ETV Bharat / sitara

ಗೌನ್​ನಲ್ಲಿ ಮಿಂಚಿದ ಕನ್ನಡತಿ‌ ಭುವನೇಶ್ವರಿ! - kannadathi kannada serial

ವೀಕ್ಷಕರಿಗೆಲ್ಲಾ ರಂಜನಿ ರಾಘವನ್ ಅಂದರೆ ಅವರ ಟ್ರೆಡಿಷನಲ್ ಲುಕ್ ಕಣ್ಮುಂದೆ ಬರುತ್ತದೆ. ಆದರೆ, ಈ ಬಾರಿ ಅವರು ಮಾಡರ್ನ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಬರುವ ದೃಶ್ಯವೊಂದಕ್ಕಾಗಿ ಅವರು ಗೌನ್ ತೊಟ್ಟಿದ್ದಾರೆ.

ranjani
ranjani
author img

By

Published : May 20, 2021, 9:06 PM IST

ಕೆಲವು ದಿನಗಳ ಹಿಂದೆಯಷ್ಟೇ ರಂಜನಿ ರಾಘವನ್ ಅವರು ವೆಬ್ ಸೈಟ್​ಗೆ ವಾರಕ್ಕೊಂದು ಸಣ್ಣ ಕತೆ ಬರೀತಿದ್ದೀನಿ ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ranjani
ರಂಜನಿ ರಾಘವನ್

ಹೌದು, ಸಾಮಾನ್ಯವಾಗಿ ವೀಕ್ಷಕರಿಗೆಲ್ಲಾ ರಂಜನಿ ಅಂದರೆ ಅವರ ಟ್ರೆಡಿಷನಲ್ ಲುಕ್ ಕಣ್ಮುಂದೆ ಬರುತ್ತದೆ. ಆದರೆ, ಈ ಬಾರಿ ಅವರು ಮಾಡರ್ನ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ರಂಜನಿ ಈ ರೀತಿ ಮಾಡರ್ನ್ ಡ್ರೆಸ್ ಹಾಕಿರುವುದು ಯಾವುದೋ ಫೋಟೋ ಶೂಟ್​ಗಾಗಿ ಅಲ್ಲ, ಬದಲಿಗೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ದೃಶ್ಯವೊಂದಕ್ಕಾಗಿ.

ranjani
ರಂಜನಿ ರಾಘವನ್

ಇನ್ ಸ್ಟಾಗ್ರಾಂನಲ್ಲಿ ರಂಜನಿ ಈ ಫೋಟೋ ಹಾಕುತ್ತಿದ್ದಂತೆ ಅವರ ಅಭಿಮಾನಿಗಳಿಂದ ಕಮೆಂಟ್ಸ್, ಲೈಕ್ಸ್ ಸುರಿಮಳೆಯೇ ಹರಿದುಬರುತ್ತಿದೆ. ಸದ್ಯ ಪ್ರತಿಯೊಬ್ಬರು ರಂಜನಿ ಅವರ ಮಾಡರ್ನ್ ಲುಕ್ ನೋಡಿ ಫಿದಾ ಆಗಿದ್ದಾರೆ. ರಂಜನಿ ಈ ಫೋಟೋ ಅಪ್​ಲೋಡ್ ಮಾಡಿ, ಕನ್ನಡತಿ ಧಾರಾವಾಹಿಯಲ್ಲಿ ಈ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಒಂದು ದಿನದ ಹಿಂದೆ ಸುಳಿವು ನೀಡಿದ್ದರು. ಆದರೆ, ಕನ್ನಡತಿ ಧಾರವಾಹಿ ವೀಕ್ಷಕರಿಗೆ ರಂಜನಿ ಈ ಡ್ರೆಸ್ ಯಾಕೆ ಹಾಕಿದ್ದಾರೆ ಎಂಬ ಚಿಕ್ಕ ಸುಳಿವು ಆಗಲೇ ಸಿಕ್ಕಿತ್ತು.

ranjani
ರಂಜನಿ ರಾಘವನ್

ಹೌದು, ಬ್ಯುಸಿನೆಸ್​ಗೆ ಸಂಬಂಧಿಸಿದಂತೆ ಭುವಿ ಮತ್ತು ಹರ್ಷ ಹಳೆಯ ಮನೆಗೆ ಬಂದಿರುತ್ತಾರೆ. ಈ ಸಂದರ್ಭದಲ್ಲಿ ಕೈ ತಪ್ಪಿ ಮನೆಯ ಕೆಲಸದವನು ಭುವಿ ಮೇಲೆ ನೀರು ಚೆಲ್ಲುತ್ತಾನೆ. ತಕ್ಷಣ ಹರ್ಷ ಆಕೆಗೆ ತನ್ನ ಕೋಟ್ ನೀಡುತ್ತಾನೆ. ಕೊನೆಗೆ ಕಾರಿನಲ್ಲಿ ಸೀರೆ ಇಟ್ಟಿದ್ದು, ನೆನಪಾಗಿ ಹರ್ಷ ಆ ಸೀರೆಯನ್ನು ಭುವಿಗೆ ತಂದುಕೊಡಲು ಮುಂದಾಗುತ್ತಾನೆ. ಆದರೆ, ಆ ಸೀರೆಯ ಜಾಗದಲ್ಲಿ ಸುಚಿತ್ರಾ ಅದಲು ಬದಲು ಮಾಡಿ ಇಟ್ಟಿರುವ ಗೌನ್ ಇರುತ್ತದೆ.

ranjani
ರಂಜನಿ ರಾಘವನ್

ಈ ವಿಚಾರ ತಿಳಿಯದ ಹರ್ಷ ಗೌನ್ ತಂದು ಭುವಿಗೆ ಕೊಡುತ್ತಾನೆ. ಕೊನೆಗೆ ಭುವಿ ಆ ಡ್ರೆಸ್ ಧರಿಸಿ ಹರ್ಷ ಕಣ್ಮುಂದೆ ಬಂದಾಗ ಆತ ಬೆರಗಾಗುತ್ತಾನೆ. ಆ ಡ್ರೆಸ್​ನಲ್ಲಿ ಭುವಿಯನ್ನು ನೋಡಿ ಹರ್ಷ ಪ್ರಪೋಸ್ ಮಾಡೋಣ ಅಂದುಕೊಂಡರೂ, ಕೊನೆಗೆ ಇಂದು ಬೇಡ ಅಂದುಕೊಂಡು ಸುಮ್ಮನಾಗುತ್ತಾನೆ.

ranjani
ರಂಜನಿ ರಾಘವನ್

ಕನ್ನಡತಿ ಧಾರಾವಾಹಿ ಲಾಕ್​ಡೌನ್ ಮಧ್ಯೆ ವೀಕ್ಷಕರನ್ನು ರಂಜಿಸುತ್ತಿದೆ. ದಿನದಿಂದ ದಿನಕ್ಕೆ ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ವೀಕ್ಷಕರು ಹರ್ಷ-ಭುವಿ ಯಾವಾಗ ಮದುವೆಯಾಗುತ್ತಾರೆ ಎಂದು ಕಾಯುತ್ತಿರುವುದಂತೂ ಸುಳ್ಳಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.