ETV Bharat / sitara

ಬೆಳ್ಳಿ ತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದ 'ಮಂಗಳ ಗೌರಿ ಮದುವೆ' ಇನ್ಸ್​​ಪೆಕ್ಟರ್​ ರಾಜೀವ್

author img

By

Published : Nov 14, 2019, 6:15 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಇನ್ಸ್​​​ಪೆಕ್ಟರ್​​​ ರಾಜೀವ್ ಪಾತ್ರದಲ್ಲಿ ನಟಿಸುತ್ತಿರುವ ಗಗನ್​ ಇದೀಗ ಬೆಳ್ಳಿ ತೆರೆಯಲ್ಲಿ ಕೂಡಾ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗಗನ್

ಕಿರುತೆರೆ ಮೂಲಕ ನಟನೆ ಆರಂಭಿಸಿದ ಎಷ್ಟೋ ನಟರು ಕೆಲವು ದಿನಗಳ ನಂತರ ಬೆಳ್ಳಿ ತೆರೆಯಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿರುವ ಅನೇಕರು ಇಂದು ಮಹಾಪರದೆ ಮೇಲೆ ತಮ್ಮ ಛಾಪು ಮೂಡಿಸಿದ ಎಷ್ಟೋ ಉದಾಹರಣೆಗಳಿವೆ.

Gagan chinnappa acting in movies, ಗಗನ್ ಚಿನ್ನಪ್ಪ ಸಿನಿಮಾ ಜರ್ನಿ ಆರಂಭ
'ಮಂಗಳ ಗೌರಿ ಮದುವೆ' ಇನ್ಸ್​​ಪೆಕ್ಟರ್ ರಾಜೀವ್

ಇದೀಗ ಗಗನ್ ಚಿನ್ನಪ್ಪ ಸರದಿ. ಗಗನ್ ಚಿನ್ನಪ್ಪ ಎಂದರೆ ಬಹುಬೇಗನೆ ಯಾರು ಎಂದು ತಿಳಿಯುವುದಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಇನ್ಸ್​​​ಪೆಕ್ಟರ್​​​ ರಾಜೀವ್ ಪಾತ್ರದಲ್ಲಿ ನಟಿಸುತ್ತಿರುವ ಗಗನ್​ ಇದೀಗ ಬೆಳ್ಳಿ ತೆರೆಯಲ್ಲಿ ಕೂಡಾ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಂಜಿನ ನಗರಿ ಮಡಿಕೇರಿಯ ಹುಡುಗ ಗಗನ್ ಚಿನ್ನಪ್ಪ, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಇನ್ಸ್​​​​​​​​​​​ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ 'ಮಂಗಳ ಗೌರಿ ಮದುವೆ'ಯಲ್ಲೂ ಇವರ ಪಾತ್ರ ಮುಂದುವರೆದಿದ್ದು, ಈ ಧಾರಾವಾಹಿಯಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಸದ್ಯ ನಂಬರ್​​​ 1 ಸ್ಥಾನದಲ್ಲಿದೆ‌.

Gagan chinnappa movie journey updates, ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಗಗನ್ ಚಿನ್ನಪ್ಪ
ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಗಗನ್ ಚಿನ್ನಪ್ಪ

ಕಿರುತೆರೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಿರುವ ಗಗನ್, ಇದೀಗ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. 'ಮದ್ವೆ' ಚಿತ್ರವನ್ನು ನಿರ್ದೇಶಿಸಿದ್ದ ಹಿಂದು ಕೃಷ್ಣ, ಅಲೆಗ್ಸಾಂಡರ್ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗಗನ್ ನಾಯಕನಾಗಿ ಅಭಿನಯಿಸಿದ್ದಾರೆ. ಈಗ ಈ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಫಸ್ಟ್ ​​ಲುಕ್ ಬಿಡುಗಡೆಯಾಗಲಿದೆ.

Intro:Body:ಕಿರುತೆರೆಯ ಮೂಲಕ ನಟನಾ ಪಯಣ ಆರಂಭಿಸಿದ ಅನೇಕರು ಮುಂದೆ ಬೆಳ್ಳಿತೆರೆಗೆ ಕಾಲಿಡುತ್ತಿರುವುದು ಸರ್ವೇ ಸಾಮಾನ್ಯದ ಸಂಗತಿ. ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿರುವ ಅನೇಕರು ಇಂದು ಮಹಾಪರದೆಯ ಮೇಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.

ಇದೀಗ ಗಗನ್ ಚಿನ್ನಪ್ಪ ಅವರ ಸರದಿ! ಗಗನ್ ಚಿನ್ನಪ್ಪ ಎಂದರೆ ಬಹುಬೇಗನೇ ಯಾರೆಂದು ತಿಳಿಯುವುದಿಲ್ಲ. ಬದಲಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಇನ್ಸ್ ಪೆಕ್ಟರ್ ರಾಜೀವ ಪಾತ್ರದಲ್ಲಿ ನಟಿಸಿರುವ ಗಗನ್ ಅವರು ಇದೀಗ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಮಂಜಿನ ನಗರಿ ಮಡಿಕೇರಿಯ ಹುಡುಗ ಗಗನ್ ಚಿನ್ನಪ್ಪ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಮಂಗಳ ಗೌರಿ ಮದುವೆಯಲ್ಲೂ ಇವರ ಪಾತ್ರ ಮುಂದುವರಿದಿದ್ದು ಇದರಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಸದ್ಯ ನಂ ೧ ಸ್ಥಾನದಲ್ಲಿದೆ‌.

ಕಿರುತೆರೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಿರುವ ಗಗನ್ ಅವರು ಇದೀಗ ಬೆಳ್ಳಿತೆರೆಯಲ್ಲಿ ಕಾಲಿಡಲು ಸಜ್ಜಾಗಲಿದ್ದಾರೆ. ಮದ್ವೆ ಚಿತ್ರವನ್ನು ನಿರ್ದೇಶಿಸಿದ್ದ ಹಿಂದು ಕೃಷ್ಣ ಅವರ ಮುಂದಿನ ಚಿತ್ರ ಅಲೆಗ್ಸಾಂಡರ್ ನಲ್ಲಿ ನಾಯಕನಾಗಿ ಗಗನ್ ಅವರು ಅಭಿನಯಿಸಲಿದ್ದಾರೆ. ಗಗನ್ ಅವರಿಗೆ ನಾಯಕಿಯಾಗಿ ಆರೋಹಿ ಗೌಡ ಅವರು ಕಾಣಿಸಿಕೊಂಡಿದ್ದು ಇದೀಗ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರದ ಫಸ್ಟ್ ಲುಕ್ ಲಾಂಚ್ ಆಗಲಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.