ETV Bharat / sitara

'ಪುನೀತ್ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ': ತೆಲುಗು ನಟ ಸಿದ್ಧಾರ್ಥ್ ಕಣ್ಣೀರು - ಪುನೀತ್ ಬಗ್ಗೆ ನಟ ಸಿದ್ದಾರ್ಥ್​ ಮಾತು

ಪುನೀತ್​ ತುಂಬಾ ಸರಳ ವ್ಯಕ್ತಿ. ವೆರಿ ಟ್ಯಾಲೆಂಟೆಡ್, ಅವರು ಯಾವಾಗಲೂ ಜೀವಂತವಾಗಿರುತ್ತಾರೆ ಎಂದು ತೆಲುಗು ನಟ ಸಿದ್ಧಾರ್ಥ್ ಭಾವುಕರಾದರು.

telugu-acter-siddarth
ತೆಲುಗು ನಟ ಸಿದ್ಧಾರ್ಥ್
author img

By

Published : Nov 8, 2021, 5:33 PM IST

ಬೆಂಗಳೂರು: ಈಗಲೂ ನಂಬೋಕೆ ಆಗುತ್ತಿಲ್ಲ. ಪುನೀತ್ ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ ಎಂದು ಹೇಳಿ ತೆಲುಗು ನಟ ಸಿದ್ಧಾರ್ಥ್ ಕಣ್ಣೀರಿಟ್ಟರು.

ಅಪ್ಪು ಅವರ 11 ದಿನದ ಕಾರ್ಯಕ್ಕೆ ಆಗಮಿಸಿದ್ದ ಅವರು, ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

'ಪುನೀತ್​ ತುಂಬಾ ಸರಳ ವ್ಯಕ್ತಿ. ವೆರಿ ಟ್ಯಾಲೆಂಟೆಡ್, ಅವರು ಯಾವಾಗಲೂ ಜೀವಂತವಾಗಿರುತ್ತಾರೆ. ಯುವಜನತೆಗೆ ಸದಾ ಸಪೋರ್ಟ್ ಮಾಡುತ್ತಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ' ಎಂದು ಕೊಂಡಾಡಿದರು.

'ಹಲವು ಬಾರಿ ನಾನು ಅವರನ್ನು ಭೇಟಿಯಾದಾಗ, ಉತ್ತಮ ವಿಚಾರಗಳನ್ನೇ ಹೇಳುತ್ತಿದ್ದರು. ಬೇರೆಯವರ ಬಗ್ಗೆ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದರು' ಎಂದು ಭಾವುಕರಾದರು.

ಇದನ್ನೂ ಓದಿ: ಪುನೀತ್​ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.