ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲಗಳ ಆಗರವಾಗಿ ಬದಲಾಗುತ್ತಿದೆ. ಇದಕ್ಕೆ ಕಾರಣ ಮನೆಯ ಸದಸ್ಯರೆಲ್ಲ ಒಬ್ಬೊಬ್ಬರಾಗಿಯೇ ಕಡಿಮೆಯಾಗುತ್ತಾ ದೊಡ್ಡಮನೆ ಬರಿದಾಗುತ್ತಿದೆ. ಇದರೊಂದಿಗೆ ಬಿಗ್ ಬಾಸ್ ಶೋ ನೋಡುವ ವೀಕ್ಷಕರಲ್ಲಿಯೂ ಕುತೂಹಲ ಇಮ್ಮಡಿಯಾಗುತ್ತಿದೆ.
ಕಳೆದ ವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಪಲ್ಪ ಕೀಟಲೆ, ಸ್ಪಲ್ಪ ತಮಾಷೆ ಹಾಗೇ ಕೊನೆಯಲ್ಲಿ ಕಣ್ಣೀರು. ಪ್ರತಿ ವಾರದಂತೆ ಕಳೆದ ವಾರವೂ ನಡೆಯಿತು. ಕಳೆದ ವಾರ ನಡೆದಿದ್ದ ಎಲಿಮೆನೇಟ್ನಲ್ಲಿ ದೊಡ್ಡಮನೆಯಲ್ಲಿ ಹಿರಿಯರಾಗಿದ್ದ ರಾಜು ತಾಳಿಕೋಟೆ ಮನೆಯಿಂದ ಹೊರ ನಡೆದಿದ್ದರು. ಆದರೆ, ಈ ವಾರ ಯಾರು ಹೊರ ಹೋಗುತ್ತಾರೆ ಎಂಬ ಕಾತರ ಎಲ್ಲರಲ್ಲೂ ಮನೆ ಮಾಡಿದೆ. ಈ ಕುತೂಹಲವನ್ನು ತಣಿಸುವಂತೆ ಕೆಲ ಸುದ್ದಿ ಹರಿದಾಡುತ್ತಿವೆ.
![this week harish eliminate](https://etvbharatimages.akamaized.net/etvbharat/prod-images/5455815_thumb7.jpg)
ಈ ವಾರದಲ್ಲಿ ಜನರು ಮಾಡಿದ್ದ ವೋಟಿಂಗ್ ಬಗ್ಗೆ ಕೆಲ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಈ ವಾರ ದೀಪಿಕಾ ದಾಸ್ ಹೆಚ್ಚ ವೋಟ್ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಹಾಗೆ ಕುರಿ ಪ್ರತಾಪ್ 2ನೇ ಸ್ಥಾನದಲ್ಲಿದ್ದಾರೆ. ಕಡಿಮೆ ವೋಟ್ ಪಡೆದವರಲ್ಲಿ ಕಿಶನ್ ಮತ್ತು ಹರೀಶ್ ರಾಜ್ ಇದ್ದಾರೆ. ಇವರುಗಳಲ್ಲಿ ಕಿಶನ್ಗೆ ಹೋಲಿಸಿದರೆ ಹರೀಶ್ ರಾಜ್ ಅತಿ ಕಡಿಮೆ ವೋಟ್ಗಳನ್ನು ಗಳಿಸಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇದ್ರಿಂದಾಗಿ ಹರೀಶ್ ಮನೆಯಿಂದ ಹೊರ ನಡೆಯುವ ಸಾಧ್ಯತೆಗಳಿವೆ.
![this week harish eliminate](https://etvbharatimages.akamaized.net/etvbharat/prod-images/5455815_thumb6.jpg)
ಕಳೆದ ವಾರ ಮನೆಯ ಸದಸ್ಯರಿಗೆ ಮುಂದಿನ ವಾರ ಯಾರು ಹೊರ ಹೋಗುತ್ತಾರೆ ಎಂದು ಕಿಚ್ಚ ಕೇಳಿದ್ದಾಗ ಬಹುಪಾಲು ಎಲ್ಲರೂ ಚೈತ್ರಾ ಕೋಟೂರ್ ಎಂದು ಹೇಳಿದ್ರು. ಆದರೆ, ಇಲ್ಲಿ ನಡೆದಿರುವುದೇ ಬೇರೆಯಾಗಿದೆ. ಚೈತ್ರಾ ಬದಲು ಹರೀಶ್ ಮನೆಯಿಂದ ಹೊರ ನಡೆಯುತ್ತಿದ್ದಾರೆ ಎನ್ನಲಾಗ್ತಿದೆ.
ಬಿಗ್ ಬಾಸ್ ಮನೆಯಲ್ಲಿರುವ 11 ಮಂದಿ ಸದ್ಯರಿಗೆ ಇದು 10ನೇ ವಾರ. ಇವರಲ್ಲಿ ಬರೋಬ್ಬರಿ ಏಳು ಮಂದಿ ನಾಮಿನೇಟ್ ಆಗಿದ್ರು.