ETV Bharat / sitara

ಬಾಹುಬಲಿ ರೆಕಾರ್ಡ್ಸ್​​ ಚಿಂದಿ ಮಾಡಿದ ಅವೆಂಜರ್ಸ್​​​​​...ಬಾಲಿವುಡ್​ಗೆ ಸಾಧ್ಯವಾಗದ ಸಾಧನೆ ಮಾಡಿದ ಹಾಲಿವುಡ್​

ಪ್ರಭಾಸ್​ ನಟನೆಯ ಬಾಹುಬಲಿ ಚಿತ್ರ ಒಂದು ವಾರಕ್ಕೆ 247 ಕೋಟಿ ಗಳಿಸಿಕೊಂಡಿತ್ತು. ಇದಾದ ನಂತರ ತೆರೆಕಂಡ ಬಾಲಿವುಡ್​​ನ ಸುಲ್ತಾನ್​ ( 229 ಕೋಟಿ), ಟೈಗರ್​ ಜಿಂದಾ ಹೈ (206) ಹಾಗೂ ಸಂಜು ಚಿತ್ರ 202 ಕೋಟಿ ಬಾಚಿಕೊಂಡಿದ್ದರೂ ಕೂಡಾ, ಬಾಹುಬಲಿ ದಾಖಲೆ ಟಚ್ ಮಾಡಲು ಸಾಧ್ಯವಾಗಿರಲಿಲ್ಲ.

author img

By

Published : May 3, 2019, 4:55 PM IST

ಹಾಲಿವುಡ್​

ಹಾಲಿವುಡ್​​ನ 'ಅವೆಂಜರ್ಸ್​​ : ಎಂಡ್​ ಗೇಮ್​' ಭಾರತದಲ್ಲಿ ದಾಖಲೆಗಳ ಸರಮಾಲೆಗೆ ಕೊರಳೊಡ್ಡುತ್ತಿದೆ. ಬಾಕ್ಸ್​ ಆಫೀಸ್​​ನಲ್ಲಿ ನಿರೀಕ್ಷೆಗೂ ಮೀರಿ ಹಣ ಬಾಚಿಕೊಂಡು ಗೆಲುವಿನ ನಗೆ ಬಿರುತ್ತಿದೆ.

ಕಳೆದ ವಾರವಷ್ಟೆ ತೆರೆ ಕಂಡಿರುವ ಈ ಚಿತ್ರ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್​ ದಾಟಿತ್ತು. ಇದೀಗ ಯಶಸ್ವಿಯಾಗಿ ಒಂದು ವಾರ ಪೂರೈಸಿ, ಕಲೆಕ್ಷನ್​​ನಲ್ಲಿ ಬಾಹುಬಲಿ ಹಿಂದಿ ಆವತರಣಿಕೆ ಕ್ರಿಯೇಟ್ ಮಾಡಿದ್ದ ರೆಕಾರ್ಡ್​​​ ಪುಡಿ ಪುಡಿ ಮಾಡಿದೆ. ಪ್ರಭಾಸ್​ ನಟನೆಯ ಬಾಹುಬಲಿ ಚಿತ್ರ ಒಂದು ವಾರಕ್ಕೆ 247 ಕೋಟಿ ಗಳಿಸಿಕೊಂಡಿತ್ತು. ಇದಾದ ನಂತರ ತೆರೆಕಂಡ ಬಾಲಿವುಡ್​​ನ ಸುಲ್ತಾನ್​ ( 229 ಕೋಟಿ), ಟೈಗರ್​ ಜಿಂದಾ ಹೈ (206) ಹಾಗೂ ಸಂಜು ಚಿತ್ರ 202 ಕೋಟಿ ಬಾಚಿಕೊಂಡಿದ್ದರೂ ಕೂಡ, ಬಾಹುಬಲಿ ದಾಖಲೆ ಟಚ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಅವೆಂಜರ್ಸ್​​ ಬರೋಬ್ಬರಿ ಗಲ್ಲಾ ಪೆಟ್ಟಿಗೆಯಲ್ಲಿ 260 ಕೋಟಿ ದೋಚಿ ಮೊದಲ ಸ್ಥಾನದಲ್ಲಿ ನಿಂತುಕೊಂಡಿದೆ.

ಇನ್ನು ಭಾರತದಲ್ಲಿ ಹಾಲಿವುಡ್ ಚಿತ್ರವೊಂದು ಈ ಪರಿ ಕಲೆಕ್ಷನ್ ಮಾಡಿದ್ದು ಇದೇ ಫಸ್ಟ್​​. ಇಡೀ ವಿಶ್ವಾದ್ಯಂತ ಇದುವರೆಗೆ 8 ಸಾವಿರ ಕೋಟಿ ಹಣ ಗಳಿಕೆ ಮಾಡಿರುವ ಅವೆಂಜರ್​, ಗೆಲುವಿನ ನಾಗಾಲೋಟ 120ರ ಸ್ಪೀಡ್​ನಲ್ಲಿ ಮುಂದುವರೆದಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.