ETV Bharat / sports

ಥಾಯ್ಲೆಂಡ್​ ಓಪನ್​: ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್​ ಪಡೆದು ತರಬೇತಿ ಆರಂಭಿಸಿದ ಭಾರತ ತಂಡ

ಭಾರತೀಯ ಒಲಿಂಪಿಕ್​ ಭರವಸೆಯ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್​ ಮತ್ತು ಸಾಯಿ ಪ್ರಣೀತ್​ ತರಬೇತಿಗಾಗಿ ಸಮಯವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಎಲ್ಲಾ ಆಟಗಾರರು ಮಧ್ಯಾಹ್ನ ಜಿಮ್​ ಸೆಷನ್​ ಕೂಡ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಥಾಯ್ಲೆಂಡ್​ ಓಪನ್
ಥಾಯ್ಲೆಂಡ್​ ಓಪನ್
author img

By

Published : Jan 6, 2021, 6:57 PM IST

ನವದೆಹಲಿ: ಭಾರತ ಬ್ಯಾಡ್ಮಿಂಟನ್​ ತಂಡ ಬುಧವಾರ ಕೋವಿಡ್​-19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದು, ಮುಂದಿನ ವಾರ ಶುರುವಾಗಲಿರುವ ಯುನೆಕ್ಸ್​ ಥಾಯ್ಲೆಂಡ್​ ಓಪನ್​ಗಾಗಿ ಅಭ್ಯಾಸ ನಡೆಸಲು ಎದುರು ನೋಡುತ್ತಿದೆ.

​ಗ್ರೀನ್​ ಝೋನ್​ ಭಾಗವಾಗಿರುವ ಭಾರತೀಯ ತಂಡ, ಎಲ್ಲಾ ರಾಷ್ಟ್ರಗಳ ಆಟಗಾರರು, ಸ್ಟೇಕ್​ ಹೋಲ್ಡರ್ಸ್​, ಅಂಪೈರ್​​ಗಳು, ಲೈನ್​ ತೀರ್ಪುಗಾರರು, ಥಾಯ್ಲೆಂಡ್​ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನ ವೈದ್ಯಕೀಯ ಸಿಬ್ಬಂದಿ, ಟಿವಿ ಪ್ರೊಡಕ್ಷನ್​ ಸಿಬ್ಬಂದಿ ಬ್ಯಾಂಕಾಕ್​ಗೆ ಆಗಮಿಸಿದ ನಂತರ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು.

"ಬ್ಯಾಂಕಾಕ್​ಗೆ ಆಗಮಿಸಿ ಗ್ರೀನ್ ​ಝೋನ್​ನಲ್ಲಿ ಕ್ವಾರಂಟೈನ್​ ಆಗಿದ್ದ ಎಲ್ಲಾ 824 ಆಟಗಾರರು ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್​ ಪಡೆದಿರುವುದರಿಂದ ಟೂರ್ನಿ ಉತ್ತೇಜನ ಪಡೆದುಕೊಂಡಿದೆ. ಇದೀಗ ಎಲ್ಲಾ ಆಟಗಾರರು ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್​ಗಳ ಅಡಿಯಲ್ಲಿ ತರಬೇತಿಗೆ ಮುಕ್ತರಾಗಿದ್ದಾರೆ" ಎಂದು ಬಿಡಬ್ಲ್ಯೂಎಫ್ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತೀಯ ಒಲಿಂಪಿಕ್​ ಭರವಸೆಯ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್​ ಮತ್ತು ಸಾಯಿ ಪ್ರಣೀತ್​ ತರಬೇತಿಗಾಗಿ ಸಮಯವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಎಲ್ಲಾ ಆಟಗಾರರು ಮಧ್ಯಾಹ್ನ ಜಿಮ್​ ಸೆಷನ್​ ಕೂಡ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ಭಾರತ ತಂಡ ಇಂದಿನಿಂದ ತಮ್ಮ ತರಬೇತಿಯನ್ನು ಪುನರಾರಂಭಿಸಲಿದೆ. ಜಿಮ್​ಗಾಗಿ ಮಧ್ಯಾಹ್ನ 2:30 ಮತ್ತು ತರಬೇತಿ ಸಮಯವನ್ನು ಸಂಜೆ 7ರಿಂದ 8ರವರೆಗೆ ನಿಗದಿ ಮಾಡಲಾಗಿದೆ" ಎಂದು ಬಿಎಐ(ಬ್ಯಾಡ್ಮಿಂಟನ್ ಫಡೆರೇಶನ್ ಆಫ್​ ಇಂಡಿಯಾ) ಟ್ವೀಟ್​ ಮಾಡಿದೆ.

2021ರಲ್ಲಿ ಬ್ಯಾಡ್ಮಿಂಟನ್​ ಮೊದಲ ಟೂರ್ನಿಯಾದ ಯುನೆಕ್ಸ್​ ಥಾಯ್ಲೆಂಡ್ ಓಪನ್​ ಜನವರಿ 12-17 ಮತ್ತು ಎರಡನೇ ಸೂಪರ್​ 1000 ಇವೆಂಟ್ ಆದ​ ಟೊಯೊಟಾ ಥಾಯ್ಲೆಂಡ್​ ಓಪನ್​ ಜನವರಿ 19ರಿಂದ 24ರವರೆಗೆ ನಡೆಯಲಿದೆ. ನಂತರ ಜನವರಿ 27ರಿಂದ 31ರವರೆಗೆ 15,00,000 ಡಾಲರ್​ ಮೊತ್ತದ ಹೆಚ್​​ಸಿಬಿಸಿ ಬಿಡಬ್ಲ್ಯೂಫ್​ ಟೂರ್​ ಫೈನಲ್​​ ನಡೆಯಲಿದೆ.

ಇದನ್ನು ಓದಿ:ಕೇವಲ ಒಂದು ಗಂಟೆ ಮಾತ್ರ ಅಭ್ಯಾಸ, ಕೋಚ್​ ಭೇಟಿಗೆ ಅವಕಾಶವಿಲ್ಲ: BWF ವಿರುದ್ಧ ಸೈನಾ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.