ಪರಭಾಷೆಯಲ್ಲಿ ಇರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿ ಬೇಡ ಅಂತಾ ಅರವತ್ತು ಎಪ್ಪತ್ತು ದಶಕದಿಂದಲೂ ಹೋರಾಟ, ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಇನ್ನೊಂದು ಕಡೆ ಸೋಷಿಯಲ್ ಮೀಡಿಯಾದಲ್ಲೂ ಪರ ವಿರೋಧದ ಚರ್ಚೆಗಳು ನಡೆಯುತ್ತಾ ಇವೆ. ಆದ್ರೆ ನಾಲ್ಕು ವರ್ಷದ ಹಿಂದೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳು ಬೇಡ ಅಂತಾ ಹೋರಾಟ ಮಾಡಿದ ಸ್ಟಾರ್ ನಟರು, ಈಗ ನಿಧಾನಕ್ಕೆ ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಬಂದರೆ ನಮ್ಮ ಭಾಷೆ ಬೆಳೆಯುತ್ತೆ ಎನ್ನುತ್ತಿದ್ದಾರೆ.
ಇದೀಗ ಕಿಚ್ಚ ಸುದೀಪ್ ಕೂಡ ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಸಿನಿಮಾಗಳು ಬಂದರೆ ನಮ್ಮ ಭಾಷೆ ಬೆಳೆಯುತ್ತೆ ಅಂತಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯಿಸಿರೋ ಕಿಚ್ಚ ಸುದೀಪ್, ದಬಾಂಗ್ 3 ಡಬ್ಬಿಂಗ್ ಸಿನಿಮಾ ಅಲ್ಲಾ, ಇದು ಕನ್ನಡ ಸಿನಿಮಾ ಅಂತಾ ಹೇಳಿದ್ದಾರೆ.
ಬೇರೆ ಭಾಷೆಯ ಚಿತ್ರಗಳು ಡಬ್ಬಿಂಗ್ ಆಗೋದ್ರಿಂದ ನಮ್ಮ ಕನ್ನಡ ಭಾಷೆ ಬೆಳೆಯುತ್ತೆ. ಹೀಗಾಗಿ ದಬಾಂಗ್ 3 ಸಿನಿಮಾವನ್ನ ಕನ್ನಡ ಸಿನಿಮಾ ಅಂತಾ ತಿಳಿದು ಸಿನಿಮಾ ನೋಡಿ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ರು.
ಇನ್ನು ದಬಾಂಗ್ 3 ಸಿನಿಮಾದಲ್ಲಿ ಕನ್ನಡ ಡಬ್ಬಿಂಗ್ಅನ್ನು ಸ್ವತಃ ಕಿಚ್ಚ ಸುದೀಪ್ ಮಾಡಿರೋದು ವಿಶೇಷ. ಹಾಗೇ ಸಲ್ಮಾನ್ ಖಾನ್ ಕೂಡ ಎಲ್ಲಾ ಸಿನಿಮಾಗಳನ್ನ ನೋಡುವ ಮೂಲಕ ಆಯಾ ಭಾಷೆಯನ್ನ ಬೆಳೆಸಬೇಕು ಅಂತಾ ಹೇಳಿದ್ರು.