ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಯನ್ ಪಲಕ್ ಕೊಹ್ಲಿ, ಸಂಜನಾ ಕುಮಾರಿ ಮತ್ತು ಹಾರ್ದಿಕ್ ಮಕ್ಕರ್ ಅವರ ತಲಾ 3 ಪದಕಗಳ ಜೊತೆಗೆ ಭಾರತ ಪ್ಯಾರಾ ತಂಡ ಬೆಹ್ರೇನ್ನಲ್ಲಿ ಏಷ್ಯಾ ಯೂತ್ ಪ್ಯಾರಾ ಗೇಮ್ಸ್ನಲ್ಲಿ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದೆ.
ಭಾರತೀಯ ಪ್ಯಾರಾ ಶಟ್ಲರ್ಗಳು 4 ಚಿನ್ನ , 7 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದರು. ಮಹಿಳೆಯರ ಸಿಂಗಲ್ಸ್ನಲ್ಲಿ ನಿತ್ಯಶ್ರೀ SH6 ಮತ್ತು ಸಂಜನಾ SL3 ವಿಭಾಗದಲ್ಲಿ ಚಿನ್ನ ಗೆದ್ದರು. ಪಲಕ್ ಮತ್ತು ಸಂಜನಾ ಮಹಿಳಾ ಡಬಲ್ಸ್(SL3-SU5) ನಲ್ಲಿ ಮತ್ತು ನೆಹಾಲ್ ಗುಪ್ತಾ ಮತ್ತು ಅಭಿಜಿತ್ ಸಖುಜಾ ಪುರುಷರ್ ಡಬಲ್ಸ್(SL3-SL4) ವಿಭಾಗದಲ್ಲಿ ಸ್ವರ್ಣಕ್ಕೆ ಮುತ್ತಿಕ್ಕಿದರು.
ಬೆಳ್ಳಿ ಪದಕ ವಿಜೇತರು: ನಿತ್ಯಶ್ರೀ ಮತ್ತು ಆದಿತ್ಯ ಕುಲಕರ್ಣಿ (ಮಿಶ್ರ ಡಬಲ್ಸ್, SH6), ಜ್ಯೋತಿ (ಮಹಿಳೆಯರ ಸಿಂಗಲ್ಸ್, SL4), ನವೀನ್ ಎಸ್ (ಪುರುಷರ ಸಿಂಗಲ್ಸ್, SL4), ಹಾರ್ದಿಕ್ ಮಕ್ಕರ್ (ಪುರುಷರ ಸಿಂಗಲ್ಸ್, SU5), ಕರಣ್ ಪನೀರ್ ಮತ್ತು ರುತಿಕ್ ರಘುಪತಿ (ಪುರುಷರ ಡಬಲ್ಸ್ SU5), ಹಾರ್ದಿಕ್ ಮತ್ತು ಸಂಜನಾ (ಮಿಶ್ರ ಡಬಲ್ಸ್, SL3-SU5).
-
𝐏𝐑𝐎𝐔𝐃 𝐌𝐎𝐌𝐄𝐍𝐓 🤩🇮🇳
— BAI Media (@BAI_Media) December 6, 2021 " class="align-text-top noRightClick twitterSection" data="
News coming in, our youth Para-Shuttlers showed top notch performance to win a rich haul of 15 medals including 4 Golds 🏅at the #YouthParaGames in Bahrain🇧🇭 earlier today.
We’re proud of you all! 😍💪#IndiaontheRise #badminton pic.twitter.com/zoHDnQpkDg
">𝐏𝐑𝐎𝐔𝐃 𝐌𝐎𝐌𝐄𝐍𝐓 🤩🇮🇳
— BAI Media (@BAI_Media) December 6, 2021
News coming in, our youth Para-Shuttlers showed top notch performance to win a rich haul of 15 medals including 4 Golds 🏅at the #YouthParaGames in Bahrain🇧🇭 earlier today.
We’re proud of you all! 😍💪#IndiaontheRise #badminton pic.twitter.com/zoHDnQpkDg𝐏𝐑𝐎𝐔𝐃 𝐌𝐎𝐌𝐄𝐍𝐓 🤩🇮🇳
— BAI Media (@BAI_Media) December 6, 2021
News coming in, our youth Para-Shuttlers showed top notch performance to win a rich haul of 15 medals including 4 Golds 🏅at the #YouthParaGames in Bahrain🇧🇭 earlier today.
We’re proud of you all! 😍💪#IndiaontheRise #badminton pic.twitter.com/zoHDnQpkDg
ಕಂಚಿನ ಪದಕ ವಿಜೇತರು: ಪಲಕ್ ಕೊಹ್ಲಿ (ಮಹಿಳೆಯರ ಸಿಂಗಲ್ಸ್ SU5), ಪಲಕ್ ಮತ್ತು ನೇಹಾಲ್ ಗುಪ್ತಾ (ಮಿಶ್ರ ಡಬಲ್ಸ್, SL3-SU5), ನವೀನ್ ಎಸ್ ಮತ್ತು ಹಾರ್ದಿಕ್ ಮಕ್ಕರ್ (ಪುರುಷರ ಡಬಲ್ಸ್, SU5), ಆದಿತ್ಯ ಕುಲಕರ್ಣಿ (ಪುರುಷರ ಸಿಂಗಲ್ಸ್, SH6). ಡಿಸೆಂಬರ್ 2ರಿಂದ 6ರವರೆಗೆ ನಡೆದ ಈ ಕೂಟದಲ್ಲಿ 30 ರಾಷ್ಟ್ರಗಳಿಂದ ಸುಮಾರು 700 ಪ್ಯಾರಾ ಶಟ್ಲರ್ಗಳು ಈ ಯುವ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:BWF World Tour Finals : ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು