ETV Bharat / sitara

ವಿಜಯ್ ದೇವರಕೊಂಡ ಹೊಸ ಸಿನಿಮಾ ಪೋಸ್ಟರ್ ನೋಡಿ ಪ್ರೇಕ್ಷಕರು ಆಶ್ಚರ್ಯಪಟ್ಟಿದ್ದೇಕೆ..? - ವಿಜಯ್ ದೇವರಕೊಂಡ ಹೊಸ ಚಿತ್ರದ ಪೋಸ್ಟರ್ ರಿಲೀಸ್

'ಗೀತಗೋವಿಂದಂ' ಚಿತ್ರದಲ್ಲಿ ನಾಯಕಿ ಗೀತಾ ತಲೆಕೂದಲು ಆರಿಸಿಕೊಳ್ಳುವಾಗ ನಾಯಕ ಗೋವಿಂದ ಆಕೆಯೊಂದಿಗೆ ರೊಮ್ಯಾನ್ಸ್ ಮಾಡುವ ದೃಶ್ಯ ಪಡ್ಡೆಗಳಿಗೆ ಬಹಳ ಇಷ್ಟವಾಗಿತ್ತು. ಇದೀಗ 'ವರ್ಲ್ಡ್​​ ಫೇಮಸ್​​​ ಲವರ್​​​​​' ಸಿನಿಮಾದಲ್ಲಿ ಕೂಡಾ ಇದೇ ದೃಶ್ಯವಿದೆ.

Vijay devarakonda new movie poster
ವಿಜಯ್ ದೇವರಕೊಂಡ ಹೊಸ ಸಿನಿಮಾ ಪೋಸ್ಟರ್
author img

By

Published : Dec 13, 2019, 12:55 AM IST

ಲವರ್ ಬಾಯ್ ವಿಜಯ್ ದೇವರಕೊಂಡ ಈಗ 'ವರ್ಲ್ಡ್​​ ಫೇಮಸ್​​​ ಲವರ್​​​​​' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಐಶ್ವರ್ಯ ರಾಜೇಶ್, ವಿಜಯ್​​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಕ್ರಾಂತಿ ಮಾಧವ್ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್​​​​​ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಗೀತಗೋವಿಂದಂ' ಚಿತ್ರದಲ್ಲಿ ನಾಯಕಿ ಗೀತಾ ತಲೆಕೂದಲು ಆರಿಸಿಕೊಳ್ಳುವಾಗ ನಾಯಕ ಗೋವಿಂದ ಆಕೆಯೊಂದಿಗೆ ರೊಮ್ಯಾನ್ಸ್ ಮಾಡುವ ದೃಶ್ಯ ಪಡ್ಡೆಗಳಿಗೆ ಬಹಳ ಇಷ್ಟವಾಗಿತ್ತು.

ಪ್ರತಿ ಹುಡುಗನಿಗೂ ಇದೇ ರೀತಿಯ ಹೆಂಡತಿ ಸಿಗಬೇಕು, ಪ್ರತಿ ಹುಡುಗಿಗೂ ಗೋವಿಂದ್​ನಂತ ಪತಿ ಸಿಗಬೇಕು ಎಂದೆಲ್ಲಾ ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಇದೀಗ 'ವರ್ಲ್ಡ್​​ ಫೇಮಸ್​​​ ಲವರ್​​​​​' ಸಿನಿಮಾದಲ್ಲಿ ಕೂಡಾ ಇದೇ ದೃಶ್ಯವಿದೆ. ನಾಯಕಿ ಐಶ್ವರ್ಯ ರಾಜೇಶ್ ತಲೆಗೆ ಟವೆಲ್ ಸುತ್ತಿಕೊಂಡು ತರಕಾರಿ ಹೆಚ್ಚುವಾಗ, ನಾಯಕ ಸೀನು ರೊಮ್ಯಾನ್ಸ್ ಮಾಡುವ ದೃಶ್ಯ 'ಗೀತಗೋವಿಂದಂ' ದೃಶ್ಯವನ್ನು ನೆನಪಿಸುತ್ತದೆ. ಈ ಪೋಸ್ಟರ್ ನೋಡಿದ ಪ್ರೇಕ್ಷಕರು 'ಆಗ ಗೀತ ಜೊತೆ ಹಾಗೆ..ಈಗ ಸುವರ್ಣ ಜೊತೆ ಹೀಗೆ' ಎಂದು ವ್ಯಂಗ್ಯಭರಿತ ಪ್ರತಿಕ್ರಿಯೆಗಳನ್ನುನೀಡುವುದರ ಜೊತೆಗೆ ಈ ಫೋಸ್ಟರ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Intro:Body:

vijay devarakonda

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.