ETV Bharat / sitara

ಪ್ಲಾಸ್ಮಾ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ: ನಟಿ ರಾಧಿಕಾ ಮನವಿ - ರಾಧಾ ಕಲ್ಯಾಣ ಧಾರಾವಾಹಿ ನಟಿ ರಾಧಿಕಾ ರಾವ್

ಕೊರೊನಾ ಬಂದು ಯಾರೆಲ್ಲಾ ಗುಣಮುಖರಾಗಿದ್ದೀರೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ ಎಂದು ನಟಿ ರಾಧಿಕಾ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರಾಧಿಕಾ ರಾವ್
ರಾಧಿಕಾ ರಾವ್
author img

By

Published : May 5, 2021, 1:12 PM IST

'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ಆಗಿ ನಟಿಸಿದ್ದ ರಾಧಿಕಾ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಬಂದು ಸದ್ಯ ಅವರು ಚೇತರಿಕೆ ಕಂಡುಕೊಂಡಿದ್ದಾರೆ. ಇದರ ಜೊತೆಗೆ ಕೊರೊನಾ ಬಂದು ಯಾರೆಲ್ಲಾ ಗುಣಮುಖರಾಗಿದ್ದೀರೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ಪ್ಲಾಸ್ಮಾ ದಾನ ಮಾಡುವುದು ಎಷ್ಟು ಅನಿವಾರ್ಯ ಎಂದು ವಿವರಿಸಿದರು.

ನಟಿ ರಾಧಿಕಾ ರಾವ್ ಮನವಿ

"ಯಾರಿಗೆಲ್ಲಾ ಕೊರೊನಾ ಪಾಸಿಟಿವ್ ಬಂದು ಗುಣವಾಗಿ 28 ದಿನ ಕಳೆದಿದೆಯೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ. ನನಗೂ ಕೊರೊನಾ ಪಾಸಿಟಿವ್ ಬಂದಿತ್ತು. ನಾನು ಇದೀಗ ಕೊವಿಡ್ ನಿಂದ ರಿಕವರಿ ಆಗಿ ಕೇವಲ 22 ದಿನ ಆಗಿದೆಯಷ್ಟೇ. 28 ದಿನ ಕಳೆದ ಕೂಡಲೇ ಪ್ಲಾಸ್ಮಾ ದಾನ ಮಾಡುತ್ತೇನೆ. ನಮ್ಮ ಕೈಯಲ್ಲಿ ಏನೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತದೋ ಅದನ್ನೆಲ್ಲಾ ನಾವು ಮಾಡೋಣ. ಇದರಿಂದ ಜನರ ಪ್ರಾಣ ಉಳಿಯುತ್ತದೆ" ಎಂದು ಹೇಳಿದ್ದಾರೆ.

ರಾಧಿಕಾ ರಾವ್
ನಟಿ ರಾಧಿಕಾ ರಾವ್

ಇದರ ಜೊತೆಗೆ, "ಎಷ್ಟೋ ಜನರಿಗೆ ಮನಸ್ಸಿನಲ್ಲಿ ಹೆದರಿಕೆ ಇದೆ. ಪ್ಲಾಸ್ಮಾ ಕೊಟ್ಟರೆ ಮತ್ತೆ ಕೊರೊನಾ ಬರುತ್ತಾ, ಅಥವಾ ಬೇರೆ ಏನಾದರೂ ತೊಂದರೆಯಾಗುತ್ತಾ ಎಂಬ ಯೋಚನೆ ಹಲವರಿಗಿದೆ. ಏನೂ ಭಯ ಪಡಬೇಕಾಗಿಲ್ಲ. ನೀವು ಪ್ಲಾಸ್ಮಾ ದಾನ ಮಾಡಿದರೆ ಕೇವಲ ಒಂದು ದಿನದಲ್ಲಿ ಅದು ರಿಕವರಿ ಆಗುತ್ತೆ. ಜೊತೆಗೆ ಪ್ರತಿ 15 ದಿನಕ್ಕೊಮ್ಮೆ ನೀವು ಪ್ಲಾಸ್ಮಾ ದಾನ ಮಾಡಬಹುದು. ಇದರಿಂದ ಇನ್ನೊಬ್ಬರ ಬದುಕು ಉಳಿಸಬಹುದು" ಎಂದು ರಾಧಿಕಾ ರಾವ್ ಹೇಳಿದ್ದಾರೆ.

ಇದನ್ನೂ ಓದಿ: Mr.Nags ಜೊತೆ ಶಿವಣ್ಣನ 'ಹೊಡಿ ಮಗಾ..' ಸಾಂಗ್‌ ಹಾಡಿದ ಮ್ಯಾಕ್ಸ್‌ವೆಲ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.