ಬಿಗ್ಬಾಸ್ ಸೀಸನ್ 7 ಕೂಡಾ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಫಿನಾಲೆಗೆ ಒಂದು ವಾರವಷ್ಟೇ ಬಾಕಿ ಇದೆ. ಕಳೆದ ವಾರ ಪ್ರಿಯಾಂಕ ಮನೆಯಿಂದ ಹೊರ ಹೋಗಿದ್ದಾರೆ. ಇನ್ನು ಪ್ರಿಯಾಂಕ ಹಾಗೂ ರವಿ ಬೆಳಗೆರೆ ಹೊರತುಪಡಿಸಿ ಈ ಮುನ್ನ ಎಲಿಮಿನೇಟ್ ಆಗಿದ್ದ ಸ್ಫರ್ಧಿಗಳು ಮತ್ತೆ ಮನೆಯೊಳಗೆ ಬಂದಿದ್ದಾರೆ.
ಸದ್ಯಕ್ಕೆ ಭೂಮಿ ಶೆಟ್ಟಿ, ದೀಪಿಕಾ ದಾಸ್, ಹರೀಶ್ ರಾಜ್, ಕುರಿಪ್ರತಾಪ್, ವಾಸುಕಿ ವೈಭವ್ ಮಾತ್ರ ಬಿಗ್ಬಾಸ್ ಮನೆಯೊಳಗೆ ಉಳಿದಿದ್ದಾರೆ. ಇವರಲ್ಲಿ ಬಿಗ್ಬಾಸ್ ವಿಜೇತ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ವಾರಾಂತ್ಯದಲ್ಲಿ ಆ ಎಲ್ಲಾ ಕುತೂಹಲಕ್ಕೆ ಬ್ರೇಕ್ ಬೀಳಲಿದೆ. ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳ ಸ್ನೇಹಿತರು, ಸಂಬಂಧಿಕರು ತಮ್ಮ ಮೆಚ್ಚಿನ ಸ್ಪರ್ಧಿ ಈ ಬಾರಿ ಗೆದ್ದು ಬರಲಿ ಎಂದು ಹಾರೈಸಿದ್ದಾರೆ. ಹಾಗೆ ಈ ಸೀಸನ್ನಲ್ಲಿ ದೀಪಿಕಾ ದಾಸ್ ಬಹಳ ಚೆನ್ನಾಗಿ ಎಲ್ಲಾ ಟಾಸ್ಕ್ಗಳನ್ನು ಪೂರೈಸಿದ್ದಾರೆ. ಆದ್ದರಿಂದ ದೀಪಿಕಾ ವಿಜೇತರಾಗಲಿ ಎಂದು ನಟಿ ಶಿಲ್ಪಾರವಿ ವಿಶ್ ಮಾಡಿದ್ದಾರೆ. 'ನಾಗಿಣಿ' ಧಾರಾವಾಹಿಯಲ್ಲಿ ದೀಪಿಕಾ ಸಹಕಲಾವಿದೆಯಾಗಿ ನಟಿಸಿದ್ದ ಶಿಲ್ಪಾರವಿ ನಾನು ಖಂಡಿತ ದೀಪಿಕಾ ಅವರಿಗೆ ವೋಟ್ ಮಾಡುತ್ತೇನೆ. ಆಲ್ ದಿ ಬೆಸ್ಟ್ ದೀಪಿಕಾ ಎಂದು ವಿಶ್ ಮಾಡಿದ್ದಾರೆ.
![Deepika das](https://etvbharatimages.akamaized.net/etvbharat/prod-images/5866228_deepika.jpg)