ETV Bharat / sitara

ಮಂಜಿನ ನಗರಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಜಯಲಕ್ಷ್ಮಿ ಸಿಂಗ್ ಕುಟುಂಬ - Sandalwood director Vijayalakshmi singh

ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪತಿ ಜೈಜಗದೀಶ್ ಹಾಗೂ ಮೂವರು ಮಕ್ಕಳೊಂದಿಗೆ ಮಡಿಕೇರಿಗೆ ತೆರಳಿದ್ದಾರೆ. ಇಲ್ಲಿನ ಸುಂದರ ಪರಿಸರದಲ್ಲಿ ತೆಗೆದ ಫೋಟೋಗಳನ್ನು ವೈಸಿರಿ ತಮ್ಮ ಇನ್ಸ್​​​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

Vijayalakshmi singh family in Madikeri
ವಿಜಯಲಕ್ಷ್ಮಿ ಸಿಂಗ್ ಕುಟುಂಬ
author img

By

Published : Sep 16, 2020, 3:43 PM IST

6 ತಿಂಗಳ ಕಾಲ ಮನೆಯಲ್ಲೇ ಕುಳಿತಿದ್ದ ಜನರು ಈಗ ಪ್ರವಾಸ ಹೋಗುತ್ತಿದ್ದಾರೆ. ಟಾಲಿವುಡ್ ನಿರ್ದೇಶಕ ರಾಜಮೌಳಿ ಗುಂಡ್ಲುಪೇಟೆಯ ಹಿಮವದ್​​​​ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಕೂಡಾ ಇದೀಗ ಪತಿ ಜೈಜಗದೀಶ್ ಹಾಗೂ ಮಕ್ಕಳೊಂದಿಗೆ ಮಡಿಕೇರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಬೆಳ್ಳಿತೆರೆಯಲ್ಲಿ ನಿರ್ದೇಶನ, ನಟನೆಯಲ್ಲಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಸಿಂಗ್ ಮೊದಲ ಬಾರಿಗೆ ಕಿರುತೆರೆಯ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅಮ್ಮ ಶಾರದಾದೇವಿ ಆಗಿ ಅಭಿನಯಿಸುತ್ತಿದ್ದಾರೆ. ಕಿರುತೆರೆಪ್ರಿಯರು ಕೂಡಾ ಶಾರದಾದೇವಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಶೂಟಿಂಗ್ ನಡುವೆ ಬಿಡುವು ಪಡೆದುಕೊಂಡು ಮಡಿಕೇರಿಯ ಸುಂದರ ತಾಣಗಳಲ್ಲಿ ವಿಜಯಲಕ್ಷ್ಮಿ ಸಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಈ ಸುಂದರ ಫೋಟೋಗಳನ್ನು ವಿಜಯಲಕ್ಷ್ಮಿ ಸಿಂಗ್ ಪುತ್ರ ವೈಸಿರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Vijayalakshmi singh family in Madikeri
ಮಡಿಕೇರಿಯಲ್ಲಿ ವಿಜಯಲಕ್ಷ್ಮಿ ಸಿಂಗ್ ಕುಟುಂಬ

ವಿಡಿಯೋವೊಂದನ್ನು ಕೂಡಾ ಹಂಚಿಕೊಂಡಿರುವ ವೈಸಿರಿ, ನಾವು ಪೂರ್ವಜರಿಗೆ ಗೌರವ ಸಲ್ಲಿಸಲು ಕೆರೆಕೊಪ್ಪಕ್ಕೆ ಬಂದಿದ್ದೇವೆ. ಬಹಳ ದಿನಗಳ ಬಳಿಕ ಇಲ್ಲಿ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಇಲ್ಲಿ ನಾವು ಆರಾಮವಾಗಿ ಕಾಲ ಕಳೆಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.