ನೀವು ಐಪಿಎಲ್ ಕೇಳಿದ್ದೀರ ಆದರೆ ವೈಪಿಎಲ್ ಕೇಳಿದ್ದೀರ..? ಈಗ ವೈಪಿಎಲ್ ಪಂದ್ಯಾವಳಿ ಕೂಡಾ ನಡೆಯುತ್ತಿವೆ. ಅಂದರೆ ಯಜಮಾನ ಪ್ರಿಮಿಯರ್ ಲೀಗ್. ಹೌದು, ಇದನ್ನು ಆಯೋಜಿಸುತ್ತಿರುವವರು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.
![Yajamana Premier League](https://etvbharatimages.akamaized.net/etvbharat/prod-images/sneha-loka-bharathi-shiv-offering-petals-to-dr-vishnu-portrait-20141584671083025-4_2003email_1584671094_881.jpg)
ಈಗಾಗಲೇ ವೈಪಿಎಲ್ ಪಂದ್ಯಾವಳಿಗಳು ಆರಂಭವಾಗಬೇಕಿತ್ತು. ಆದರೆ ಕೊರೊನಾ ಭಯದಿಂದ ಎಲ್ಲೆಡೆ ಬಿಗಿ ಬಂದೋಬಸ್ತ್ ಇರುವುದರಿಂದ ಏಪ್ರಿಲ್ನಲ್ಲಿ ಈ ಪಂದ್ಯಾವಳಿ ನಡೆಯುವ ಸಾಧ್ಯತೆ ಇದೆ. ಡಾ. ವಿಷ್ಣುವರ್ಧನ್ ಇದ್ದಾಗ ‘ಸ್ನೇಹ ಲೋಕ’ ಎಂಬ ತಂಡ ಕಟ್ಟಿದ್ದರು. ಹಲವಾರು ವರ್ಷಗಳಿಂದ ಈ ಕ್ರಿಕೆಟ್ ಪಂದ್ಯಾವಳಿಗಳು ನಡೆದಿದ್ದವು. ಸ್ವತಃ ವಿಷ್ಣು, ಅಂಬರೀಶ್ ಹಾಗೂ ಇನ್ನಿತರ ಕಲಾವಿದರು ಸೇರಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರು. ಕ್ರಮೇಣ ‘ಸ್ನೇಹ ಲೋಕ’ ಸಂಗೀತ ಸಂಜೆಗೆ ಮೀಸಲಾಯಿತು. ಡಾ. ಭಾರತಿ ವಿಷ್ಣುವರ್ಧನ್ ಈಗ ಈ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿ ಆಗಿದ್ದ ಡಾ. ವಿಷ್ಣುವರ್ಧನ್ ನಟಿಸಿದ್ದ ‘ಯಜಮಾನ’ ಸೂಪರ್ ಹಿಟ್ ಆದಂತ ಸಿನಿಮಾ. ಇತ್ತೀಚಿಗೆ ದರ್ಶನ್ ಅಭಿನಯದ ‘ಯಜಮಾನ’ ಚಿತ್ರಕ್ಕೆ ಕೂಡಾ ಒಳ್ಳೆ ಪ್ರಶಂಸೆ ಪಡೆದಿತ್ತು. ಡಾ. ವಿಷ್ಣುವರ್ಧನ್ ನಮ್ಮಿಂದ ಅಗಲಿ10 ವರ್ಷಗಳು ಕಳೆದ ನಂತರ 'ಯಜಮಾನ ಪ್ರೀಮಿಯರ್ ಲೀಗ್' ಪ್ರಾರಂಭ ಆಗುತ್ತಿದೆ. ಡಾ. ವಿಷ್ಣು ಸೇನಾ ಸಮಿತಿ ಇದನ್ನು ಆಯೋಜಿಸುತ್ತಿದೆ.