'ಕಿನ್ನರಿ', 'ಕನ್ನಡತಿ' ಧಾರಾವಾಹಿ ನಾಯಕ ಕಿರಣ್ ರಾಜ್ ಆ್ಯಕ್ಟಿಂಗ್ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. ಇದೀಗ ಅವರು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸರ ಸಹಯೋಗದೊಂದಿಗೆ ಜಾಗೃತಿ ವಿಡಿಯೋವೊಂದನ್ನು ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಬ್ಯಾಂಕ್ ಖಾತೆಯ ಮಾಹಿತಿ ಕೇಳಲು ಎಲ್ಲರಿಗೂ ಅನೇಕ ಕರೆಗಳು ಬಂದಿರುತ್ತವೆ. ಅವು ನಮ್ಮನ್ನು ಟ್ಯ್ರಾಪ್ ಮಾಡುತ್ತವೆ. ಯಾವುದೇ ಬ್ಯಾಂಕ್ ಆಗಲಿ ಯುಪಿಐ ಐಡಿ, ಕ್ಯೂ ಆರ್ ಕೋಡ್ , ಒಟಿಪಿಯಂತಹ ನಮ್ಮ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ. ನೀವು ಇಂತಹ ವ್ಯಕ್ತಿಗಳಿಂದ ಮೋಸಕ್ಕೊಳಗಾಗಿದ್ದರೆ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿ. ಇದುವರೆಗೂ 50 ಸಾವಿರ ಸೈಬರ್ ಕ್ರೈಮ್ ಕೇಸ್ಗಳು ದಾಖಲಾಗಿದ್ದು ಬೆಂಗಳೂರು ಸೈಬರ್ ಕ್ರೈಮ್ ಪೋಲಿಸರು ಹಲವು ವಂಚಕರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತ್ಯೇಕ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಸ್ಥಾಪನೆಯಾಗಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ವಿಷಯ ಎಂದು ಕಿರಣ್ ರಾಜ್ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಆನ್ಲೈನ್ನಲ್ಲಿ ನೀವು ಹಣ ಪಾವತಿಸುವಾಗ ಎಚ್ಚರದಿಂದಿರಿ. ಒಂದು ವೇಳೆ ಪಾವತಿಸುವ ಮೊದಲು ನಿಮಗೆ ಸಂದೇಹ ಇದ್ದರೆ ಗ್ರಾಹಕರ ವೇದಿಕೆಗೆ ಕರೆ ಮಾಡಿ ನಿಮ್ಮ ಸಂದೇಹ ನಿವಾರಿಸಿಕೊಳ್ಳಿ. ನಂತರವೇ ಮುಂದುವರಿಯಿರಿ ಎಂದು ಕಿರಣ್ ಜನರಿಗೆ ಸಂದೇಶ ನೀಡಿದ್ದಾರೆ.