ETV Bharat / sitara

ವಿಕ್ರಾಂತ್ ರೋಣನ ಜೊತೆ GR ಆಗಿ ಮಿಂಚಲಿದ್ದಾರೆ ಬಾಲಿವುಡ್ ಬೆಡಗಿ! - rona

ರೋಣ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಬಿಡುಗಡೆಗೆ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಈಗ ಚಿತ್ರ ತಂಡ ಇದೇ 31ಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್‌ ಲುಕ್ ರಿಲೀಸ್​ ಮಾಡುವುದಾಗಿ ಘೋಷಿಸಿದೆ.

vikrant rona cinema team announced for release poster
ವಿಕ್ರಾಂತ್ ರೋಣನ ಜೊತೆ ಮಿಂಚಲಿದ್ದಾರಾ ಬಾಲಿವುಡ್ ಬೆಡಗಿ!
author img

By

Published : Jul 28, 2021, 5:59 PM IST

ವಿಕ್ರಾಂತ್ ರೋಣ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಟಾಕ್ ಆಗುತ್ತಿರುವ ಚಿತ್ರ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ಆಗಿ ಅಭಿನಯಿಸುತ್ತಿರೋ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಮತ್ತು ಜಾಕ್ವೆಲಿನ್ ಕೆಮಿಸ್ಟ್ರಿಯ ಫೋಟೋಗಳು ಸಖತ್ ಸೌಂಡ್ ಮಾಡಿದ್ದು, ಇದೀಗ ರೋಣ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಪಾತ್ರದ ಮೊದಲ ಲುಕ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಇದೇ 31ಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್‌ ಲುಕ್ ರಿಲೀಸ್​ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಲುಕ್ ಹೇಗಿರುತ್ತೆ ಅನ್ನೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಈ ಚಿತ್ರಕ್ಕೆ ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ನಿರ್ಮಾಪಕ ಜಾಕ್ ಮಂಜು ಅದ್ಧೂರಿ ಬಜೆಟ್ ನಲ್ಲಿ ಈ‌ ಸಿನಿಮಾ ನಿರ್ಮಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸ ನಡೆಯುತ್ತಿದ್ದು, ಸುದೀಪ್ ಅವರ ಡಬ್ಬಿಂಗ್ ಮುಗಿದಿದೆ. 14 ಭಾಷೆಗಳಲ್ಲಿ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್, ಮಂಡರಿನ್ ಮತ್ತು ರಷ್ಯಾ ಭಾಷೆಗಳಿಗೂ ಕೂಡ ಡಬ್ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.