ETV Bharat / sitara

ರಾಮಚಂದ್ರ-ಜಾನು ನೆನಪುಗಳ ಮಾತು ಮಧುರ... ಮೌನ ಭಾರ

author img

By

Published : May 2, 2019, 7:55 AM IST

'99' ಸಿನಿಮಾ

ಕೊನೆಗೂ ಗೋಲ್ಡನ್ ಸ್ಟಾರ್ ಅಭಿನಯದ '99' ಸಿನಿಮಾ ನಿನ್ನೆ ಕಾರ್ಮಿಕ ದಿನಾಚರಣೆಯಂದು ಬಿಡುಗಡೆಯಾಗಿದೆ. ಇದು ತಮಿಳಿನ '96' ಸಿನಿಮಾದ ರೀಮೇಕ್​​​. ಪ್ರೀತಮ್ ಗುಬ್ಬಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಇದು ಮನಸ್ಸಿಗೆ ಮುಟ್ಟುವ ಸಿನಿಮಾ ಆದರೂ ಚಿತ್ರದ ಮೊದಲಾರ್ಧ ಪ್ರೇಕ್ಷಕ ಸಹಕರಿಸಬೇಕು. ದಾಡಿ ಬಿಟ್ಟಿರುವ ರಾಮಚಂದ್ರನಿಗೆ (ಗಣೇಶ್​​​) ಹೆಚ್ಚು ಮಾತಿಲ್ಲ. ಮಾತಿನ ಮಲ್ಲ ಗಣೇಶ್ ಸಿಕ್ಕುವುದು ಎರಡನೇ ಭಾಗದಲ್ಲೂ ಕಡಿಮೆಯೇ. ಗಣೇಶ್ ಒಂದು ರೀತಿಯಲ್ಲಿ ತ್ಯಾಗರಾಜ. ತನ್ನ ಪ್ರೀತಿಯನ್ನು ಬಚ್ಚಿಟ್ಟುಕೊಂಡು ಹಾಗೆ ಇದ್ದು ಬಿಡುತ್ತಾನೆ. 20 ವರ್ಷದ ನಂತರ ರಾಮಚಂದ್ರ ಹಾಗೂ ಜಾನು (ಭಾವನ) ಇಬ್ಬರೂ ಒಂದು ರಾತ್ರಿಯಲ್ಲಿ ತಮ್ಮ ಜೀವನದ ಪಯಣವನ್ನು ಒಬ್ಬರಿಗೊಬ್ಬರು ಒಪ್ಪಿಸಿಕೊಳ್ಳುತ್ತಾರೆ. ‘99’ ಚಿತ್ರದ ಜೀವಾಳವೇ ರಾಮಚಂದ್ರ ಹಾಗೂ ಜಾನು ಅವರ ಮಾತು ಕಥೆ.

ಶಾಲಾ ದಿನಗಳಲ್ಲಿ ರಾಮಚಂದ್ರ ಅಚಾನಕ್ ಆಗಿ ಕಾಣೆಯಾದಾಗ ಹೆಚ್ಚು ವ್ಯಥೆ ಆಗುವುದು ಜಾನುಗೆ. ವಿಧಿಯಿಲ್ಲದೆ ಜಾನು ಕಾಲೇಜು ಓದಿಗಾಗಿ ಬೇರೆ ಕಡೆ ಹೊರಟಾಗ ರಾಮಚಂದ್ರ ಸುಮ್ಮನೆ ಇದ್ದುಬಿಡಲ್ಲ. ಅವಳ ಪ್ರತಿಯೊಂದು ಹೆಜ್ಜೆಯನ್ನು ಗಮನಿಸಿರುತ್ತಾನೆ. ಆದರೆ ಒಂದು ಕನ್ಫ್ಯೂಶನ್​​​​​​ ಇಬ್ಬರನ್ನೂ ದೂರ ಮಾಡಿಬಿಡುತ್ತದೆ. ಇಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಮನಸ್ಸಿನಲ್ಲಿಟ್ಟುಕೊಂಡು ವೇದನೆ ಪಡುತ್ತಾರೆ. ಮುಂದಿನ ಕಥೆಯನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಗಣೇಶ್ ಅವರಿಗೆ ಇನ್ನೂ ಹೆಚ್ಚು ಮಾತು ಇರಬೇಕಿತ್ತು. ಮೊದಲಿನಿಂದಲೂ ಗಣೇಶ್ ತೆರೆ ಮೇಲೆ ಪಟ ಪಟ ಮಾತುಗಾರ. ಆದರೆ ಈ ಸಿನಿಮಾದಲ್ಲಿ ಅವರ ಮೌನ ಸ್ವಲ್ಪ ನೀರಸ ಎನಿಸುತ್ತದೆ. ಇನ್ನು ಗಣೇಶ್​​​​ಗೆ ದಾಡಿ ಹೊಂದಾಣಿಕೆ ಆಗದೆ ಜಾನು ಪಾತ್ರಧಾರಿ ಭಾವನ ಆತನನ್ನು ಸೆಲೂನ್​​ಗೆ ಕರೆದುಕೊಂಡು ಹೋಗಿ ಗಡ್ಡ ತೆಗೆಸಿದಾಗ ನಮಗೆ ನಿಜವಾದ ಗಣೇಶ್ ಕಾಣಸಿಗುತ್ತಾರೆ. ನಾಯಕಿ ಭಾವನ ಮೆನನ್ ತಮ್ಮ ಪಾತ್ರವನ್ನು ಅನುಭವಿಸಿ ಅಭಿನಯಿಸಿದ್ದಾರೆ. ಅವರ ಸುಂದರ ಕಣ್ಣುಗಳು ಅವರಷ್ಟೇ ಬಹಳ ಆಕರ್ಷಕ. ಚಿತ್ರದಲ್ಲಿ ಭಾವನ ಹೊರತುಪಡಿಸಿ ಬೇರೆ ಯಾವ ನಟಿಯೂ ಈ ಪಾತ್ರಕ್ಕೆ ನ್ಯಾಯ ಒದಗಿಸುತ್ತಿರಲಿಲ್ಲವೇನೋ ಎನಿಸುತ್ತದೆ.

