ETV Bharat / sports

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ : ಇಂಡಿಯಾ ಓಪನ್ ಮುಂದೂಡಿದ BAI - ಇಂಡಿಯಾ ಓಪನ್​ 2021

ಇಂಡಿಯಾ ಓಪನ್‌ನ 2020ರ ಆವೃತ್ತಿಯೂ ಕೂಡ ಮಾರ್ಚ್‌ನಿಂದ ಡಿಸೆಂಬರ್‌ಗೆ ಮುಂದೂಡಲಾಗಿತ್ತು. ಆದರೆ, ನಂತರ ಅದನ್ನೂ ರದ್ದುಪಡಿಸಲಾಗಿತ್ತು..

ಇಂಡಿಯಾ ಓಪನ್ ಮುಂದೂಡಿಕೆ BAI
ಇಂಡಿಯಾ ಓಪನ್ ಮುಂದೂಡಿಕೆ BAI
author img

By

Published : Apr 19, 2021, 9:48 PM IST

ನವದೆಹಲಿ : ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೊನೆಯ 3 ಇವೆಂಟ್​ನಲ್ಲಿ ಒಂದಾದ ಇಂಡಿಯಾ ಓಪನ್‌ನ ಮುಂದೂಡಲಾಗಿದೆ.

4,00,000 ಡಾಲರ್​ ಬಹುಮಾನ ಮೊತ್ತದ ಇಂಡಿಯಾ ಓಪನ್​ ಮೇ 11ರಿಂದ 16ರವರೆಗೆ ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ, ಮುನ್ನಚ್ಚೆರಿಕೆಯ ಕ್ರಮವಾಗಿ ಟೂರ್ನಿಯನ್ನು ಮುಂದೂಡಲಾಗಿದೆ.

"ಪ್ರಸ್ತುತ ಸವಾಲುಗಳನ್ನು ಪರಿಗಣಿಸಿದಾಗ ಬಿಎಐ ಮುಂದೆ ಸದ್ಯಕ್ಕೆ ಪಂದ್ಯಾವಳಿ ಮುಂದೂಡುವುದಾಗಿ ಘೋಷಿಸುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ" ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಬಿಎಐ) ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವು ಪಂದ್ಯಾವಳಿಯನ್ನು ಎರಡನೇ ಬಾರಿಗೆ ಮುಂದೂಡಬೇಕಾಗಿರುವುದು ದುರದೃಷ್ಟಕರ. ಆದರೆ, ಪರಿಸ್ಥಿತಿ ಯಾವಾಗ ಸುಧಾರಿಸುತ್ತದೆಯೋ ಅಂದು ನಾವು ಪಂದ್ಯಾವಳಿ ನಡೆಸುತ್ತೇವೆ ಎಂಬ ವಿಶ್ವಾಸವಿದೆ. ಆದರೆ, ಹೊಸ ದಿನಾಂಕಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅದು ಬಿಡಬ್ಲ್ಯೂಎಫ್ ನಮಗೆ ತಿಳಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಇಂಡಿಯಾ ಓಪನ್‌ನ 2020ರ ಆವೃತ್ತಿಯೂ ಕೂಡ ಮಾರ್ಚ್‌ನಿಂದ ಡಿಸೆಂಬರ್‌ಗೆ ಮುಂದೂಡಲಾಗಿತ್ತು. ಆದರೆ, ನಂತರ ಅದನ್ನೂ ರದ್ದುಪಡಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.