ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ಮುಗಿಸಿ, ಫ್ಯಾಂಟಮ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಕಿಚ್ಚ ತಮ್ಮ ಅಭಿಮಾನಿಗಳಿಗೆ ಹೊಸ ಲುಕ್ನಲ್ಲಿ ದರ್ಶನ್ ನೀಡಿದ್ದಾರೆ. ಸುದೀಪ್ ತಮ್ಮ ಬಾಲ್ಯದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ..? ಸುದೀಪ್ ತಮ್ಮ ಬಾಲ್ಯದ ಪೋಟೋ ಹಾಗೂ ಈಗಿನ ಪೋಟೋ ಎರಡನ್ನೂ ಒಟ್ಟಿಗೆ ಎಡಿಟ್ ಮಾಡಲಾಗಿದೆ. ಇದನ್ನು ನೋಡಿದರೆ ಸುದೀಪ್ ಯಾವುದೋ ಹುಡುಗನೊಂದಿಗೆ ಫೋಸ್ ಕೊಟ್ಟಿರುವ ರೀತಿ ಕಾಣುತ್ತದೆ.
ಅಸಲಿಗೆ ಈ ಮುದ್ದಾದ ಫೋಟೋವನ್ನು ಸುದೀಪ್ ಅಭಿಮಾನಿಯೊಬ್ಬರು ಕಿಚ್ಚನಿಗೆ ಉಡುಗೊರೆ ನೀಡಿದ್ದಾರೆ. ಇದನ್ನು ಕಿಚ್ಚ ಸೋಷಿಯಲ್ ಮೀಡಿಯಾಗೆ ಹಂಚಿಕೊಂಡು ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ಫೋಟೋವನ್ನು ಇತರ ಅಭಿಮಾನಿಗಳು ಕೂಡಾ ಮೆಚ್ಚಿ ಲೈಕ್ಸ್, ಕಮೆಂಟ್ ಮಾಡಿದ್ದಾರೆ.