ಚಿಕ್ಕ ವಯಸ್ಸಿನ ರಾಮಚಂದ್ರ-ಜಾನು ಪಾತ್ರ ಮಾಡಿರುವ ಹೇಮಂತ್ ಹಾಗೂ ಸಮೀಕ್ಷ ನಟನೆ ಕೂಡಾ ಮೆಚ್ಚುವಂತದ್ದಾಗಿದೆ​​​​​​​​​​​. ರವಿಶಂಕರ್ ಗೌಡ, ಜ್ಯೋತಿ ರಾಯ್ ಆ್ಯಕ್ಟಿಂಗ್ ಕೂಡಾ ಓಕೆ. ಇಲ್ಲಿ ಡ್ಯೂಯಟ್ ಇಲ್ಲ, ಎಲ್ಲಾ ಹಿನ್ನೆಲೆಯಲ್ಲೇ ಬಂದು ಹೋಗುತ್ತದೆ. ಅರ್ಜುನ ಜನ್ಯ ಅವರ ಸಂಗೀತ ನಿರ್ದೇಶನದ 100ನೇ ಸಿನಿಮಾ ಇದು. 'ಹೇಳಿ ಹೋಗು ಕಾರಣ' ಹಾಡು ಬಹಳವಾಗಿ ಕಾಡುತ್ತದೆ. 'ಗಮನ ಸೆಳೆದ ಮೊದಲ ಹುಡುಗ... ಅಂಗಳದಲ್ಲಿ ಹೂ ಅರಳಲು ನೀ ಜ್ಞಾಪಕ' ಸಾಲುಗಳು ಬಹಳ ಸುಂದರ. ಸಂತೋಷ್ ರಾಯ್ ಪತಾಜೆ ಅವರ ಛಾಯಾಗ್ರಹಣ ಚೆನ್ನಾಗಿದೆ.

ಒಟ್ಟಿನಲ್ಲಿ ಪರಸ್ಪರ ಪ್ರೀತಿಸುತ್ತಿರುವ ಪ್ರೇಮಿಗಳಿಗೆ, ಭಗ್ನ ಪ್ರೇಮಿಗಳಿಗೆ ಈ ಸಿನಿಮಾ ಇಷ್ಟವಾಗುವುದು ಗ್ಯಾರಂಟಿ.

ಕನ್ನಡ ಚಿತ್ರ – 99 ವಿಮರ್ಶೆ

ನೆನಪುಗಳ ಮಾತು ಮಧುರ ಮೌನ ಭಾರ!

ಚಿತ್ರ – 99, ನಿರ್ಮಾಪಕ – ರಾಮು, ನಿರ್ದೇಶಕ – ಪ್ರೀತಂ ಗುಬ್ಬಿ, ಸಂಗೀತ – ಅರ್ಜುನ್ ಜನ್ಯ, ಛಾಯಾಗ್ರಾಹಕ – ಸಂತೋಷ್ ರಾಯ್ ಪತಾಜೆ, ತಾರಾಗಣ – ಗಣೇಶ್, ಭಾವನ ಮೆನನ್, ಜ್ಯೋತಿ ರಾಯ್, ರವಿಶಂಕರ್ ಗೌಡ, ಸತೀಶ್, ಹೇಮಂತ್, ಸಾಕ್ಷಿ ಹಾಗೂ ಇತರರು.

