ETV Bharat / sitara

ಕವಿತಾ ಗೌಡ ಅವರನ್ನು ಕ್ಯೂಟ್ ಎಂದು ಕರೆದ ಚಂದನ್...ಏಕೆ ಗೊತ್ತಾ..? - Lakshmi baramma fame Chandan

ಕಿರುತೆರೆ ನಟರಾದ ಚಂದನ್ ಹಾಗೂ ಕವಿತಾ ಗೌಡ ಇಬ್ಬರೂ ಆತ್ಮೀಯ ಸ್ನೇಹಿತರು. ಇತ್ತೀಚೆಗೆ ಇವರು ಇತರ ಸ್ನೇಹಿತರೊಂದಿಗೆ ಶಿವಗಂಗೆ ಬೆಟ್ಟಕ್ಕೆ ತೆರಳಿ ಎಂಜಾಯ್ ಮಾಡಿದ್ದರು. ಈಗ ಕವಿತಾ ಗೌಡ ತನ್ನ ಸ್ನೇಹಿತ ಚಂದನ್​​​ಗಾಗಿ ಡ್ರೈವರ್ ಆಗಿ ಬದಲಾಗಿದ್ದಾರೆ.

kavita became Chandan car Driver
ಚಂದನ್​​, ಕವಿತಾ ಗೌಡ
author img

By

Published : Aug 20, 2020, 5:29 PM IST

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಂದನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಪ್ರತಿದಿನವೂ ಒಂದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೇರ್ ಮಾಡುತ್ತಿದ್ದು ಕಿರುತೆರೆ ಪ್ರಿಯರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

ಈ ಬಾರಿ ತಮ್ಮ ಡ್ರೈವರ್ ಜೊತೆಗಿನ ಫೋಟೋವೊಂದನ್ನು ಚಂದನ್ ಷೇರ್ ಮಾಡಿದ್ದಾರೆ. ಮಾತ್ರವಲ್ಲ ತಮ್ಮ ಕ್ಯೂಟ್ ಡ್ರೈವರ್ ನನ್ನನ್ನು ಏರ್​​​​ಪೋರ್ಟ್​ಗೆ ಡ್ರಾಪ್ ಮಾಡಿದ್ದಾರೆ ಎಂದು ಚಂದನ್ ಬರೆದುಕೊಂಡಿದ್ದಾರೆ. ಆ ಕ್ಯೂಟ್ ಡ್ರೈವರ್ ಬೇರಾರೂ ಅಲ್ಲ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಜೊತೆ ನಟಿಸಿದ್ದ ಕವಿತಾ ಗೌಡ. ಚಂದನ್ ಹಾಗೂ ಕವಿತಾ ಇಬ್ಬರೂ ಆತ್ಮೀಯ ಸ್ನೇಹಿತರು. ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಬರೆದದ್ದು ಲಕ್ಷ್ಮಿ ಬಾರಮ್ಮ ಧಾರಾವಾಹಿ. ಈಗ ತಮ್ಮ ಗೆಳೆಯನಿಗಾಗಿ ಕವಿತಾ ಗೌಡ ಡ್ರೈವರ್ ಆಗಿ ಬದಲಾಗಿದ್ದಾರೆ.

ಚಂದನ್ ಸದ್ಯಕ್ಕೆ ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್​​​​​ಗಾಗಿ ಚಂದನ್ ಆಗಾಗ್ಗೆ ಬೆಂಗಳೂರಿನಿಂದ ಹೈದಾರಾಬಾದ್​​​​ಗೆ ಹೋಗುತ್ತಿರುತ್ತಾರೆ. ಅಂತೆಯೇ ಈ ಬಾರಿ ಶೂಟಿಂಗ್ ತೆರಳುವಾಗ ಕವಿತಾ ಗೌಡ ಚಂದನ್ ಅವರನ್ನು ಏರ್​​​​ಪೋರ್ಟ್​ಗೆ ಡ್ರಾಪ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ತಮ್ಮ ನೆಚ್ಚಿನ ಗೆಳತಿ ಕವಿತಾಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದ ಚಂದನ್ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲ ಕವಿತಾ ಗೌಡ ಅವರ ಹುಟ್ಟುಹಬ್ಬದಂದು 12 ಗಂಟೆಗೆ ಅವರ ಮನೆಗೆ ಕೇಕ್ ಕೊಂಡೊಯ್ದು ಸರ್​​​​​ಪ್ರೈಸ್​ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.