ಬಾಸಿಲ್: ಭಾರತದ ಶಟ್ಲರ್ಗಳಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಅಜಯ್ ಜಯರಾಮ್ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್ 21-10, 14-21, 21-14ರಲ್ಲಿ ವಿಶ್ವದ 50 ನೇ ಶ್ರೇಯಾಂಕದ ಫ್ರಾನ್ಸ್ನ ಥಾಮಸ್ ರೌಕ್ಸೆಲ್ ಅವರನ್ನು, ಜಯರಾಮ್ ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಡೆನ್ಮಾರ್ಕ್ನ ಡೇನ್ ರಸ್ಮಸ್ ಗೆಮ್ಕೆ ವಿರುದ್ಧ ಪ್ರಬಲ ಪೈಪೋಟಿ ನಡೆಸಿ 21-18, 17-21, 21-13ರಲ್ಲಿ ಗೆಲವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಿಂಗಲ್ಸ್ನಲ್ಲಷ್ಟೇ ಅಲ್ಲದೆ, ಮಿಶ್ರ ಡಬಲ್ಸ್ನಲ್ಲಿ ಸಾತ್ರಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಇಂಡೋನೇಷಿಯಾದ ರಿನೊವ್ ರಿವಾಲ್ಡಿ - ಪಿತಾ ಹನಿಂಗ್ತ್ಯಾಸ್ ಮೆಂತಾರಿ ವಿರುದ್ಧ 21-18, 21-16ರಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ: ಅರ್ಜೆಂಟೀನಾ ಓಪನ್; 2ನೇ ಶ್ರೇಯಾಂಕದ ಗ್ಯಾರಿಂಟೋರನ್ನು ಮಣಿಸಿದ ಭಾರತದ ಸುಮಿತ್