ಆವದಿ – 144 ನಿಮಿಷ (ಎರಡು ಘಂಟೆ 24 ನಿಮಿಷ), ಕಟೆಗರಿ – ಲವ್ ಸ್ಟೋರಿ, ರೇಟಿಂಗ್ – 3/5

ಕಾರ್ಮಿಕರ ದಿನಾಚರಣೆ ಮೇ 1 ರಂದೇ ಬಿಡುಗಡೆ ಆಗಿರುವ ‘99’ ಕನ್ನಡ ಸಿನಿಮಾ ಮಕ್ಕಿ ಕ ಮಕ್ಕಿ, ಫ್ರೇಮ್ ಟು ಫ್ರೇಮ್ ತಮಿಳು ಸಿನಿಮಾ 96 ಚಿತ್ರದ ಅವತರಿಣಿಕೆ. ಇಲ್ಲಿ ಹೆಸರಿನಿಂದ ಹಿಡಿದು ಎಲ್ಲವೂ ನಕಲು. ಪ್ರತಿ ದೃಷ್ಯವೂ ಹಾಗೆ ಕನ್ನಡದಲ್ಲಿ ತೆರೆಯ ಮೇಲೆ ತರಲಾಗಿದೆ. ಆದರೆ ಭಾವನೆಗಳಿಗೆ ಇಲ್ಲಿ ಹೆಚ್ಚು ಅಂಕ. ಉತ್ಕೃಷ್ಟ ಪ್ರೀತಿ ಅನ್ಯಾಯವಾಗಿ ಜೊತೆ ಸೇರಲಿಲ್ಲವಲ್ಲ ಎಂದು ಪ್ರೇಕ್ಷಕ ಅನ್ನುಕೊಳ್ಳುವಷ್ಟು ಮನಸಿಗೆ ತಟ್ಟುವ ಸಿನಿಮಾ. ಅಯ್ಯೋ ಇವರಿಬ್ಬರು ಒಂದಾರೆ ಚಂದಾ ಎಂದು ದ್ವಿತೀಯಾರ್ದದಲ್ಲಿ ಅಂದುಕೊಳ್ಳುವಷ್ಟು 20 ವರ್ಷದ ನಂತರ ಬೇಟಿ ಆದ ರಾಮಚಂದ್ರ ಹಾಗೂ ಜಾನು ಪಾತ್ರ ಪೋಷಣೆ ಆಗಿದೆ. ಆದರೆ ಅತಿ ಉತ್ತುಂಗದಲ್ಲಿ ಇರುವುದು ನೆನಪು. ರಾಮಚಂದ್ರ ನಿಜವಾದ ಅರ್ಥದಲ್ಲಿ ಶ್ರೀ ರಾಮಚಂದ್ರನ ಹಾಗೆ. ಜಾನು ಸಹ ಇಂದಿನ ಜಗತ್ತಿನ ಹುಡುಗಿ ಆಗಿ ಸಿಂಗಪೋರ್ ಅಲ್ಲಿ ನೆಲೆಸಿದ್ದರು ಎಲ್ಲು ತನ್ನ ಮನಸಿನ ಹತೋಟಿ ತಪ್ಪುವುದಿಲ್ಲ.

ಚಿತ್ರದ ಮೊದಲಾರ್ಧ ಪ್ರೇಕ್ಷಕ ಸಹಕರಿಸಬೇಕು. ದಾಡಿ ಬಿಟ್ಟಿರುವ ರಾಮಚಂದ್ರ ಹೆಚ್ಚು ಮಾತಿಲ್ಲ. ಮಾತಿನ ಮಲ್ಲ ಗಣೇಶ್ ಸಿಕ್ಕುವುದು ಎರಡನೇ ಬಾಗದಲ್ಲೂ ಕಡಿಮೆಯೇ. ಗಣೇಶ್ ಒಂದು ರೀತಿಯಲ್ಲಿ ತ್ಯಾಗರಾಜ! ತನ್ನ ಪ್ರೀತಿಯನ್ನು ಬಚ್ಚಿಟ್ಟುಕೊಂಡು ಹಾಗೆ ಇದ್ದು ಬಿಡುತ್ತಾನೆ. 20 ವರ್ಷದ ನಂತರ ಇಬ್ಬರು ಒಂದು ರಾತ್ರಿಯಲ್ಲಿ ತಮ್ಮ ಜೀವನದ ಪಯಣವನ್ನು ಒಬ್ಬರಿಗೊಬ್ಬರು ಒಪ್ಪಿಸಿಕೊಳ್ಳುತ್ತಾರೆ.

