ETV Bharat / sitara

ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದ ಸಿದ್ದಾರ್ಥ್ ಮಲ್ಹೋತ್ರಾ: ಯುವ ನಟ ಮಾಡಿದ್ದೇನು ಗೊತ್ತಾ? - ನಟ ಕೃತಿ ಸನನ್

ನಿನ್ನೆ ರಾತ್ರಿ ಮುಂಬೈನಲ್ಲಿ ಹಾಲ್ ಆಫ್ ಫೇಮ್ ಅವಾರ್ಡ್ಸ್ - 2022 ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ವೇಳೆ, ಬಾಲಿವುಡ್​ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ನಟಿ ಕೃತಿ ಸನನ್ ಉಡುಪು ಎತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿದ್ದಾರ್ಥ್ ಮಲ್ಹೋತ್ರಾ
ಸಿದ್ದಾರ್ಥ್ ಮಲ್ಹೋತ್ರಾ
author img

By

Published : Mar 14, 2022, 11:26 AM IST

ಮುಂಬೈ: ಸಿದ್ದಾರ್ಥ್ ಮಲ್ಹೋತ್ರಾ ಹಿಂದಿ ಚಲನ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯುವ ತಾರೆಯರಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದು, ಲಕ್ಷಾಂತರ ಜನರ ಹೃದಯವನ್ನೂ ಗೆದ್ದಿದ್ದಾರೆ.

ನಿನ್ನೆ ರಾತ್ರಿ ಮುಂಬೈನಲ್ಲಿ ಹಾಲ್ ಆಫ್ ಫೇಮ್ ಅವಾರ್ಡ್ಸ್ - 2022 ಸಮಾರಂಭ ಅದ್ಧೂರಿಯಾಗಿ ನಡೆಯಿತು. ರೆಡ್ ಕಾರ್ಪೆಟ್ ಮೇಲೆ ಪೋಸ್ ಕೊಡಲು ನಟ ಕೃತಿ ಸನನ್ ಆಗಮಿಸಿದ್ದರು. ಕೃತಿ ನೇರಳ ಬಣ್ಣದ ಉದ್ದನೆಯ ಉಡುಪು ಧರಿಸಿದ್ದು, ನಟಿಯ ಡ್ರೆಸ್​ ಅನ್ನ ಸಿದ್ದಾರ್ಥ್ ಎತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇವರ ವಿಡಿಯೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, "ಸಿದ್ಧಾರ್ಥ್ ಖಂಡಿತವಾಗಿಯೂ ರತ್ನ. ಮಾಧ್ಯಮಗಳು ಕೃತಿ ಅವರ ಫೋಟೋಗಳನ್ನು ಕ್ಲಿಕ್ ಮಾಡುವಾಗ ಸಿದ್ಧಾರ್ಥ್ ಗೌನ್ ಹಿಡಿದ ರೀತಿಯನ್ನ ನಾವು ಗೌರವಿಸುತ್ತೇವೆ ಎಂದರೆ, ಇನ್ನೂ ಕೆಲವರು ಸಿದ್ದಾರ್ಥ್ ಮಲ್ಹೋತ್ರಾ 'ಸಂಭಾವಿತ ವ್ಯಕ್ತಿ' ಎಂದು ಶ್ಲಾಘಿಸಿದ್ದಾರೆ.

ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸಿದ್ದಾರ್ಥ್ ಮಲ್ಹೋತ್ರಾ, ನಂತರ ಅನೇಕ ಚಿತ್ರಗಳಲ್ಲಿ ತಮ್ಮ ನಟನೆ ಮತ್ತು ಲುಕ್‌ನಿಂದ ಸಾಕಷ್ಟು ಫ್ಯಾನ್‌ ಫಾಲೋಯಿಂಗ್‌ ಗಳಿಸಿದ್ದಾರೆ.

‘ಹಸೀ ತೋ ಫಾಸೀ’,‘ಏಕ್ ವಿಲನ್’, ‘ಕಪೂರ್ ಆ್ಯಂಡ್ ಸನ್ಸ್’, ‘ಬಾರ್ ಬಾರ್ ದೇಖೋ’, ‘ಎ ಜಂಟಲ್ ಮ್ಯಾನ್, ಇತ್ತೆಫಾಕ್’, ‘ಆಯಾರಿ’, ‘ಜಬರಿಯಾ ಜೋಡಿ’ ಮತ್ತು ‘ಮಾರ್ಜಾವಾನ್’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಿದ್ದಾರ್ಥ್ ಅಭಿಯನದ 'ಮಿಷನ್ ಮಜ್ನು' ಸಿನಿಮಾ ಜೂನ್ 10, 2022 ರಂದು ಬಿಡುಗಡೆಯಾಗಲಿದ್ದು, ಶಂತನು ಬಾಗ್ಚಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ಲಾಕ್​ ಅಪ್' ಶೋನಲ್ಲಿ ಕಂಗನಾ ​ಕಮಾಲ್​.. ಯುನಿಕ್​​​ ಸ್ಟೈಲ್​ನಲ್ಲಿ ಫೋಟೋ ಝಲಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.