ಕನ್ನಡ ಹಬ್ಬವನ್ನು ರಾಜ್ಯದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಮಾತ್ರ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ತಮ್ಮ ಕನ್ನಡಾಭಿಮಾನದಿಂದ ಕನ್ನಡಿಗರ ಮನಗೆದ್ದಿರುವ ದೊಡ್ಮನೆ ಮಗ ಶಿವರಾಜ್ ಕುಮಾರ್ ಅವರು, ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.
ನಾಡಹಬ್ಬದಲ್ಲಿ ಅಪ್ಪಾಜಿ ಹಾಡುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ, ಅಪ್ಪಾಜಿಯನ್ನು ದೇವರ ರೀತಿಯಲ್ಲಿ ಪೂಜಿಸುವ ಅಭಿಮಾನಿಗಳು, ಅಪ್ಪಾಜಿಯ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಇನ್ನೂ ಮೆಚ್ಚಿ ನಮ್ಮ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಶಿವಣ್ಣ ಅಭಿಮಾನಿ ದೇವರುಗಳಿಗೆ ವಂದಿಸಿದರು.