‘99’ ಚಿತ್ರದ ಜೀವಾಳವೆ ರಾಮಚಂದ್ರ ಹಾಗೂ ಜಾನು ಅವರ ಮಾತು ಕಥೆ. ಶಾಲಾ ದಿನಗಳಲ್ಲಿ ರಾಮಚಂದ್ರ ಅಚಾನಕ್ ಆಗಿ ಕಾಣೆಯಾದಾಗ ಹೆಚ್ಚು ವ್ಯಥೆ ಆಗುವುದು ಜಾನುಗೆ. ವಿದಿಯಿಲ್ಲದೆ ಜಾನು ಕಾಲೇಜಿಗೆ ಬೇರೆ ಕಡೆ ಹೊರಟಾಗ ರಾಮಚಂದ್ರ ಸುಮ್ಮನೆ ಇದ್ದುಬಿಡಲ್ಲ. ಅವಳ ಪ್ರತಿಯೊಂದು ಹೆಜ್ಜೆಯನ್ನು ಗಮನಿಸಿರುತ್ತಾನೆ. ಆದರೆ ಒಂದು ಕಂಫ್ಯೂಶನ್ ಇಬ್ಬರನ್ನು ದೂರ ಮಾಡಿಬಿಡುತ್ತದೆ. ಜಾನು ಆನಂತರ ಮದುವೆ ಆದಾಗಲು ರಾಮಚಂದ್ರ ಮದುವೆ ಮಂಟಪ್ಪಕ್ಕೆ ಬಂದಿರುತ್ತಾನೆ. ಆದರೆ ಇಬ್ಬರಿಗೆ 20 ವರ್ಷದ ಬಳಿಕ ಕೈ ಮೀರಿದ ಪರಿಸ್ಥಿತಿ. ಇಬ್ಬರು ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಟ್ಟುಕೊಂಡು ವೇದನೆ ಅನುಭವಿಸಿ ಸಾಗುವುದು.

ಇಂದಿನ ವ್ಹಾಟ್ಸ್ ಅಪ್ಪ್ ಬಳಕೆ ಇಲ್ಲಿ 20 ವರ್ಷದ ಸ್ಕೂಲ್ ಗೆಳೆಯರನ್ನು ಒಂದು ಮಾಡುತ್ತದೆ. ಅಲ್ಲಿ ಜಾನು ಹಾಗೂ ರಾಮಚಂದ್ರ ಬೇಟಿ ಹಾಗೂ ಮಧುರ ನೆನಪುಗಳು, ಕಠಿಣ ಸಂದರ್ಭಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ರಾಮಚಂದ್ರ ಹಾಗೂ ಜಾನು ಕಾರಿನಲ್ಲಿ ಪ್ರಯಾಣ ಮಾಡಿ ಬೆಳಗಿನ ಜಾವ ಜಾನು ಸಿಂಗಪೋರ್ ಹೋಗುವ ವರೆಗೂ ಇವರ 20 ವರ್ಷದ ನೆನಪುಗಳ ಸರಮಾಲೆ, ಆದ ತಪ್ಪುಗಳ ಜೊತೆಗೆ ಬಹಿರಂಗ ಆಗುತ್ತದೆ.

‘99’ ಅಂದು ಹಾಗೂ ಇಂದು ಬಹಳಷ್ಟು ಸಾರಿ ಟ್ರಾವೆಲ್ ಮಾಡಿ ಪ್ರೇಕ್ಷಕರ ಮನಸಿನಲ್ಲಿ ಇದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಆದರೆ ಜಾನು ಹೊರಡುವ ವೇಳೆ ಸಂಚಾರಿ ಛಾಯಾಗ್ರಾಹಕ ರಾಮಚಂದ್ರ ಅವರ ವಿಧ್ಯಾರ್ಥಿಗಳಿಗೆ ಒಂದು ಕಟ್ಟು ಕಥೆ ಹೇಳಿ, ತಾನೇ ರಾಮಚಂದ್ರನ ಮಡದಿ ಅಂತ ಸಹ ಹೇಳಿಬಿಡುತ್ತಾಳೆ. ಆಮೇಲೆ ಜಾನು ಸಿಂಗಪುರಕ್ಕೆ ಹಾರಿದ್ದಾಯಿತು. ಮುಂದಿನ ದಿನಗಳಲ್ಲಿ ರಾಮಚಂದ್ರನ ಇಮೇಜ್ ಹ್ಯಾಗೆ ಎಂಬುದು ಒಂದು ಪ್ರಶ್ನೆ ಆಗಿ ಉಳಿಯುತ್ತದೆ. ಒಂದು ಹಂತಕ್ಕೆ ರಾಮಚಂದ್ರ ಹಾಗೂ ಜಾನು ಮೇಡ್ ಫಾರ್ ಈಚ್ ಅದರ್ ಅನ್ನುವ ರೀತಿಯಲ್ಲಿ ಮಾತುಕತೆಯಿಂದ ಅಭಿಪ್ರಾಯ ದಕ್ಕುತ್ತದೆ.

