ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕೆಲವು ರಿಯಾಲಿಟಿ ಶೋಗಳು ಪುನರಾರಂಭವಾಗಿವೆ. ಇನ್ನೂ ಕೆಲವು ಸಿದ್ಧತೆಯಲ್ಲಿ ತೊಡಗಿವೆ. ಮತ್ತೆ ಕೆಲವು ವಾಹಿನಿಗಳಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಆರಂಭವಾಗುತ್ತಿವೆ. ಈಗಾಗಲೇ ಬಿಗ್ ಬಾಸ್’ನಂತಹ ದೊಡ್ಡ ರಿಯಾಲಿಟಿ ಶೋ ಅನ್ನು ಪುನಾರಂಭ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ, ಇದೀಗ ಮತ್ತೊಂದು ರಿಯಾಲಿಟಿ ಗೇಮ್ ಶೋ ಆರಂಭಿಸಲು ಸಿದ್ಧತೆ ನಡೆಸಿದೆ.
![The new reality game show has just begun, you know who will be](https://etvbharatimages.akamaized.net/etvbharat/prod-images/kn-bng-02-rajarani-realityshow-video-photo-ka10018_16062021173506_1606f_1623845106_968.jpg)
![The new reality game show has just begun, you know who will be](https://etvbharatimages.akamaized.net/etvbharat/prod-images/kn-bng-02-rajarani-realityshow-video-photo-ka10018_16062021173506_1606f_1623845106_109.jpg)
ಈ ರಿಯಾಲಿಟಿ ಗೇಮ್ ಶೋನ ಹೆಸರು ರಾಜ-ರಾಣಿ. ಇದರಲ್ಲಿ ಮೆಂಟಲ್ ಹಾಗೂ ಫಿಸಿಕಲ್ ಟಾಸ್ಕ್ ಇರಲಿದೆ. ಕೊರೊನಾ ಪ್ರಕರಣಗಳು ಕಡಿಮೆಯಾದ ಮೇಲೆ ಶೋನ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ರಿಯಾಲಿಟಿ ಶೋನಲ್ಲಿ ರಿಯಲ್ ಸೆಲೆಬ್ರಿಟಿ ಜೋಡಿಗಳು ಇರಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ನೇಹಾ ಮತ್ತು ಚಂದು ಹಾಗೂ ನಿವೇದಿತಾ-ಚಂದನ್ ಜೋಡಿಯ ವಿಡಿಯೋ ಮಾಡಿ, ಪ್ರೊಮೊ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ವಾಹಿನಿಯು ಇತರೆ ಸೆಲೆಬ್ರಿಟಿ ಕಪಲ್ಸ್ ಇರುವ ಪ್ರೊಮೊ ವಿಡಿಯೋಗಳನ್ನು ಬಿಡುಗಡೆ ಮಾಡಲಿದೆ.
ಸದ್ಯ ನೇಹಾ ಮತ್ತು ಚಂದು ಹಾಗೂ ನಿವೇದಿತಾ-ಚಂದನ್ ಜೋಡಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಬಹುದು. ಪ್ರೊಮೊಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಶೋ ನೋಡಲು ಪ್ರತಿಯೊಬ್ಬರೂ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಂದನ್- ಕವಿತಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.