ಇಡೀ ವಿಶ್ವವೇ ಕೊರೊನಾ ಮಹಾಮಾರಿಗೆ ತತ್ತರಿಸಿ ಪ್ರಾಣ ಉಳಿಸಿಕೊಳ್ಳಲು ಪರಾದಾಡುತ್ತಿದೆ. ಈ ಮಧ್ಯೆ ಲಾಕ್ಡೌನ್ಗೆ ಸಿಲುಕಿ ಮನೆಯಲ್ಲಿ ಕುಳಿತ ಅದೆಷ್ಟೋ ಟಿವಿ ವೀಕ್ಷಕರು ತಮ್ಮ ದಿನದ ಹೆಚ್ಚಿನ ಸಮಯವನ್ನು ಧಾರವಾಹಿಗಳ ವೀಕ್ಷಣೆಯಲ್ಲಿ ಕಳೆಯುತ್ತಿದ್ದರು. ಆದ್ರೀಗ ಮಹಾಮಾರಿ ಸೀರಿಯಲ್ ಪ್ರಿಯರಿಗೂ ಮತ್ತೆ ಶಾಕ್ ನೀಡಿದೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಅಲಿಯಾಸ್ ಚಿನ್ನು ಆಗಿ ಅಭಿನಯಿಸುತ್ತಿದ್ದ ರಶ್ಮಿ ಪ್ರಭಾಕರ್ ಅಭಿನಯದ ಧಾರಾವಾಹಿಯ ಚಿತ್ರೀಕರಣ ರದ್ದಾಗಿದೆ. ಕೊರೊನಾ ವೈರಸ್ ಅಲ್ಲಿಗೂ ಕಾಲಿಟ್ಟಿದ್ದು, ಈ ಕಾರಣದಿಂದಾಗಿ ಧಾರಾವಾಹಿ ಶೂಟಿಂಗ್ ಕ್ಯಾನ್ಸಲ್ ಆಗಿದೆ.
ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿ ಪ್ರಭಾಕರ್ ಲಾಕ್ಡೌನ್ ನಂತರ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದರು. ಅಷ್ಟರಲ್ಲಿ ತೆಲುಗಿನ ಕಿರುತೆರೆ ಕಲಾವಿದರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ವಿಚಾರ ತಿಳಿದು ಬಂದಿದೆ. ಇದರಿಂದಾಗಿ ಧಾರಾವಾಹಿಗಳ ಶೂಟಿಂಗ್ ನಿಲ್ಲಿಸುವಂತೆ ಅಲ್ಲಿನ ಟಿವಿ ಅಸೋಸಿಯೇಷನ್ ಸೂಚನೆ ನೀಡಿದೆ. ಅದೇ ಕಾರಣಕ್ಕಾಗಿ ರಶ್ಮಿ ಪ್ರಭಾಕರ್ ಅಭಿನಯದ ಪೌರ್ಣಮಿ ಧಾರಾವಾಹಿಯ ಶೂಟಿಂಗ್ ಕೂಡಾ ನಿಂತು ಹೋಗಿದೆ.