ETV Bharat / sitara

ಉಪ್ಪಿ - ಹರಿಪ್ರಿಯಾ ಲಗಾಮು ಸಿನಿಮಾ ಸೆಟ್​ನಲ್ಲಿ ಫೋಟೋಶೂಟ್​ - Actress Haripriya

ಉಪೇಂದ್ರ ಹಾಗೂ ಹರಿಪ್ರಿಯಾ ಅಭಿನಯಿಸುತ್ತಿರುವ ಲಗಾಮ್ ಚಿತ್ರದ ಸೆಟ್‌ನಲ್ಲಿ ನಡೆದಿದ್ದ ಫೋಟೊ ಶೂಟ್ ಸಂದರ್ಭದ ಸನ್ನಿವೇಶವೊಂದನ್ನು ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಉಪೇಂದ್ರ ಅಭಿನಯದ ಜನಪ್ರಿಯ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಿನ್ನೆಲೆ ಸಂಗೀತವನ್ನು ಕೂಡ ಹರಿಪ್ರಿಯಾ ಸೇರಿಸಿದ್ದಾರೆ.

lagamu-cinema
ಸಿನಿಮಾ ಸೆಟ್​ನಲ್ಲಿ ಫೋಟೋಶೂಟ್​
author img

By

Published : Jun 17, 2021, 6:15 PM IST

ಸ್ಯಾಂಡಲ್​ವುಡ್​ನಲ್ಲಿ ಮಾಸ್ ಡೈಲಾಗ್​ನಿಂದಲೇ ಸದ್ದು ಮಾಡ್ತಿರೋ ಚಿತ್ರ ಲಗಾಮ್. ರಿಯಲ್ ಸ್ಟಾರ್ ಉಪೇಂದ್ರ ಹಾಗು ಬೆಲ್ ಬಾಟಮ್ ಬೆಡಗಿ ಹರಿಪ್ರಿಯಾ ಅಭಿನಯಿಸುತ್ತಿರುವ ಚಿತ್ರವಿದು. ಕೆಲ ತಿಂಗಳ‌ ಹಿಂದೆ ಲಗಾಮ್ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿತ್ತು. ಇದೀಗ ಈ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ, ನಡೆದಿದ್ದ ಫೋಟೊ ಶೂಟ್ ಸಂದರ್ಭದ ಸನ್ನಿವೇಶವೊಂದನ್ನು ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತೆರೆಯ ಹಿಂಬದಿಯಲ್ಲಿ ಎಂಬ ಅಡಿ ಬರಹದೊಂದಿಗೆ ಹರಿಪ್ರಿಯಾ ಈ ಕಿರು ವಿಡಿಯೊ ಪೋಸ್ಟ್ ಮಾಡಿದ್ದು, ಉಪೇಂದ್ರ ಜತೆ ಸಿನಿಮಾದ ಪೋಸ್ಟರ್ ಫೋಟೊಗೆ ಹರಿಪ್ರಿಯಾ ಪೋಸ್ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೆ ಈ ವಿಡಿಯೋಗೆ ಉಪೇಂದ್ರ ಅಭಿನಯದ ಜನಪ್ರಿಯ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಿನ್ನೆಲೆ ಸಂಗೀತವನ್ನು ಕೂಡ ಹರಿಪ್ರಿಯಾ ಸೇರಿಸಿ, ಪೋಸ್ಟ್ ಮಾಡಿರೋದು ವಿಶೇಷ. ಈ ಪೋಸ್ಟ್​ಗೆ ಉಪೇಂದ್ರ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಉಪೇಂದ್ರ ಹಾಗೂ ಹರಿಪ್ರಿಯಾ ಕೆಮಿಸ್ಟ್ರಿ ಲಗಾಮ್ ಚಿತ್ರದಲ್ಲಿ ಚೆನ್ನಾಗಿ ವರ್ಕ್ ಔಟ್ ಆಗಲಿದೆ ಅಂತಾ ನಿರ್ದೇಶಕ ಕೆ.ಮಾದೇಶ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.