ETV Bharat / sports

U-19 ಏಷ್ಯಾ ಕಪ್: 7 ವಿಕೆಟ್​ ಪಡೆದು ಮಿಂಚಿದ ರಾಜ್ ಲಿಂಬಾನಿ, ನೇಪಾಳ ವಿರುದ್ಧ ಗೆದ್ದ ಭಾರತ ಸೆಮೀಸ್​ಗೆ - ನೇಪಾಳದ ವಿರುದ್ಧ ಗೆದ್ದ ಭಾರತ ಸೆಮೀಸ್​ಗೆ

India beat Nepal in U-19 Asia Cup: ಪಾಕಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲನುಭವಿಸಿದ್ದ 19 ವರ್ಷದೊಳಗಿನವರ ತಂಡ ನೇಪಾಳದ ವಿರುದ್ಧ ಗೆದ್ದು ಸೆಮೀಸ್​ ಪ್ರವೇಶಿಸಿದೆ.

Etv Bharat
Etv Bharat
author img

By ETV Bharat Karnataka Team

Published : Dec 12, 2023, 11:02 PM IST

ದುಬೈ: ವೇಗದ ಬೌಲರ್ ರಾಜ್ ಲಿಂಬಾನಿ ಅವರ ಅದ್ಭುತ ಬೌಲಿಂಗ್​ನಿಂದ 19 ವರ್ಷದೊಳಗಿನವರ ತಂಡ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ನೇಪಾಳ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಪಡೆದರು. ಎ ಗುಂಪಿನಿಂದ ಪಾಕಿಸ್ತಾನ ಮತ್ತು ಭಾರತ ಸೆಮಿ ಫೈನಲ್​ ಪ್ರವೇಶಿಸಿದೆ. ನಾಳೆ (ಡಿ.13) ಬಿ ಗುಂಪಿನ ಬಾಂಗ್ಲಾದೇಶ - ಶ್ರೀಲಂಕಾ ಮತ್ತು ಯುನೈಟೆಡ್​ ಅರಬ್​ ಎಮಿರೇಟ್ಸ್​ - ಜಪಾನ್​ ನಡುವೆ ಪಂದ್ಯ ನಡೆಲಿದ್ದು, ಗೆದ್ದ ತಂಡಗಳು ಸೆಮೀಸ್​ನಲ್ಲಿ ಎ ಗುಂಪಿನ ತಂಡಗಳ ವಿರುದ್ಧ ಆಡಲಿದೆ.

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡ ಭಾರತ ನೇಪಾಳವನ್ನು ಅತ್ಯಲ್ಪಮೊತ್ತಕ್ಕೆ ಕಟ್ಟಿಹಾಕಿತು. ನೇಪಾಳದ ಯಾವುದೇ ಒಬ್ಬ ಬ್ಯಾಟರ್​ ಎರಡಂಕಿ ತಲುಪಲಿಲ್ಲ. ಮೂವರು ಆಟಗಾರರು 5ಕ್ಕಿಂತ ಹೆಚ್ಚಿನ ರನ್​ ಗಳಿಸಿದರು. ಅದನ್ನು ಬಿಟ್ಟರೆ 7 ಆಟಗಾರರು 5ಕ್ಕಿಂತ ಕಡಿಮೆ ರನ್​ ಗಳಿಸಿದರು. 22.1 ಓವರ್​ಗೆ ನೇಪಾಳ ತನ್ನೆಲ್ಲಾ ವಿಕೆಟ್​​ಗಳನ್ನು ಕಳೆದುಕೊಂಡು 52 ರನ್​ಗೆ ಶರಣಾಯಿತು. ರಾಜ್ ಲಿಂಬಾನಿ ನೇಪಾಳದ ವಿರುದ್ಧ ಮಿಂಚಿನ ಬೌಲಿಂಗ್​​ ದಾಳಿ ಮಾಡಿದರು.

9.1 ಓವರ್​ ಮಾಡಿದ ರಾಜ್ ಲಿಂಬಾನಿ ಕೇವಲ 13 ರನ್​ ಕೊಟ್ಟು 7 ವಿಕೆಟ್​ ಕಿತ್ತರು ಇವರಿಗೆ ತಂಡದಲ್ಲಿ ಸಾಥ್​ ನೀಡಿದ್ದು ಆರಾಧ್ಯ ಶುಕ್ಲಾ. ಶುಕ್ಲಾ 9 ಓವರ್​ ಮಾಡಿ 31 ರನ್​ ಕೊಟ್ಟು 2 ವಿಕೆಟ್​ ಪಡೆದರು. ಅರ್ಶಿನ್ ಕುಲಕರ್ಣಿ 1 ವಿಕೆಟ್​ ಪಡೆದರು. ಏಷ್ಯಾಕಪ್​ ಫೈನಲ್​ನಲ್ಲಿ ಸಿರಾಜ್​ ಶ್ರೀಲಂಕಾದ ವಿರುದ್ಧ ಬೌಲಿಂಗ್​ ಪ್ರದರ್ಶನ ನೀಡಿದ ರೀತಿ ಕಂಡು ಬಂತು.

53 ರನ್​ನ ಗುರಿಯನ್ನು ಬೆನ್ನತ್ತಿದ ಭಾರತ 7.1 ಓವರ್​ಗೆ ಜಯ ದಾಖಲಿಸಿತು. ಆಲ್​ರೌಂಡರ್​ ಯುವ ಬ್ಯಾಟರ್​ ಅರ್ಶಿನ್ ಕುಲಕರ್ಣಿ ಚುಟುಕು ಗುರಿ ಇದ್ದರೂ ಅಬ್ಬರದ ಇನ್ನಿಂಗ್ಸ್​ ಆಡಿದರು. ಕುಲಕರ್ಣಿ 30 ಬಾಲ್ ಆಡಿ 5 ಸಿಕ್ಸ್​ ಮತ್ತು 1 ಬೌಂಡರಿಯ ಸಹಾಯದಿಂದ 43 ರನ್​ಗಳಿಸಿದರು. ಅವರೊಂದಿಗೆ ಆದರ್ಶ್ ಸಿಂಗ್ 13 ಬಾಲ್​ನಲ್ಲಿ 2 ಬೌಂಡರಿಯ ಸಹಾಯದಿಂದ 13 ರನ್​​​ ಕಲೆಹಾಕಿದರು. ಇದರಿಂದ ಭಾರತ 42.5 ಓವರ್​ ಮತ್ತು 10 ವಿಕೆಟ್​ ಉಳಿಸಿಕೊಂಡು ಜಯ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್‌ಗಳು: ನೇಪಾಳ U-19 22.1 ಓವರ್‌ಗಳಲ್ಲಿ 52 (ರಾಜ್ ಲಿಂಬಾನಿ 7/13). ಭಾರತ 7.1 ಓವರ್‌ಗಳಲ್ಲಿ 52/0 (ಅರ್ಶಿನ್ ಕುಲಕರ್ಣಿ ಔಟಾಗದೆ 43).

ಇದನ್ನೂ ಓದಿ: ಹರಿಣಗಳ ವಿರುದ್ಧ ರಿಂಕು ಸಿಂಗ್​​, ಸೂರ್ಯ ಅಬ್ಬರದ ಅರ್ಧಶತಕ: ಬೃಹತ್​ ಮೊತ್ತದತ್ತ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.