ್ಲಾ ದೇಶಗಳು ಭಾಗವಹಿಸಲಿವೆ. ಇದು ಬಿಸಿಸಿಐನ ಆಂತರಿಕ ವಿಚಾರವಾಗಿದ್ದು, ಇದನ್ನು ಸರಿಯಾದ ಕ್ರಮದಲ್ಲಿ ಬಗೆಹರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಪಾಕ್​ ಭಾರತ ಕ್ರಿಕೆಟ್​ ಮಂಡಳಿ ನಡುವಿನ ವಾಗ್ವಾದವೇನು?: ಮುಂದಿನ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜನೆಯಾಗಿದ್ದು, ಭಾರತ ಭದ್ರತಾ ಕಾರಣಗಳಿಗಾಗಿ ಅಲ್ಲಿಗೆ ಪಯಣಿಸಲು ಸಾಧ್ಯವಿಲ್ಲ. ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿಕೆ ನೀಡಿದ್ದರು. ಇದಕ್ಕೆ ಅಧಿಕೃತವಾಗಿ ಪ್ರತಿಕ್ರಿಯಿಸಿದ ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ರಮೀಜ್​ ರಾಜಾ, ಭಾರತ ಇಲ್ಲಿಗೆ ಆಡಲು ಬರದಿದ್ದರೆ, ನಾವು ಕೂಡ ಭಾರತದಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು. ಇದು ಉಭಯ ಕ್ರಿಕೆಟ್​ ಮಂಡಳಿಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.

ಓದಿ: ಏಷ್ಯಾಕಪ್​ ಆಡಲು ಪಾಕ್​ಗೆ ಬರದಿದ್ರೆ, ವಿಶ್ವಕಪ್​ ಆಡಲು ಭಾರತಕ್ಕೆ ಬರಲ್ಲ: ರಮೀಜ್​ ರಾಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.