ಗಣೇಶ್ ಅವರಿಗೆ ಇನ್ನ ಹೆಚ್ಚು ಮಾತು ಇರಬೇಕಿತ್ತು. ಅವರು ಅಂದಿನಿಂದಲೂ ಮಾತುಗಾರ ತೆರೆಯಮೇಲೆ. ಅವರ ದಾಡಿ ಸರಿಯಾಗಿ ಮ್ಯಾಚ್ ಆಗುವುದಿಲ್ಲ. ನಾಯಕಿ ಭಾವನ ಮೆನನ್ ಜಾನು ಪಾತ್ರದಾರಿ ಅವನನ್ನು ಮಧ್ಯರಾತ್ರಿ ಸೆಲೂನ್ ಕರೆದುಕೊಂಡು ಚಂದವಾಗಿ ಕಾಣುವಂತೆ ಮಾಡುವುದು ನಮಗೆ ಸುರಸುಂದರಾಂಗ ಕಾಣಸಿಗುತ್ತಾನೆ.

ನಾಯಕಿ ಭಾವನ ಮೆನನ್ ಅವರು ಪಾತ್ರವನ್ನು ಅನುಭವಿಸಿ ಅಭಿನಯಿಸಿದ್ದಾರೆ. ಅವರ ಚಂದವಾದ ಬಟ್ಟಲು ಕಣ್ಣುಗಳು ಅವರಷ್ಟೇ ಬಹಳ ಆಕರ್ಷಕ. 99 ಪೆರ್ಸೆಂಟ್ ಭಾವನ ಮೆನನ್ ಆಯ್ಕೆ ಸರಿಯಾಗಿದೆ.

ಚಿಕ್ಕ ವಯಸಿನಲ್ಲಿ ಬರುವ ಜಾನು ಹಾಗೂ ರಾಮಚಂದ್ರ ಪಾತ್ರದಾರಿಗಳು – ಹೇಮಂತ್ ಹಾಗೂ ಸಮೀಕ್ಷ ಬೇಷ್ ಆಗಿ ಅಭಿನಯಿಸಿದ್ದಾರೆ. ರವಿಶಂಕರ್ ಗೌಡ, ಜ್ಯೋತಿ ರಾಯ್ ಅವರ ಅಭಿನಯ ಅಚ್ಚುಕಟ್ಟು.

ಇಲ್ಲಿ ಡ್ಯೂಯಟ್ ಹಾಡಿಲ್ಲ, ಎಲ್ಲ ಹಿನ್ನಲೆಯಲ್ಲೇ ಬಂದು ಹೋಗುವುದು. ಅರ್ಜುನ ಜನ್ಯ ಅವರ 100 ನೇ ಸಿನಿಮಾ. ಹೇಳಿ ಹೋಗು ಕಾರಣ....ಬಹಳವಾಗಿ ಕಾಡುತ್ತದೆ. ಗಮನ ಸೆಳೆದ ಮೊದಲ ಹುಡುಗ...ಅಂಗಳದಲ್ಲಿ ಹೂ ಅರಳಲು ನೀ ಜ್ಞಾಪಕ....ಸಾಲುಗಳು ಮೆಚ್ಚತಕ್ಕದವು. ಸಂತೋಷ್ ರಾಯ್ ಪತಾಜೆ ಅವರ ಛಾಯಾಗ್ರಹಣ ಬ್ಯೂಟಿಫುಲ್ ಆಗಿ ಕಂಗೊಳಿಸುತ್ತದೆ.

ಇಂದಿನ ಪ್ರೇಮಿಗಳಿಗೆ, ಆಗಿನ ಪ್ರೇಮಿಗಳಿಗೆ, ಭಗ್ನ ಪ್ರೇಮಿಗಳಿಗೆ – ಈ ಕನ್ನಡ ಸಿನಿಮಾ 99 ಬಹಳ ಇಷ್ಟ ಆಗಲಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.